ಮೊದಲ ವಾಹನ

ಒಂದು ಕಾಲವಿತ್ತು, ಆಗ ರೂ. 20 ಉಳಿಸಲು 20 ನಿಮಿಷ ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ 20 ನಿಮಿಷ ಉಳಿಸಲು 200 ರೂಪಾಯಿ ಖರ್ಚು ಮಾಡಲು ತಯಾರಿದ್ದಾರೆ. ಪ್ರತಿಯೊಬ್ಬರು ಓಡಾಡಲು ಸ್ವಂತ ಗಾಡಿಯನ್ನು ಇಟ್ಟುಕೊಂಡಿದ್ದಾರೆ.ಮುಖ್ಯರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ನಮ್ಮ ಮನೆಗೆ ಇದ್ದುದರಿಂದ ನಮಗೂ ಒಂದು ಗಾಡಿ ಅವಶ್ಯವಿದೆ ಎಂದು ನಮಗನಿಸುತ್ತಿತ್ತು. ಬೆರಳೆಣಿಕೆಯಷ್ಟು ಅಡಿಕೆ ಮರಗಳಿದ್ದ ತೋಟ ನಮ್ಮದು, ಮನೆಯಲ್ಲಿ ಅನಾರೋಗ್ಯದಿಂದ ಪೀಡಿತ ವಯಸ್ಸಾದ ಅತ್ತೆ ಮಾವ, ಇವೆಲ್ಲದುದರಿಂದ ಹಣ ಹೊಂದಿಸುವುದು ಕಷ್ಟವಿತ್ತು. ಆದರೆ ದೇವರ…

Read More

ಬದುಕಿನ ಸಮಸ್ಯೆ ಒಂದು ಆಲೋಚನೆ

ಮಾನವ ಜೀವನವು ಒಂದು ಸಂಕೀರ್ಣ ಮತ್ತು ಚಲನೆಯುತ ಪ್ರಯಾಣವಾಗಿದೆ. ಜನನದಿಂದ ಮರಣದವರೆಗೆ ಪ್ರತಿಯೊಬ್ಬರೂ ಅನೇಕ ಅನುಭವಗಳನ್ನು ಎದುರಿಸುತ್ತಾರೆ, ಮತ್ತು ಆ ಅನುಭವಗಳಲ್ಲಿ ಸಮಸ್ಯೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಬದುಕಿನ ದಾರಿಯಲ್ಲಿ ಸಣ್ಣ ಸಣ್ಣ ಅಡೆತಡೆಗಳಿಂದ ಹಿಡಿದು ದೊಡ್ಡ ಸವಾಲುಗಳವರೆಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳು ವ್ಯಕ್ತಿಯ ಆರ್ಥಿಕ, ಸಾಮಾಜಿಕ, ಮಾನಸಿಕ ಹಾಗೂ ಭಾವನಾತ್ಮಕ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಬದುಕು ಎನ್ನುವುದು ಸುಲಭವಾದ ಪ್ರಯಾಣವಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು…

Read More

ಗಡಿನಾಡ ಸಾಹಿತ್ಯದ ‘ಸ್ವಾರ್ಥ’ ಸಂಕಟ

ಕಾವಲುಗಾರರೇ ಬೇಲಿ ತಿಂದರೆ ಭಾಷೆಗೆಲ್ಲಿ ಉಳಿವು?​​ಗಡಿನಾಡು ಎನ್ನುವುದು ಕೇವಲ ಎರಡು ಭೂಪಟಗಳ ನಡುವಿನ ಗೆರೆಯಲ್ಲ; ಅದು ಎರಡು ಸಂಸ್ಕೃತಿಗಳ ತಾಯಿಬೇರುಗಳು ಬೆರೆತು ಅರಳುವ ಸಮೃದ್ಧ ತೋಟ. ಕಾಸರಗೋಡಿನ ಕಯ್ಯಾರ ಕಿಂಞಣ್ಣ ರೈಗಳಿಂದ ಹಿಡಿದು ಬೆಳಗಾವಿಯ ನಾಡೋಜ ಪಾಟೀಲ ಪುಟ್ಟಪ್ಪನವರವರೆಗೆ, ಗಡಿನಾಡ ಸಾಹಿತ್ಯ ಲೋಕವು ಅಸ್ಮಿತೆಯ ಕೆಚ್ಚನ್ನು ಕಾಯ್ದುಕೊಂಡು ಬಂದಿತ್ತು. ಆದರೆ ಇಂದು ಆ ಕೆಚ್ಚು ಆರಿದೆ; ಅದರ ಜಾಗದಲ್ಲಿ ‘ವೈಯಕ್ತಿಕ ಲಾಭದ’ ಹಸಿವು ಮನೆಮಾಡಿದೆ. ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ಸ್ವಾರ್ಥದ ರಾಜಕಾರಣವು ಗಡಿನಾಡ ಸಾಹಿತ್ಯದ ಘನತೆಯನ್ನು ಹರಾಜಿಗಿಟ್ಟಿದೆ.​ಸ್ವಾರ್ಥದ…

Read More

ಚಾಂದ್ರಮಾನ ಯುಗಾದಿ

[ಕಾಲಚಕ್ರದ ನವೋದಯ ಮತ್ತು ಸಾಂಸ್ಕೃತಿಕ ವೈಭವ] ​ಭಾರತೀಯ ಸನಾತನ ಪರಂಪರೆಯಲ್ಲಿ ಕಾಲಗಣನೆಗೆ ಕೇವಲ ಅಂಕಿ-ಅಂಶಗಳ ಬೆಲೆ ಮಾತ್ರವಲ್ಲ, ಅದಕ್ಕೊಂದು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆಗೆ ಹೊಸ ವರ್ಷದ ಮುನ್ನುಡಿಯೇ ಚಾಂದ್ರಮಾನ ಯುಗಾದಿ.​ಯುಗಾದಿ: ಪದದ ಅರ್ಥ ವಿಸ್ತಾರ‘ಯುಗಾದಿ’ ಎನ್ನುವ ಪದವು ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ನಿಷ್ಪನ್ನವಾಗಿದೆ. ‘ಯುಗ’ ಎಂದರೆ ಒಂದು ಕಾಲಘಟ್ಟ ಅಥವಾ ನಿರ್ದಿಷ್ಟ ಕಾಲಾವಧಿ, ‘ಆದಿ’ ಎಂದರೆ ಆರಂಭ. ಅಂದರೆ, ಹೊಸ ಕಾಲದ ಉದಯ…

Read More

ಹೊಸ ವರ್ಷದ ಮೊದಲ ಯುಗಾದಿ  

ಭಾರತದ ವಿವಿಧ ಕಡೆಗಳಲ್ಲಿ ಈ ದಿನ ಹೊಸ ವರ್ಷವನ್ನಾಗಿ ಯುಗಾದಿಯನ್ನು ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆ ಎಂದರೆ  ಬೇವು ಬೆಲ್ಲದ ಸವಿಯ ತಿಂದು ಜೀವನದಲ್ಲಿ ಬರುವಂತಹ ಸಿಹಿ ಕಹಿ ಘಟನೆಗಳನ್ನು ಸಮನಾಗಿ ಸ್ವೀಕರಿಸಬೇಕು  ಅವುಗಳನ್ನು ಸಮನಾಗಿ ಅನುಭವಿಸಬೇಕು ಎನ್ನುವ ತಾತ್ವಿಕ ಅವಕಾಶಗಳು ಅದರಲ್ಲಿ ಅಡಕವಾಗಿರುವುದು ವಿಶೇಷ.   ಪ್ರತಿಯೊಬ್ಬರ ಮನೆಯಲ್ಲಿ ಹೆಣ್ಣು ಮಕ್ಕಳು ಮುಂಜಾನೆ ಎದ್ದು, ಮನೆಯ ಅಂಗಳವನ್ನು ಸ್ವಚಮಾಡಿ, ರಂಗು ರಂಗಿನ ರಂಗೋಲಿಯನ್ನು  ಮನೆ ಮುಂದೆ ಬಿಡಿಸಿ,  ಮಾವಿನ ಎಲೆಯ ಜೊತೆಗೆ ಬೇವಿನ ಎಲೆಯ ತೋರಣವನ್ನು ಬಾಗಿಲಿಗೆ ಕಟ್ಟಿ ಸಂಭ್ರಮ ಪಡುತ್ತಾರೆ.  ಈ ದಿನ…

Read More

ದೇವರಿಗಿಲ್ಲ ಗುರು-ದಕ್ಷಿಣೆ:ಆದರೂ ಬರುವರಲ್ಲ ಪ್ರದಕ್ಷಿಣೆ….

ಓಂ ಶ್ರೀ ಸಾಯಿರಾಂ “ಜ್ಞಾನಭಂಡಾರದಲಿ ವಜ್ರವ,ಮುತ್ತುರತ್ನವ ಪೋಣಿಸಿದ ಅಕ್ಷರಧಾರೆ ಪರಿಚಯಿಸಿದ ಗುರುಗಳು,ಸಹಾನುಭೂತಿಯ ದ್ಯೋತಕ, ನಿಷ್ಟೆಯಿಂದ ತನ್ನ ಕಾರ್ಯವನ್ನು ಸಫಲತೆಯ ಕಡೆಗೆ ಸಾಗಿಸುವ ಪ್ರಯತ್ನ,ಶ್ರಮಿಸಿದರೆ ಯಾವ ಕಾರ್ಯವೂ ಕಠಿಣವಲ್ಲ ಎಂದು ಮನದಟ್ಟು ಮಾಡುವ ಯುವ ಹುಮ್ಮಸ್ಸು,ಸಹೃದಯಿ,ಮನುಷ್ಯ ಸ್ವಭಾವದ ಮನಸ್ಸಿಗೆ ನಿಮ್ಮ ಸೇವಾಮನೋಭಾವ ವೇ ಮಾದರಿ. ಸತತ ಪರಿಶ್ರಮ ದ ಉತ್ತುಂಗ ಆಲೋಚನೆಯ ನಿಮ್ಮ ವಿದ್ಯಾಕ್ಷೇತ್ರದ ಸೇವೆ ಅಪಾರ. ನಿಮ್ಮ ಕಠಿಣ ಪರಿಶ್ರಮದ ರೀತಿನೀತಿ ಅನುಸರಿಸಿದರೆ ವಿದ್ಯಾರ್ಥಿ ಜೀವನದಲ್ಲೂ ಉನ್ನತಿಯ ಸ್ಥಾನ ಅಲಂಕರಿಸಬಲ್ಲ ಎಂದರೆ ಸಂಶಯವಿಲ್ಲ.ನಿಮ್ಮ ಜೊತೆ ಸೇವೆ ಮಾಡಿದ…

Read More

ಜೀವನದಲ್ಲಿ ವ್ಯಾಯಾಮದ ಮಹತ್ವ

ಇಂದಿನ ಆಧುನಿಕ ಯುಗದಲ್ಲಿ ಮಾನವ ಜೀವನ ಬಹಳಷ್ಟು ಸುಲಭವಾಗಿರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಯಂತ್ರಾಧಾರಿತ ಜೀವನಶೈಲಿ, ಕಚೇರಿ ಕೆಲಸ, ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ ಹೆಚ್ಚಾದ ಕಾರಣ ಬಹುತೇಕ ಜನರು ಕುಳಿತಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಿಂದೆ ಜನರು ತಮ್ಮ ದಿನನಿತ್ಯದ ಕೆಲಸಗಳ ಮೂಲಕವೇ ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ಹೊಂದಿದ್ದರೆ, ಇಂದಿನ ಕಾಲದಲ್ಲಿ ಅದನ್ನು ಬದಲಿಸಲು ವ್ಯಾಯಾಮ ಅನಿವಾರ್ಯವಾಗಿದೆ. ಆರೋಗ್ಯಕರ ಜೀವನ ನಡೆಸಲು ಆಹಾರ ಮತ್ತು ವಿಶ್ರಾಂತಿ…

Read More

ಯುದ್ಧದ ಬೆಂಕಿ

ಕೆಟ್ಟು ಪಟ್ಟಣ ಸೇರು ಎಂಬ ಗಾದೆ ಮಾತಿದೆ, ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ನಾನು ಪಟ್ಟಣ ಸೇರಿ ಕೆಟ್ಟೆನೇನೋ ಎಂದು ಅನಿಸುತ್ತಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ಎಂದು ಬೆಂಗಳೂರು ಸೇರಿದೆ.ಸಿಟಿಗೆ ಬಂದ ನನಗೆ ಮೊದ-ಮೊದಲು ಪಿಜಿಯು ಆಶ್ರವನ್ನೇನೋ ಕೊಟ್ಟಿತ್ತು, ಅಲ್ಲಿಯ ಕಾಲಮಿತಿ, ಆಹಾರ ಪದ್ಧತಿ ಸರಿಹೋಗದೆ ಹೇಗೋ ಕಷ್ಟಪಟ್ಟು ಚಿಕ್ಕದಾದಂತಹ ಒಂದು ಮನೆ ನೋಡಿಕೊಂಡೆ. ಮನೆಯಾದರೆ ಸಾಕೆ ಅಡುಗೆ ಮಾಡಬೇಕು,ಪಾತ್ರೆ, ಬಟ್ಟೆ ತೊಳೆಯಬೇಕು……ಇಂತಹ ಹಲವಾರು ಕೆಲಸಗಳನ್ನು ಖುದ್ದು ಮಾಡಬೇಕು.ನಾನು 5 ಕೆಜಿಯ ಚಿಕ್ಕ lpg ಸಿಲಿಂಡರ್…

Read More

ಬದುಕಿನ ಶಿಲ್ಪಕ್ಕೆ ಅವಮಾನವೇ ಉಳಿ, ಅನುಭವವೇ ಹದ

ಅವಮಾನ ಮತ್ತು ಅನುಭವ ಬದುಕಿನ ಎರಡು ಧ್ರುವಗಳು ​ಜೀವನವು ಕೇವಲ ಉಸಿರಾಟದ ಕ್ರಿಯೆಯಲ್ಲ, ಅದೊಂದು ನಿರಂತರ ಕಲಿಕೆಯ ಪಾಠಶಾಲೆ. ಇಲ್ಲಿ ಶಿಕ್ಷಕರಿಗಿಂತ ಹೆಚ್ಚಾಗಿ ಸನ್ನಿವೇಶಗಳೇ ನಮಗೆ ಪಾಠ ಕಲಿಸುತ್ತವೆ. “ಅವಮಾನಗಳು ಬದುಕಬೇಕೆಂಬ ಧೈರ್ಯ ಕೊಟ್ಟರೆ, ಅನುಭವಗಳು ಹೇಗೆ ಬದುಕಬೇಕೆಂಬ ಮಾರ್ಗ ತೋರಿಸುತ್ತವೆ” ಎನ್ನುವ ಸಾಲುಗಳು ಬದುಕಿನ ಕಟು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ. ಸಾಮಾನ್ಯವಾಗಿ ಅವಮಾನವಾದಾಗ ಮನುಷ್ಯ ಕುಗ್ಗಿ ಹೋಗುತ್ತಾನೆ. ಆದರೆ ಸತ್ಪಥದಲ್ಲಿ ಸಾಗುವವನಿಗೆ ಅವಮಾನವೇ ಎತ್ತರಕ್ಕೆ ಜಿಗಿಯಲು ಬಳಸುವ ಸಾಧನವಿದ್ದಂತೆ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆಯಂತೆ,…

Read More

ಗೆಳೆಯನ ಬುದ್ದಿವಂತಿಕೆ

ಒಂದು ಊರಲ್ಲಿ ಒಬ್ಬ ಶ್ರೀಮಂತನಿದ್ದ, ಅವನಿಗೆ, ಹೆಂಡತಿ, ಒಬ್ಬಳು ಮಗಳು ಹಾಗೂ ಒಬ್ಬ ಆಪ್ತ ಗೆಳೆಯನಿದ್ದ, ಶ್ರೀಮಂತನು ಸಾಯುವ ಸಮಯ ಬರುವಾಗ ತನ್ನ ಆಸ್ತಿಯನ್ನು ಹೆಂಡತಿ ಮಗಳ ಹೆಸರಲ್ಲಿ ಬರೆಯುವಾಗ, ಅವನಲ್ಲಿ 19 ಕುದುರೆಗಳು ಇದ್ದವು, ಇದನ್ನುಸಮ ಅರ್ಧ ಹೆಂಡತಿಗೆ, ಅದರ ಒಂದರ್ಧ ಮಗಳಿಗೆ, ಮತ್ತು ಉಳಿದ ಕುದುರೆಯಲ್ಲಿ ಒಂದೊಂದರಂತೆ 4 ಜನ ಕೆಲಸಗಾರರಿಗೂ ಒಂದನ್ನು ನನ್ನ ಆಪ್ತ ಗೆಳೆಯನಿಗೂ ಕೊಡಬೇಕು ಎಂದು ಬರೆಸಿ ಕೊಳ್ಳುತ್ತಾನೆ…..! ಇದು ಪಾಲು ಮಾಡುವಾಗ, 19 ಕುದುರೆಗಳಲ್ಲಿ ಸಮಾ ಅರ್ಧ ಹೇಗೆ…

Read More
error: Content is protected !!