ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ
ಮಂಗಳೂರು: ಆಟೋ ರಿಕ್ಷಾ ಪ್ರಯಾಣಿಕರಿಗೆ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಮೊದಲ 1.5 ಕಿ.ಮೀ. ಪ್ರಯಾಣಕ್ಕೆ ಕನಿಷ್ಠ ₹40 ದರ ನಿಗದಿಪಡಿಸಲಾಗಿದೆ. ಗರಿಷ್ಠ ಮೂರು ಮಂದಿ ಪ್ರಯಾಣಿಕರಿಗೆ ಈ ದರ ಅನ್ವಯವಾಗಲಿದೆ. ನಂತರದ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ₹20 ದರ ವಿಧಿಸಬಹುದಾಗಿದೆ. ಆಟೋ ಕಾಯುವಿಕೆಯ ಮೊದಲ 10 ನಿಮಿಷ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷಕ್ಕೆ ಅಥವಾ ಅದರ ಭಾಗಕ್ಕೆ ₹5 ದರ ವಿಧಿಸಲು ಅವಕಾಶ ನೀಡಲಾಗಿದೆ. ಪ್ರಯಾಣಿಕರ ಲಗೇಜ್‌ಗೆ ಮೊದಲ 20 ಕೆ.ಜಿ.ವರೆಗೆ ಯಾವುದೇ ಶುಲ್ಕ…
