ಕಡಲನಗರಿಯಲ್ಲಿ ಇವಾಲ್ವ್ 5ನೇ ವಾರ್ಷಿಕೋತ್ಸವ: ಮಹಿಳಾ ಉದ್ಯಮಿಗಳಿಗೆ ಬಲವಾದ ವೇದಿಕೆ
ಮಂಗಳೂರು:ನಗರದ ಉದ್ಯಮಶೀಲ ಚೈತನ್ಯ ಮತ್ತೊಮ್ಮೆ ಮೆರೆದಿದೆ. ಮಹಿಳಾ ಉದ್ಯಮಿಗಳ ಸಂಘಟನೆ Evolve – A Women Entrepreneurs’ Association ತನ್ನ 5ನೇ ವಾರ್ಷಿಕೋತ್ಸವ ಶನಿವಾರ ಮಂಗಳೂರಿನ Ocean Pearl ನಲ್ಲಿ ‘ಬಿಜ್ ಇನ್‌ಸೈಟ್ಸ್’ ವಾರ್ಷಿಕ ಬಿಸಿನೆಸ್ ಕಾನ್ಕ್ಲೇವ್ ಮೂಲಕ ಅದ್ದೂರಿಯಾಗಿ ಆಚರಿಸಿದೆ. ಮಂಗಳೂರಿನ ಮಹಿಳಾ ಉದ್ಯಮಿಗಳ ಪ್ರಮುಖ ವೇದಿಕೆಯಾಗಿ ಬೆಳೆದಿರುವ ಇವಾಲ್ವ್, ಕಳೆದ ಐದು ವರ್ಷಗಳಲ್ಲಿ ತನ್ನ ಸದಸ್ಯತ್ವವನ್ನು ಐದು ಪಟ್ಟು ಹೆಚ್ಚಿಸಿಕೊಂಡು ಗಮನಾರ್ಹ ಸಾಧನೆ ಮಾಡಿದೆ. ಮಹಿಳಾ ಉದ್ಯಮಶೀಲತೆ, ಸ್ಟಾರ್ಟ್‌ಅಪ್ ವೃದ್ಧಿ, ನೆಟ್‌ವರ್ಕಿಂಗ್ ಹಾಗೂ ನಾಯಕತ್ವ…
