ಶತಮಾನಗಳ ಬಂಟತನದ ಗರಿಮೆಯ ಪೆರ್ಲ ಬೀಡು: ಭಕ್ತಿ, ಕಲೆ ಹಾಗೂ ದೈವೀ ಪರಂಪರೆಯ ಮಹಾ ಸಂಗಮ
ತುಳುನಾಡಿನ ಪವಿತ್ರ ಮಣ್ಣಿನಲ್ಲಿ ಬಂಟತನದ ಸೌರಭಕ್ಕೆ, ಶೌರ್ಯ-ತ್ಯಾಗಗಳಿಗೆ ಮತ್ತು ಅತಿಥಿ ಸತ್ಕಾರದ ಉದಾತ್ತ ಪರಂಪರೆಗೆ ತನ್ನದೇ ಆದ ವಿಶಿಷ್ಟ ಹಾಗೂ ಭವ್ಯ ಇತಿಹಾಸವಿದೆ. ಅಂತಹ ಶತಮಾನಗಳ ಇತಿಹಾಸದ ಹೆಜ್ಜೆಯ ಗುರುತುಗಳನ್ನು ಎದೆಯಲ್ಲಿಟ್ಟುಕೊಂಡು, ಬಂಟತನದ ಗತ್ತು ಹಾಗೂ ಗರಿಮೆಯ ಹೆಮ್ಮೆಯ ಮನೆತನವಾಗಿ ಕಂಗೊಳಿಸುತ್ತಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ‘ಪೆರ್ಲ ಬೀಡು’ ಅಂಗಳದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಇಲ್ಲಿನ ಭವ್ಯ ನೂತನ ಗೃಹಪ್ರವೇಶ ಹಾಗೂ ದೈವಗಳ ಬಿಂಬ ಪ್ರತಿಷ್ಠಾ ಕಲಶಾಭಿಷೇಕ ಮಹೋತ್ಸವವು ಕೇವಲ ಒಂದು…