Avatar

NAMMA MEDIA 24X7

ಮಂಜೇಶ್ವರದಲ್ಲಿ 7 ವರ್ಷದ ಬಾಲಕನ ಅಪಹರಣಕ್ಕೆ ಯತ್ನ: ಕಾರಿನಲ್ಲಿ ಬಂದ ಇಬ್ಬರಿಂದ ಕೃತ್ಯ

ಮಂಜೇಶ್ವರ: ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಏಳು ವರ್ಷದ ಬಾಲಕನನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಲಾಗಿದೆ. ಉತ್ತರ ಭಾರತ ಮೂಲದ ಕುಟುಂಬವು ಇಲ್ಲಿನ ಕ್ವಾರ್ಟಸ್ನಲ್ಲಿ ವಾಸವಿದ್ದು, ಮಧ್ಯಾಹ್ನ ಅಂಗನವಾಡಿಯಿಂದ ಉಚಿತ ಆಹಾರ ಧಾನ್ಯ ಪಡೆದು ಮಗುವೊಂದು ಮನೆಗೆ ಮರಳುತ್ತಿತ್ತು.​ಆಗ ದಾರಿಮಧ್ಯೆ ಬಂದ ಕಾರೊಂದರಲ್ಲಿ ಮಾಸ್ಕ್ ಧರಿಸಿದ್ದ ಇಬ್ಬರು ಅಪರಿಚಿತರು, ಮನೆಗೆ ಬಿಡುವುದಾಗಿ ನಂಬಿಸಿ ಬಾಲಕನನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸಿದ್ದಾರೆನ್ನಲಾಗಿದೆ. ಆದರೆ ಎಚ್ಚೆತ್ತ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಯಗೊಂಡ ಮಗು…

Read More

ಮೂಡುಬಿದಿರೆಯಲ್ಲಿ ಆ.9ರಂದು ಈಶ ಗ್ರಾಮೋತ್ಸವ 2026ರ ಕರ್ನಾಟಕ ವಿಭಾಗೀಯ ಪಂದ್ಯಾವಳಿ

ಮೂಡುಬಿದಿರೆ: ಈಶ ಗ್ರಾಮೋತ್ಸವ 2026ರ 18ನೇ ಆವೃತ್ತಿಯ ಕರ್ನಾಟಕ ವಿಭಾಗೀಯ ಪಂದ್ಯಾವಳಿಗಳು ಆ.9ರಂದು ಮೂಡುಬಿದಿರೆಯಲ್ಲಿ ಬೆಳಿಗ್ಗೆ 9.30ಕ್ಕೆ ಗಣ್ಯರ ಸಮುಖದಲ್ಲಿ ಸ್ವರಾಜ್ ಮೈದಾನ ಪಬ್ಲಿಕ್ ಗ್ರೌಂಡ್‌ನಲ್ಲಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ಈಶ ಫೌಂಡೇಶನ್‌ನ ಮಾಧ್ಯಮ ಸಂಯೋಜಕಿ ಲತಾ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈಶ ಔಟ್‌ರೀಚ್ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ 18 ಪುರುಷರ ವಾಲಿಬಾಲ್ ತಂಡಗಳು ಹಾಗೂ 12 ಮಹಿಳೆಯರ ಥ್ರೋಬಾಲ್ ತಂಡಗಳ 300ಕ್ಕೂ ಅಧಿಕ ಗ್ರಾಮೀಣ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ….

Read More

ಸನಾತನ ಧರ್ಮ, ರಾಮಮಂದಿರ ಅವಹೇಳನ ಆರೋಪ: ಮಂಗಳೂರಿನಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಪ್ರತಿಭಟನೆ

ಮಂಗಳೂರು: ಸನಾತನ ಧರ್ಮ ಹಾಗೂ ಅಯೋಧ್ಯೆ ರಾಮಮಂದಿರವನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ, ಮಂಗಳೂರು ಘಟಕದ ವತಿಯಿಂದ ನಗರದ ಕ್ಲಾಕ್ ಟವರ್ ಎದುರು ಪ್ರತಿಭಟನೆ ಆಯೋಜಿಸಲಾಗಿತ್ತು. ಸಂಸತ್ ಭವನದ ಮುಂಭಾಗದಲ್ಲಿ ಕೇಸರಿ ಬಟ್ಟೆ ಧರಿಸಿ ಸನಾತನ ಧರ್ಮ ಮತ್ತು ಅಯೋಧ್ಯೆ ರಾಮಮಂದಿರವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ, ಸಂಸತ್ ಸದಸ್ಯ ಪಪ್ಪು ಯಾದವ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು…

Read More

ಗ್ರಾಮೀಣ ಜನರ ಸಮಸ್ಯೆಗಳ ವರದಿಗೆ ಸಂಶುದ್ಧೀನ್ ಎಣ್ಮೂರವರಿಗೆ ಪ.ಗೋ. ಪ್ರಶಸ್ತಿ

ಮಂಗಳೂರು ,ಜೂ.12;ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ ಪ.ಗೋ. (ಪದ್ಯಾಣ ಗೋಪಾಲಕೃಷ್ಣ)2026 ನೆ ಸಾಲಿನ ಪ್ರಶಸ್ತಿ ಗೆ ಸಂಶುದ್ಧೀನ್ ಎಣ್ಮೂರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ,ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು.ಈ ಪೈಕಿ ಅತ್ಯುತ್ತಮ ಒಂದು ವರದಿಯನ್ನು ತೀರ್ಪುಗಾರರ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ. ವಾರ್ತಾಭಾರತಿ ಕನ್ನಡ ದೈನಿಕದ…

Read More

ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಕುರಿಯಾಳದ ವಿಕಲಚೇತನ ಯುವತಿಗೆ ಉದ್ಯೋಗ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಭಿನಂದನೆ.

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕುರಿಯಾಳ ಗ್ರಾಮದ ವಿಕಲಚೇತನ ಪದವೀಧರೆ ಭಾಗ್ಯಶ್ರೀ ಅವರಿಗೆ ಇದೀಗ ಖಾಸಗಿ ಕಂಪೆನಿಯಲ್ಲಿ ಉದ್ಯೋಗಾವಕಾಶ ದೊರೆತಿದೆ.ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಆಳ್ವಾಸ್ ‘ಪ್ರಗತಿ ಉದ್ಯೋಗ ಮೇಳ’ದ ಕುರಿತು ಬಂಟ್ವಾಳದಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗ್ಯಶ್ರೀ ಭಾಗವಹಿಸಿದ್ದರು. ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರೂ ಸೂಕ್ತ ಉದ್ಯೋಗ ದೊರೆಯದೆ ಮನೆಯಲ್ಲೇ ಉಳಿದಿದ್ದ ಅವರಿಗೆ ಉದ್ಯೋಗ ಮೇಳ ಹೊಸ ಅವಕಾಶದ ಬಾಗಿಲು ತೆರೆದಿದೆ. ಉದ್ಯೋಗ…

Read More

ಹೊಸಂಗಡಿಯಲ್ಲಿ 136ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

ಶ್ರೀ ಆದಿಶಕ್ತಿ ರಕ್ತೇಶ್ವರಿ ದೇವಸ್ಥಾನ ಹೊಸಂಗಡಿ, ಶಾರದಾ ಆರ್ಟ್ಸ್ ಕಲಾವಿದರು (ರಿ ) ಮಂಜೇಶ್ವರ ಶ್ರೀ ಅಯ್ಯಪ್ಪ ಸೇವಾ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ , ಚಕ್ರವರ್ತಿ (ರಿ )ಹೊಸಂಗಡಿ ಆಶ್ರಯದಲ್ಲಿ, 136ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಆಗಸ್ಟ್ 11ರಿಂದ ಆಗಸ್ಟ್ 26, 2026ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಲಭ್ಯವಿರಲಿದೆ. ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ನಡೆಯಲಿದೆ….

Read More

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಐವನ್ ಡಿಸೋಜಾ ಶ್ಲಾಘನೆ

ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ನಡೆದ ಡೇವಿಡ್ ಡಿಸೋಜಾ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸರ ಕಾರ್ಯವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಐವನ್ ಡಿಸೋಜಾ ಅವರು ಶ್ಲಾಘಿಸಿದ್ದಾರೆ. ಇಂತಹ ಗಂಭೀರ ಘಟನೆಗಳು ನಡೆದ ಸಂದರ್ಭದಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವುದರಿಂದ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ಹತ್ಯೆಯಂತಹ ಕೃತ್ಯ ಎಸಗಿದವರನ್ನು ಕಾನೂನಿನ ಅಡಿಯಲ್ಲಿ ಬಂಧಿಸಿ…

Read More

ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ -ನಮ್ಮ ಹೆಮ್ಮೆ” ಘೋಷಣೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಾಜ್ಯಮಟ್ಟದಲ್ಲಿ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ “

ಮಂಗಳೂರಿನಲ್ಲಿ 1843 ಜುಲೈ 1ರಂದು ಮಂಗಳೂರು ಸಮಾಚಾರ ಎಂಬ ಕನ್ನಡದ ಪ್ರಥಮ ಪತ್ರಿಕೆ ಮುದ್ರಣಗೊಂಡಿತ್ತು. ಕನ್ನಡ ಪತ್ರಿಕೋದ್ಯಮದ 183 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ 2026 ಜುಲೈ 1 ರಿಂದ 2027 ಜುಲೈ 1ರ ತನಕ ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ ನಮ್ಮ ಹೆಮ್ಮೆ” ಘೋಷಣೆಯೊಂದಿಗೆ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ”ವನ್ನು ಪ್ರಾರಂಭಿಸಲಾಗಿದೆ. ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು…

Read More

“ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ” ಎಲ್. ಜಿ.ಜ್ಯೋತಿಶ್ವರ ಅಭಿಮತ

ಕಾಸರಗೋಡು:- ಕರ್ನಾಟಕದೊಳಗೆ ಎಲ್ಲೂ ಕಾಣಸಿಗದ ಕನ್ನಡ ಗ್ರಾಮ ಗಡಿನಾಡು ಕಾಸರಗೋಡಿನಲ್ಲಿದೆ ಶಿವರಾಮ ಕಾಸರಗೋಡು ಅವರ ಪರಿಕಲ್ಪನೆಯ ಈ ಕನ್ನಡ ಗ್ರಾಮ ಸಾಹಿತ್ಯ ಸಂಸ್ಕೃತಿ ಕಲೆಗಳಿಗೆ ಆಶ್ರಯ ಧಾಮವಾಗಿದೆ. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸುತ್ತಿರುವ ಪ್ರಧಾನ ಕೇಂದ್ರವಾಗಿ ಕನ್ನಡ ಗ್ರಾಮ ಕಾರ್ಯಾಚರಿಸುತ್ತಿರುವುದು ಅಭಿನಂದನೀಯ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಎಲ್.ಜಿ. ಜ್ಯೋತಿಶ್ವರ ಬೆಂಗಳೂರು ಹೇಳಿದರು. ಮೂರುವರೆ ದಶಕಗಳ ಇತಿಹಾಸವಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಭೇಟಿಯಾಗಲು ಬಂದ ಜ್ಯೋತಿಶ್ವರ…

Read More

ದೈವಾರಾಧನೆ🙏

“ಪಾಸದ ಪಡಿಯರಿ” ದೈವಾರಾಧನೆಯಲ್ಲಿ ಪಾಸಾದ ಪಡಿಯರಿಗೆ ಬಹಳ ಪ್ರಾಮುಖ್ಯತೆ ಇದೆ, ಪಾಸ ಅಂದ್ರೆ ಉಪವಾಸ, ದೈವನರ್ತಕರು ದೈವ ಕೋಲ ಕಟ್ಟುವ ಒಂದು ದಿನ ಮುಂಚೆಯಿಂದ ಉಪವಾಸ ಹಿಡಿದಿರಬೇಕು, ( ಕೆಲವೊಂದು ದೈವಗಳಿಗೆ ಬೇಡ )ಅದಕ್ಕೆ ಅವರು ದೈವ ಕೋಲ ಬಿರಿದ ನಂತರ ಮನೆಗೆ ಹೋಗಿ ಆ ಅಕ್ಕಿಯನ್ನು ಬೇಯಿಸಿ ಊಟ ಮಾಡುತ್ತಾರೆ, ಆಗಿನ ಕಾಲ ಹಾಗಿತ್ತು, ನಮ್ಮ ದೈವ ಕೋಲವನ್ನು ಉಪವಾಸ ಹಿಡಿದು ಕಟ್ಟಿದ ನಂತರ ನರ್ತಕ ಹಸಿವಿನಿಂದ ಇರಬಾರದು ಎಂಬ ಸಂಕಲ್ಪದಿಂದ ದೈವದ ಹೆಸರಲ್ಲಿ ಮೂರು…

Read More
error: Content is protected !!