ನಿರಂತರ ತೈಲ ಬೆಲೆಯೇರಿಕೆ,ಉಜ್ವಲ ಸಿಲಿಂಡರ್ ರಿಯಾಯಿತಿ ಇಳಿಕೆ: ಕಾರ್ಮಿಕ ವರ್ಗಗಳಿಗೆ ಕೇಂದ್ರ ಸರಕಾರದ ಅನ್ಯಾಯದ SDTU ವತಿಯಿಂದ ಅಭಿಯಾನ
ಇತ್ತೀಚೆಗೆ ನಡೆಯುತ್ತಿರುವ ಮಧ್ಯ ಪ್ರಾಚ್ಯ ರಾಷ್ಟ್ರಗಳ ಯುದ್ಧದ ನೆಪವನ್ನಿಟ್ಟುಕೊಂಡು ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ತೈಲಬೆಲೆಯೇರಿಕೆ ಮಾಡುತ್ತಿದ್ದು ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಸಿಲಿಂಡರ್ ಸಂಖ್ಯೆಯನ್ನು ಕಳೆದ ವರ್ಷಕ್ಕಿಂತ ಕಡಿತಗೊಳಿಸಿ ನಾಲ್ಕಕ್ಕೆ ಸೀಮಿತಗೊಳಿಸಿರುವುದು ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ ಸಂಕಷ್ಟವನ್ನುಂಟು ಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮ್ ಗುರುವಾಯನಕೆರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ…
