ಮಂಗಲ್ಪಾಡಿ ಪಂಚಾಯತ್ 2026–27ರ ಗೋಲ್ಡನ್ ಬಜೆಟ್: ಮಿನಿ ಸಿವಿಲ್ ಸ್ಟೇಷನ್, ಉಪ್ಪಳದಲ್ಲಿ ಆಧುನಿಕ ಬಸ್‌ಸ್ಟ್ಯಾಂಡ್–ಶಾಪಿಂಗ್ ಕಾಂಪ್ಲೆಕ್ಸ್
ಉಪ್ಪಳ: ಮೂಲಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಮಂಗಲ್ಪಾಡಿ ಗ್ರಾಮಪಂಚಾಯತ್ 2026–27ನೇ ಸಾಲಿನ ಜನಪ್ರಿಯ “ಗೋಲ್ಡನ್ ಬಜೆಟ್” ಅನ್ನು ಉಪಾಧ್ಯಕ್ಷೆ ಶಮೀನಾ ಟೀಚರ್ ಪ್ರಸ್ತುತಪಡಿಸಿದರು. ಗ್ರಾಮಪಂಚಾಯತ್ ಅಧೀನದಲ್ಲಿರುವ ಎಲ್ಲಾ ಘಟಕ ಸಂಸ್ಥೆಗಳನ್ನು ಒಳಗೊಂಡಂತೆ ಮಿನಿ ಸಿವಿಲ್ ಸ್ಟೇಷನ್ ಮಾದರಿಯಲ್ಲಿ ಆಧುನಿಕ ಕಚೇರಿ ಸಮುಚ್ಚಯವನ್ನು ನಿರ್ಮಿಸಲಾಗುತ್ತದೆ. ಉಪ್ಪಳ ಪಟ್ಟಣದಲ್ಲಿ ಬಿಒಟಿ (BOT) ಆಧಾರದ ಮೇಲೆ ಆಧುನಿಕ ಬಸ್‌ಸ್ಟ್ಯಾಂಡ್–ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಉಲ್ಲೇಖವಿದೆ. ಬೀಚ್ ಟೂರಿಸಂ ಉತ್ತೇಜಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತದೆ. ಕ್ಷೇತ್ರವಾರು ಅನುದಾನ ಒಟ್ಟು…
