ಮಂಗಳೂರು ಖಾಸಗಿ ಬಸ್ ಪ್ರಯಾಣ ದರ ಏರಿಕೆ: ಕನಿಷ್ಠ ದರ ₹13ಕ್ಕೆ ಹೆಚ್ಚಳ
ಮಂಗಳೂರು: ನಗರದ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಇಂದಿನಿಂದ ಪರಿಷ್ಕರಿಸಲಾಗಿದ್ದು, ಕನಿಷ್ಠ ಪ್ರಯಾಣ ದರದಲ್ಲಿ ₹1ರಷ್ಟು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಕನಿಷ್ಠ ಬಸ್ ದರ ₹12 ಇದ್ದು, ಹೊಸ ದರ ಪರಿಷ್ಕರಣೆಯಂತೆ ಅದು ₹13ಕ್ಕೆ ಏರಿಕೆಯಾಗಿದೆ. ಇಂಧನ ಬೆಲೆ, ನಿರ್ವಹಣಾ ವೆಚ್ಚ ಹಾಗೂ ಇತರೆ ಕಾರ್ಯಾಚರಣಾ ಖರ್ಚುಗಳ ಹೆಚ್ಚಳದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಬಸ್ ಮಾಲೀಕರ ಸಂಘದ ಮೂಲಗಳು ತಿಳಿಸಿವೆ. ಹೊಸ ದರ ಪಟ್ಟಿ ಇಂದಿನಿಂದಲೇ ಜಾರಿಗೆ ಬಂದಿದ್ದು, ಮಂಗಳೂರು ನಗರ ವ್ಯಾಪ್ತಿಯಲ್ಲಿ…
