ಅಕ್ರಮ ಗೋಹತ್ಯಾ ಕೇಸ್ ಫೈಲ್: ಆರೋಪಿಯ ಮನೆ ಆವರಣ ಜಪ್ತಿ
ಅಕ್ರಮ ಗೋಹತ್ಯಾ ಕೇಸ್ ಗೆ ಸಂಬಂಧಿಸಿದಂತೆ ಮನೆ ಆವರಣವನ್ನು ಜಪ್ತಿ ಮಾಡಿದ ಘಟನೆ ಬೆಳ್ತಂಗಡಿ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ನಡೆದಿದೆ. ಮನೆಯೊಂದರ ಆವರಣದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿದ್ದ ಹೆಚ್ ಅಬ್ದುಲ್ ರಹಿಮಾನ್ ಎಂಬವರ ಮನೆಯ ಬಳಿ ಹೋದಾಗ, ಮನೆಯ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದಾರೆ. ಸ್ಥಳವನ್ನು ಪರಿಶೀಲಿಸಿದಾಗ ಗೋಮಾಂಸವನ್ನು ಪ್ಯಾಕೆಟ್ ಮಾಡಿಡಲಾಗಿದ್ದು, ಸಮೀಪದಲ್ಲಿದ್ದ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು…