ರೋಲ್ಡ್ ಗೋಲ್ಡ್ ಗ್ಯಾಂಗ್ ಅಂಧರ್ …. !

ಮಂಗಳೂರು :ತೊಕ್ಕೊಟ್ಟಿನ ಫೈನಾನ್ಸ್ ಒಂದರಲ್ಲಿ 916 ಹಾಲ್ ಮಾರ್ಕ್ ಇರುವ ಅಸಲಿ ಚಿನ್ನವನ್ನೇ ಹೋಲುವ ನಕಲಿ ಆಭರಣಗಳನ್ನ ಅಡವಿರಿಸಿ ಲಕ್ಷಾಂತರ ರೂಪಾಯಿ ವಂಚನೆಗೈದಿರುವ ಗ್ಯಾಂಗ್ ನ ಆರು ಮಂದಿ ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್ ಮತ್ತು ಮಿಸ್ಟಾ ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ಮಿಯಾಝ್, ಮಂಚಿಲದ ಝಹೀಮ್ ಅಹ್ಮದ್ ರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು, ಹೆಜಮಾಡಿಯ ನೌಫಾಲ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ತೊಕ್ಕೊಟ್ಟು ಕೇಂದ್ರ…

Read More

ನ.30ರಂದು ರೋಟರಿ ಮಂಗಳೂರು ಸೆಂಟ್ರಲ್ನಿಂದ ರೋಟರಿ ಚಿಣ್ಣರ ಉತ್ಸವ , ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ

ಮಂಗಳೂರು:ರೋಟರಿಯ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ರೋಟರಿ ಮಂಗಳೂರು ಸೆಂಟ್ರಲ್, ರೋಟರ್ಯಾಕ್ಟ್, ಮಂಗಳೂರು ಸಿಟಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ’25ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ನ.30ರಂದು ಬೆಳಗ್ಗೆ 9:00 ಗಂಟೆಗೆ ನಗರದ ಉರ್ವದ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಸಭಾಪತಿ ಡಾ.ಬಿ.ದೇವದಾಸ ರೈ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಒಂದು ದಿನದ ಕ್ರೀಡಾ ಸ್ಪರ್ಧಾಕೂಟ ಮತ್ತು ಮನೋರಂಜನಾ ಉತ್ಸವದಲ್ಲಿ ಜಿಲ್ಲೆಯ ವಿವಿಧ…

Read More

ಸುಬ್ರಹ್ಮಣ್ಯ ದೇವಾಲಯದ ಧನ ವ್ಯಕ್ತಿಗತ ಪ್ರಚಾರಕ್ಕಾಗಿ ಬಳಕೆ ಮಾಡಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ತೀವ್ರ ಖಂಡನೆ….. !

ಮಂಗಳೂರು : ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ದಿನಾಂಕ 25ರಂದು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಚಂಪಾ ಷಷ್ಟಿ ಕಾರ್ಯಕ್ರಮದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ, ಅದರಲ್ಲಿ ದೇವತಾ ಕಾರ್ಯಕ್ಕಿಂತ ವ್ಯಕ್ತಿಗತ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ, ರಾಜಕೀಯ ನಾಯಕರ ಮತ್ತು ಇತರರ ಭಾವಚಿತ್ರ ಗಳೊಂದಿಗೆ ಜಾಹೀರಾತು ಪ್ರಕಟವಾಗಿದೆ. ದೇವಸ್ಥಾನದ ಅಥವಾ ಧಾರ್ಮಿಕ ದತ್ತಿ ಇಲಾಖೆಯ ಹಣ ಈ ರೀತಿ ದುರುಪಯೋಗ ಪಡಿಸುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ ಎಂದು…

Read More

ಡಿಸೆಂಬರ್ 20: “Nitte Nexus 2025ನೇ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ ಸಂಭ್ರಮ … !

ಮಂಗಳೂರು:WENAMITAA (NMAMIT ಹಳೆಯ ವಿದ್ಯಾರ್ಥಿಗಳ ಸಂಘ) ಮತ್ತು Nitte Mahalinga Adyantheya Memorial Institute of Technology (NMAMIT) ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ “Nitte Nexus 2025” ಡಿಸೆಂಬರ್ 20, 2025 ರಂದು ಸಂಜೆ 4 ಗಂಟೆಯಿಂದ ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ನೆನ್ನನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮುಲ್ಕಿ ಜೀವನ್ ಕೆ. ಶೆಟ್ಟಿ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, 1986ರಲ್ಲಿ ಸ್ಥಾಪಿತವಾದ…

Read More

ನವೆಂಬರ್ 29ರಂದು ಯಕ್ಷ ಪ್ರತಿಭೆ” ಮಂಗಳೂರು ಇದರ 17ನೇ ವರ್ಷದ ಸಂಭ್ರಮ

ಮಂಗಳೂರು:ಯಕ್ಷ ಪ್ರತಿಭೆ” ಮಂಗಳೂರು ಇದರ 17ನೇ ವರ್ಷದ ಸಂಭ್ರಮ , ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಕರಣಾ ಪ್ರಶಸ್ತಿ ಪ್ರಧಾನ ಮತ್ತು ಅಭಿನಂದನಾ ಕಾರ್ಯಕ್ರಮವು ನವೆಂಬರ್ 29ರಂದು ಸಂಜೆ 5.45ರಿಂದ ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾವಿದರಾದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ , ಈ ವರುಷದ “ಯಕ್ಷ ಪ್ರತಿಭೆಯಿಂದ ಕೊಡ ಮಾಡುವ “ಸಾಧಕ ರತ್ನ” ಪ್ರಶಸ್ತಿಯನ್ನು ದಕ್ಷಿಣ…

Read More

ನ. 29 ನಶಮುಕ್ತ ಭಾರತ ‘ನಶಮುಕ್ತ ಕ್ಯಾಂಪಸ್” ಕುರಿತಾಗಿ ಬೃಹತ್ ವಾಕಥಾನ್

ಮಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ವತಿಯಿಂದ, ಹಾಗೂ ಆರ್.ಜಿ.ಯು.ಎಚ್.ಎಸ್ ಆಡಳಿತದಡಿ ಬರುವ 113 ವೈದ್ಯಕೀಯ/ಅರೆವೈದ್ಯಕೀಯ ಸೇರಿದಂತೆ, ವಿವಿಧ ಕಾಲೇಜುಗಳ ಸಹಕಾರದಲ್ಲಿ “ನಶಮುಕ್ತ ಭಾರತ” “ನಶಮುಕ್ತ ಕ್ಯಾಂಪಸ್” ಘೋಷ ವಾಕ್ಯದಡಿ ಬೃಹತ್ ವಾಕಥಾನ್ ಮೆರವಣಿಗೆಯು ನವೆಂಬರ್ 29 ರಂದು ಬೆಳಗ್ಗೆ 7:00 ಗಂಟೆಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ನಡೆಯಲಿದೆ ಎಂದು ಆರ್.ಜಿ.ಯು.ಎಚ್.ಎಸ್ ಇದರ ಸದಸ್ಯರಾದ ಡಾ|ಯು.ಟಿ. ಇಫ್ತೀಕರ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ…

Read More

ಕಾರ್ಮಿಕ ವಿರೋಧಿ ಶ್ರಮಶಕ್ತಿ ನೀತಿ – 2025 ಕರಡು ಪ್ರತಿ ದಹನ ; ಕೇಂದ್ರ ಸರಕಾರದ ವಿರುದ್ಧ ಕಾರ್ಮಿಕರ ಆಕ್ರೋಶ

ಕೇಂದ್ರದ ನರೇಂದ್ರ ಮೋದಿ ಸರಕಾರವು ನಿರಂತರವಾಗಿ ಕಾರ್ಮಿಕ ವರ್ಗದ ವಿರುದ್ಧ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಶ್ರಮಶಕ್ತಿ ನೀತಿ – 2025 ನ್ನು ಜಾರಿಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು,ಇದರ ವಿರುದ್ಧ ಇಂದು ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕೆಂದು CITU ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು, 1969ರಲ್ಲಿ ಅಂದಿನ ಕೇಂದ್ರ ಸರಕಾರದ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ. 29ನೇ ವಾರ್ಷಿಕ ಮಹಾಸಭೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಎಲ್ಲವೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯ. ಬಂಟ…

Read More

ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನೆಲ್ ಮಾತ್ರ , ಹೀಗೆಂದರೇಕೆ ಸ್ಪೀಕರ್ ಯು.ಟಿ.ಖಾದರ್ …. !

ಮಂಗಳೂರು: ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನೆಲ್ ಮಾತ್ರ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ರಾಜ್ಯದಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ಬಗ್ಗೆ ಮಾತನಾಡಿದ ಅವರು , ನಾನು ಇತರರು ಮಾತನಾಡಿದ ರೀತಿಯಲ್ಲಿ ಮಾತನಾಡಲು ಆಗುವುದಿಲ್ಲ. ಈ ವಿಷಯ ನನಗೆ ನಿಮ್ಮಿಂದಲೇ ತಿಳಿದಿರುವುದು. ಸ್ಪೀಕ‌ರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನೆಲ್ ಮಾತ್ರ ಇದೆ ಎಂದು…

Read More

ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ 19 ರ ತನಕ ಚಳಿಗಾಲದ ಅಧಿವೇಶ

ಮಂಗಳೂರು : ಡಿಸೆಂಬರ್ 8 ರಿಂದ 19 ರ ತನಕ ಚಳಿಗಾಲದ ಅಧಿವೇಶವು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು . ಅವರು ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಅಧಿವೇಶದ ಪೂರ್ವಭಾವಿಯಾಗಿ ಸಿದ್ದತೆಗಳು ನಡೆದು ಕೊಂಡು ಬರುತ್ತಿದೆ . ಪ್ರತಿಭಟನೆ ಮಾಡಲು ಸಂವಿಧಾನ ಬದ್ದವಾಗಿ ಅವಕಾಶವನ್ನು ಕಲ್ಪಿಸಿಕೊಡಲಾಗುವುದು . ಈ ಬಾರಿಯ ಅಧಿವೇಶಕ್ಕೆ ಬೆಳಗಾವಿಯ ಜನರು ಸಂಪೂರ್ಣ ಸಹಕಾರ ನೀಡಲಿದ್ದಾರೆ ….

Read More
error: Content is protected !!