SDPI ಮುಖಂಡ, ಹಿರಿಯ ಸಾಮಾಜಿಕ ಧಾರ್ಮಿಕ ಧುರೀಣ ಹಾಜಿ ಇಬ್ರಾಹಿಂ ಸಾಗರ್ ಪುತ್ತೂರು ನಿಧನ: ಗಣ್ಯರಿಂದ ತೀವ್ರ ಸಂತಾಪ
ಪುತ್ತೂರು: ಸೋಶಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸದಸ್ಯರು, ಹಿರಿಯ ಉದ್ಯಮಿ ಹಾಗೂ ಪ್ರಮುಖ ಸಾಮಾಜಿಕ, ಧಾರ್ಮಿಕ ಮುಖಂಡರಾಗಿದ್ದ ಪುತ್ತೂರಿನ ಹಾಜಿ ಇಬ್ರಾಹಿಂ ಸಾಗರ್ (62) ರವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್‌ಗೆ ಒಳಗಾಗಿದ್ದರು. ಇದರೊಂದಿಗೆ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಯೂ ಉಲ್ಬಣಿಸಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ…
