ಕಾಸರಗೋಡಿನಲ್ಲಿ ಬಾಲಗೋಕುಲ ವಾರ್ಷಿಕ ಮಹಾಸಭೆಗೆ ಚಾಲನೆ
ಕಾಸರಗೋಡು: ಬಾಲಗೋಕುಲ ವಾರ್ಷಿಕ ಮಹಾಸಭೆಗೆ ಕಾಸರಗೋಡಿನಲ್ಲಿ ಭಾನುವಾರ ಚಾಲನೆ ದೊರೆಯಿತು. ಕೇಂದ್ರ ಸಚಿವ ಶ್ರೀಪಾದ್ ಯಶೋ ನಾಯಕ್ ಮಹಾಸಭೆಯನ್ನು ಉದ್ಘಾಟಿಸಿದರು. ಉತ್ತರ ಕೇರಳ ರಾಜ್ಯಾಧ್ಯಕ್ಷ ಎಂ. ಸತ್ಯನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಿ. ಸದಾನಂದನ್ ಮಾಸ್ಟರ್, ಸಂಸದರು ಭಾಗವಹಿಸಿದರು. ಕೊಂಡೆಯೂರು ನಿತ್ಯಾನಂದ ಯೋಗಾಶ್ರಮದ ಸ್ವಾಮಿ ಯೋಗಾನಂದ ಸರಸ್ವತಿ ಆಶೀರ್ವಚನ ನೀಡಿದರು. ಬಾಲಗೋಕುಲಂ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ವರ್ಕಿಂಗ್ ಚೇರ್ಮನ್ ನಿವೃತ್ತ ಎಸ್‌ಪಿ ಹರಿಶ್ಚಂದ್ರ ನಾಯಕ್, ಬಾಲಸಾಹಿತಿ ಪ್ರಕಾಶನ ಚೇರ್ಮನ್…
