ನವೆಂಬರ್ 28ರಿಂದ 30ರವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ “ಮಂಗಳೂರು ಸಂಗೀತೋತ್ಸವ – 2025 ಸಮಾರಂಭ
ಮಂಗಳೂರು: ಸಂಗೀತ ಪರಿಷತ್ ಮಂಗಳೂರು (ರಿ) ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣ ಮಠ, ಮಂಗಳೂರು ಇವರುಗಳ ಸಹಯೋಗದಲ್ಲಿ “ಮಂಗಳೂರು ಸಂಗೀತೋತ್ಸವ – 2025 ನವೆಂಬರ್ 28ರಿಂದ 30ರವರೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ತಿಳಿಸಿದರು . ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ , ಸಂಗೀತೋತ್ಸವವನ್ನು ನವೆಂಬರ್ 28ರಂದು ಸಂಜೆ 5.00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಅವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಕ್ಷೇತ್ರ…