ವಿಪ್ರ ವೇದಿಕೆ ದಶಮಾನೋತ್ಸವ ಸಮಾರೋಪ ಆ.16ರಂದು; ‘ವಿಪ್ರ ಚಿತ್ರ ಸಂಚಯ’ ಲೋಕಾರ್ಪಣೆ
ಮಂಗಳೂರು:ವಿಪ್ರ ವೇದಿಕೆ (ರಿ) ಸ್ಥಾಪನೆಯಾಗಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿ 11ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ದಶಮಾನೋತ್ಸವ ಸಮಾರೋಪ ಸಮಾರಂಭವನ್ನು ಆಗಸ್ಟ್ 16ರಂದು ಬೆಳಿಗ್ಗೆ 8.30 ರಿಂದ ಕೋಡಿಕಲ್‌ನ ಶ್ರೀ ಬೆನಕ ಜ್ಯೋತಿಷ್ಯಾಲಯದ ವೇ.ಮೂ. ಶ್ರೀ ವಿಶ್ವಕುಮಾರ್ ಜೋಯಿಸರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಮಾನೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರೋಪ ಸಮಾರಂಭದ ಸ್ಮರಣಾರ್ಥ…
