Avatar

NAMMA MEDIA 24X7

ಬ್ರಹ್ಮರಕೋಟ್ಲು ಬಳಿ ಭೀಕರ ಅಪಘಾತ – ಪಿಕಪ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಬೈಕ್ ಸವಾರನೋರ್ವ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಬ್ರಹ್ಮರಕೋಟ್ಲು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಮರ್ದೊಳಿ ನಿವಾಸಿ ಸಂತೋಷ್ ಎಂಬವರು ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಅವರು ಬೆಳಿಗ್ಗೆ ಮನೆಯಿಂದ ಮಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬ್ರಹ್ಮರಕೋಟ್ಲು ಎಂಬಲ್ಲಿ ಟಯರ್ ಬ್ಲಾಸ್ಟ್ ಆಗಿದ್ದ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ…

Read More

ಸಿಬ ಮೆಹಂದಿ ಆಯೋಜಿಸಿದ ಮೆಹಂದಿ ಹಾಕುವ ಸ್ಪರ್ಧೆ.ಮಕ್ಕಳ ಕೈಗಳಲ್ಲಿ ಅರಳಿದ ಕಲಾತ್ಮಕ ವಿನ್ಯಾಸಗಳು

ಉಪ್ಪಳ ಬಪ್ಪಾಯತೊಟ್ಟಿಯ ಶೇಖ್ ಅಖ್ತರ್ ಕಳೆದ ನಲವತ್ತು ವರ್ಷಗಳಿಂದ ಮೆಹಂದಿ ವ್ಯಾಪಾರ ನಡೆಸುತ್ತಿದ್ದಾರೆ. ರಮಝಾನ್ ಪ್ರಯುಕ್ತ ಪೆರುನಾಳ್ ಮಾರುಕಟ್ಟೆಗೆ ಮುನ್ನೋಟವಾಗಿ ಸ್ಥಳೀಯ ಮಕ್ಕಳಿಗಾಗಿ ಆಯೋಜಿಸಿದ ಮೈಲಾಂಜಿ ಹಾಕುವ ಸ್ಪರ್ಧೆ ವಿಶೇಷ ಗಮನ ಸೆಳೆಯಿತು.ಕಳೆದ 28 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಸ್ಪರ್ಧೆಯನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ಆರಂಭದಲ್ಲಿ ಹತ್ತು ಮಕ್ಕಳಿಗಿಂತ ಕಡಿಮೆ ಸಂಖ್ಯೆಯಲ್ಲಿ ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಬಾರಿ ಐವತ್ತಕ್ಕೂ ಹೆಚ್ಚು ಮಕ್ಕಳು ಸಿಬ ಮೆಹಂದಿಯ ಮೈಲಾಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಭಾನುವಾರ ಬೆಳಗ್ಗೆ 9 ಗಂಟೆಗೆ…

Read More

ರೆಡ್ ಕ್ರಾಸ್ ದ.ಕ.ಜಿಲ್ಲಾ ಆಡಳಿತ ಮಂಡಳಿ ಚುನಾವಣೆ-ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡಕ್ಕೆ ಜಯ

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡ ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು. ಸಿಎ ಶಾಂತಾರಾಮ ಶೆಟ್ಟಿ -1005, ಡಾ.ಸುಮನ.ಬಿ.-876, ಡಾ.ಸತೀಶ್ ರಾವ್-870,ಡಾ. ಬಿ.ಸಚ್ಚಿದಾನಂದ ರೈ-868, ರಾಘವೇಂದ್ರ ರಾವ್- 844,ಪುಷ್ಪರಾಜ್ ಜೈನ್-835, ಪಿ.ಬಿ.ಹರಿಪ್ರಸಾದ್…

Read More

ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಂಡಿದ್ದರೂ ಉದ್ಘಾಟನೆ ಇಲ್ಲ – ಕುಂಬಳೆ ಮೀನು ಮಾರುಕಟ್ಟೆ ಕಟ್ಟಡ ಬಳಕೆಗೆ ಸಿಗದೆ ವ್ಯಾಪಾರಿಗಳಿಗೆ ಸಂಕಷ್ಟ

ಕುಂಬಳೆ : ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಪೂರ್ಣಗೊಂಡ ಕುಂಬಳೆ ಮೀನು ಮಾರುಕಟ್ಟೆ ಕಟ್ಟಡವನ್ನು ಇನ್ನೂ ಸಾರ್ವಜನಿಕರಿಗೆ ತೆರೆಯಲು ಕ್ರಮ ಕೈಗೊಳ್ಳಲಾಗಿಲ್ಲ.ಹೊಸ ಪಂಚಾಯತ್ ಆಡಳಿತ ಸಮಿತಿ ಅಧಿಕಾರ ಸ್ವೀಕರಿಸಿದ ಬಳಿಕ ಉದ್ಘಾಟನೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮೀನು ಮಾರುಕಟ್ಟೆ, ವಿಧಾನಸಭಾ ಚುನಾವಣೆಯ ಆಚರಣಾ ಸಂಹಿತೆ ಜಾರಿಯಾದರೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಆತಂಕ ಮೀನು ಮಾರಾಟ ಕಾರ್ಮಿಕರಲ್ಲಿ ಮೂಡಿದೆ. ಮೀನು ಮಾರಾಟ ಮಾತ್ರವಲ್ಲದೆ ಮಾಂಸ, ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೂ ಕಟ್ಟಡದಲ್ಲಿ ವ್ಯವಸ್ಥೆ…

Read More

ತೊಕ್ಕೊಟ್ಟಿ ನಲ್ಲಿ ದುರ್ಘಟನೆ: ವಿದ್ಯುತ್ ಆಘಾತಕ್ಕೆ ಯುವಕ ಬಲಿ

ಉಳ್ಳಾಲ: ಫೆ-23: ನೂತನ ವಸ್ತ್ರಮಳಿಗೆಯೊಂದನ್ನ ತೆರೆಯುವ ಸಂಭ್ರಮದಲ್ಲಿದ್ದ ಯುವಕನೋರ್ವ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತ ಪಟ್ಟಿರುವ ದಾರುಣ ಘಟನೆ ತೊಕ್ಕೊಟ್ಟುವಿನ ಹೃದಯಭಾಗದಲ್ಲಿ ನಡೆದಿದೆ. ಮೂಲತ: ಪಜೀರು ಬೆಂಗೋಡಿ ಪದವು ನಿವಾಸಿ,ಸದ್ರಿ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಸಲ್ಮಾನ್ ಫಾರಿಶ್(20) ಮೃತ ಯುವಕ.ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ವಾಣಿಜ್ಯ ಮಳಿಗೆಯಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ(ಝೀರೋ) ವಸ್ತ್ರ ಮಳಿಗೆಯೊಂದು ಇದೇ ಶುಕ್ರವಾರದಂದು ಶುಭಾರಂಭಗೊಳ್ಳಲಿದ್ದು, ಆ ನಿಟ್ಟಿನಲ್ಲಿ ನೂತನ ಮಳಿಗೆಯ ಒಳ ವಿನ್ಯಾಸ ಕಾಮಗಾರಿ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಮಳಿಗೆಯ ಒಳಗಡೆ…

Read More

ಉಡುಪಿ: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹುಚ್ಚಾಟ ಮೆರೆದ ಯುವಕ

ಉಡುಪಿ: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹುಚ್ಚಾಟ ಮೆರೆದ ಯುವಕನನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಕಲ್ಸಂಕ ಜಂಕ್ಷನ್ ನಲ್ಲಿ ನಡೆದಿದೆ. ಸದಾ ಸಂಚಾರದಟ್ಟನೆಯಿಂದ ಕೂಡಿರುವ ಜಂಕ್ಷನ್‌ನಲ್ಲಿ ಯುವಕ ಹುಚ್ಚಾಟ ಮೆರೆದಿದ್ದಾನೆ. ಭಯದ ವಾತಾವರಣ ಸೃಷ್ಟಿಸಿ ಟ್ರಾಫಿಕ್ ಸಿಬ್ಬಂದಿಗಳ ಕರ್ತವ್ಯಕ್ಕೂ‌ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು ಆತನನ್ನು ರಕ್ಷಣೆ ಮಾಡಿದ್ದಾರೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡು ಸಹಕರಿಸಿದರು. ಈತ ಈ ಹಿಂದೆಯೂ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು‌ ಬಂದು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಳ್ಳುತ್ತೇನೆಂದು ಬೊಬ್ಬೆ…

Read More

ಮಾ. 28, 29: ಗಂಜಿಮಠದಲ್ಲಿ ರಾಷ್ಟ್ರಮಟ್ಟದ ಆಫ್‌ರೋಡ್ ರಾಯಲಿ ಸ್ಪರ್ಧೆಗೆ ವಿವಿಧ ರಾಜ್ಯಗಳ ಸ್ಪರ್ಧಾರ್ಥಿಗಳಿಗೆ ಅಹ್ವಾನ …!

ಮಂಗಳೂರು: ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರೈಸಿರುವ ಮಂಗಳೂರಿನ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಐಎಂಎಸ್‌ಸಿ), ತನ್ನ 400ನೇ ಐಎಂಎಸ್‌ಸಿ ಆಫ್‌ರೋಡ್ ಟ್ರೋಫಿ-2026 ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಮಾ. 28 ಮತ್ತು 29ರಂದು ನಗರದ ಗಂಜಿಮಠದ ಒಡೂರು ಫಾರ್ಮ್ನಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಸಮಿತಿಯ ಕಾರ್ಯದರ್ಶಿಗಳಾದ ಅಶ್ವಿನ್ ನಾಕ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಈ ಬಾರಿ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ…

Read More

ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ರಸ್ತೆ ದುರಸ್ಥಿ ಇಲ್ಲದೆ ಸಾರ್ವಜನಿಕರ ಸಂಕಷ್ಟ

ರಾಜ್ಯ ಹೆದ್ದಾರಿಯಿಂದ ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ಸುಮಾರು ನೂರು ಮೀಟರ್ ರಸ್ತೆ ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ.ತೀವ್ರ ಏರಿಳಿತ ಇರುವ ಈ ರಸ್ತೆ ಸಂಪೂರ್ಣವಾಗಿ ಕುಸಿದು ಹೋಗಿರುವುದರಿಂದ ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳು ಹಾಗೂ ಪೊಲೀಸ್ ವಾಹನಗಳು ಕಷ್ಟಪಟ್ಟು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಸಾರ್ವಜನಿಕ ಕಾರ್ಯಕರ್ತರು ಹಾಗೂ ರಾಜಕೀಯ ನಾಯಕರು ನಿರಂತರವಾಗಿ ಈ ಮಾರ್ಗವನ್ನು ಬಳಸುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.ದಶಕಗಳ ಹಿಂದೆ ಡಾಮರ್…

Read More

ಮಾರ್ಚ್ 15ರಂದು ಕುಂಬಳೆಯಲ್ಲಿ ಟೀಮ್ ಜೋಶ್ ವಿಶ್ವಕರ್ಮ ಕ್ರಿಕೆಟ್ ಪ್ರೀಮಿಯರ್ ಲೀಗ್

ಕುಂಬಳೆ: ಟೀಮ್ ಜೋಶ್ ಕಾಸರಗೋಡುವಿನ ನೇತೃತ್ವದಲ್ಲಿ ಮಾರ್ಚ್ 15 ಆದಿತ್ಯವಾರದಂದು ಕುಂಬಳೆ ಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 25,000 ನಗದು ಹಾಗೂ ಫಲಕ, ದ್ವಿತೀಯ ಬಹುಮಾನ 15,000 ಹಾಗೂ ಫಲಕ ದೊರೆಯಲಿದೆ. ಕ್ರೀಡೆಯ ಪೂರ್ವಭಾವಿಯಾಗಿ ಸ್ಪರ್ಧಿಸುವ ತಂಡಗಳ ಹರಾಜು ಪ್ರಕ್ರಿಯೆಯು ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸುವ ಫೈರ್ ಬ್ಲ್ಯಾಸ್ಟರ್ ಮಧೂರು, ಟೀಮ್ ಶ್ಲಾಘ, ಯಂಗ್ ಸ್ಟಾರ್ಸ್ ಕಾಸರಗೋಡು,…

Read More

ಮಂಜೇಶ್ವರ ಗ್ರಾಮ ಪಂಚಾಯತ್ 2026-27 ವಾರ್ಷಿಕ ಯೋಜನೆಗೆ ಅಭಿವೃದ್ಧಿ ಸೆಮಿನಾರ್

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ವಾರ್ಷಿಕ ಯೋಜನೆ ಹಾಗೂ 14ನೇ ಹಣಕಾಸು ಆಯೋಗದ ಅನುದಾನದ ಯೋಜನಾ ತಯಾರಿಯ ಭಾಗವಾಗಿ ಹಮ್ಮಿಕೊಳ್ಳಲಾದ ‘ಅಭಿವೃದ್ಧಿ ಸೆಮಿನಾರ್’ ಮಂಜೇಶ್ವರದ ಎ ಕೆ ಗಾರ್ಡನ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.ಮುಂಬರುವ ಹಣಕಾಸು ವರ್ಷದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮತ್ತು ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸೆಮಿನಾರ್ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ, ಕಳೆದ ಫೆಬ್ರವರಿ 9 ರಿಂದ ಫೆಬ್ರವರಿ 17ರ ವರೆಗೆ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಗ್ರಾಮ ಸಭೆಗಳನ್ನು ಹಾಗೂ ವರ್ಕಿಂಗ್ ಗ್ರೂಪ್…

Read More
error: Content is protected !!