ಕಟಪಾಡಿ ಅಂಡರ್‌ಪಾಸ್ ಏಪ್ರಿಲ್ 10ರಿಂದ ಸಂಚಾರಕ್ಕೆ ಮುಕ್ತ
ಕಟಪಾಡಿ ರಾ. ಹೆ. 66ರ ಕಟಪಾಡಿ ಜಂಕ್ಷನ್‌ನಲ್ಲಿ ರಾ. ಹೆ. ಅಂಡರ್‌ಪಾಸ್ ಮತ್ತು ವೆಹಿಕಲ್ ಓವರ್‌ಪಾಸ್ ನಿರ್ಮಾಣ ಕಾಮಗಾರಿ ಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪರಿಶೀಲಿಸಿದರು. ಸಂಸದ ಕೋಟ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕಟಪಾಡಿ ಜಂಕ್ಷನ್ ಭಾಗದಲ್ಲಿ ಪ್ರಥಮ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕುಂದಾಪುರ ಮಂಗಳೂರು ಮಾರ್ಗದ ರಾ. ಹೆ. ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದ್ದು, ಎ. 10 ರಂದು ಬೆಳಗ್ಗೆ 10.30ಕ್ಕೆ ವಾಹನಗಳ ಸಂಚಾರಕ್ಕೆ ಚಾಲನೆ…
