ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ -ನಮ್ಮ ಹೆಮ್ಮೆ” ಘೋಷಣೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಾಜ್ಯಮಟ್ಟದಲ್ಲಿ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ “
ಮಂಗಳೂರಿನಲ್ಲಿ 1843 ಜುಲೈ 1ರಂದು ಮಂಗಳೂರು ಸಮಾಚಾರ ಎಂಬ ಕನ್ನಡದ ಪ್ರಥಮ ಪತ್ರಿಕೆ ಮುದ್ರಣಗೊಂಡಿತ್ತು. ಕನ್ನಡ ಪತ್ರಿಕೋದ್ಯಮದ 183 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ 2026 ಜುಲೈ 1 ರಿಂದ 2027 ಜುಲೈ 1ರ ತನಕ ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ ನಮ್ಮ ಹೆಮ್ಮೆ” ಘೋಷಣೆಯೊಂದಿಗೆ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ”ವನ್ನು ಪ್ರಾರಂಭಿಸಲಾಗಿದೆ. ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು…
