ಚಿತ್ತಾರಿಯಲ್ಲಿರುವ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ … ! ಉಲ್ಪೆ ಸಮರ್ಪಣೆ

ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕೇರಳ ಥೆಯ್ಯಮ್ ಆಚರಣೆಗೆ ಪ್ರಸಿದ್ದ. ಕರ್ನಾಟಕದ ಕರಾವಳಿ ಜಿಲ್ಲೆ ಅರ್ಥಾತ್ ತುಳುನಾಡೆಂದು ಪರಿಗಣಿಸಿಲ್ಪಟ್ಟ ಅವಿಭಜಿತ ದಕ್ಷಿಣ ಕನ್ನಡ ಭೂತಾರಾಧನೆ ಗೆ ಪ್ರಸಿದ್ದ, ಕೇರಳದ ಥೆಯ್ಯಮ್ ಕುರಿತು ಒಂದು ನೊಟ ಇಲ್ಲಿದೆ. ಚಂದ್ರಗಿರಿ ನದಿಯ ದಕ್ಷಿಣದ ಪುಣ್ಯ ಕ್ಷೇತ್ರ ,ಕಾವು, ಗುಡಿಗಳಲ್ಲಿ ಕಳಿಯಾಟ ಮಹೋತ್ಸವ ಎಂಬ ವಿಶಿಷ್ಟ ಆರಾಧನೆ ವೃಶ್ಚಿಕ ಮಾಸದಲ್ಲಿ ನಡೆಯುತ್ತದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೂರದ ಊರುಗಳಿಂದಲ್ಲು ಭಕ್ತರು ಬಂದು ಹರಕೆ…

Read More

ಕಾಸರಗೋಡಿನಲ್ಲಿ ಪತ್ತೆಯಾದ ಮಹಾಶಿಲಾ ಸಂಸ್ಕೃತಿಯ ಗುಹೆ , ಉತ್ಪನನದಲ್ಲಿ ಮಡಿಕೆ ಅವಶೇಷ, ಕಬ್ಬಿಣದ ಉಪಕರಣಗಳು ಪತ್ತೆ …. !

ಕಾಸರಗೋಡು:ಕುಟ್ಟಿಕೋಲ್ ಪಂಚಾಯತ್‌ ಬಂದಡ್ಕ ಮಣಿಮೂಲ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸಿದ ಇತ್ತೀಚಿನ ಉತ್ಪನನ ಕಾರ್ಯದಲ್ಲಿ ಮಹಾಶಿಲಾ ಸಂಸ್ಕೃತಿಗೆ ಸೇರಿದ ನೂತನ ಅವಶೇಷಗಳು ಪತ್ತೆಯಾಗಿದ್ದು, ಇಲ್ಲಿ ಪುರಾತನ ಮಾನವ ವಾಸದ ಇತಿಹಾಸಕ್ಕೆ ಮತ್ತೊಂದು ದೃಢ ಸುಳಿವು ಸಿಕ್ಕಂತಾಗಿದೆ. ಕಲ್ಪತಾಯಮ ಪ್ರದೇಶದಲ್ಲಿ ನಡೆದ ಅಧ್ಯಯನದ ವೇಳೆ ಮುರಿದ ಮಡಿಕೆ ತುಂಡುಗಳು, ಕಬ್ಬಿಣದ ಉಳಿ, ಮತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದು, ತಜ್ಞರ ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.ಇದಕ್ಕೂ ಮೊದಲು, ಏಪ್ರಿಲ್ 4ರಂದು ಜಲಜೀವನ ಯೋಜನೆಗಾಗಿ ನಡೆದ…

Read More

ಅರುವತ್ತು ಸಾವಿರ ಕೋಟಿ ಗ್ರಾಹಕರ ಠೇವಣಿ ತುಂಬಿದ ಕೇರಳ ಗ್ರಾಮೀಣ ಬ್ಯಾಂಕ್

ಮಂಜೇಶ್ವರ :ಕೃಷಿಕರ ಬ್ಯಾಂಕ್ ಎಂದು ಪ್ರಸಿದ್ದಿ ಪಡೆದಿರುವ ಕೇರಳ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 635 ಶಾಖೆ ಹೊಂದಿರುವ ಬ್ಯಾಂಕಿನಲ್ಲಿ ಅರುವತ್ತು ಸಾವಿರ ಕೋಟಿ ಗ್ರಾಹಕರ ಠೇವಣಿ ತುಂಬಿದ ಈ ಸಂದರ್ಭದಲ್ಲಿ ಗ್ರಾಹಕರು ಕೃಷಿಕರು ಬ್ಯಾಂಕ್ ಸಿಬ್ಬಂದಿಗಳು ಸೇರಿ ಕೇಕ್ ಕತ್ತರಿಸುವ ಮೂಲಕ ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನನಲ್ಲಿ ಸಂತೋಷ ಕೂಟ ಆಚರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾವೂರು ಶಾಖೆಯ ಮೆನೇಜರ್ ಶ್ರುತಿ C. ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ನೆರವೇರಿಸಿದರು…

Read More

ಮಂಜೇಶ್ವರದಲ್ಲಿ ಬಿಸಿಯೇರುತ್ತಿರುವ ಸ್ಥಳೀಯಾಡಳಿತ ಚುನಾವಣಾ ಚಟುವಟಿಕೆ : ಯುಡಿಎಫ್ ಮಂಜೇಶ್ವರ ಎರಡನೇ ವಾರ್ಡ್ ಕಚೇರಿ ಉದ್ಘಾಟನೆ

ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿಸಿಯೇರುತ್ತಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡಿನ ಯು ಡಿ ಎಫ್ ಚುನಾವಣಾ ಕಚೇರಿಯನ್ನು ವಡಗರ ಸಂಸದ ಶಾಫಿ ಪರಂಬಿಲ್ ಉದ್ಘಾಟಿಸಿದರು.ಉದ್ಘಾಟನಾ ಸಮಾರಂಭವು ಉತ್ಸಾಹಭರಿತ ವಾತಾವರಣದಲ್ಲಿ ನಡೆದಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ದೊಡ್ಡ ಉಪಸ್ಥಿತಿ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಎರಡನೇ ವಾರ್ಡ್ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು, ಜಿಲ್ಲಾ ಪಂಚಾಯತ್ ವರ್ಕಾಡಿ ಡಿವಿಷನ್ ಅಭ್ಯರ್ಥಿ ಹರ್ಷಾದ್ ವರ್ಕಾಡಿ ಸೇರಿದಂತೆ…

Read More

ಸಾರಿಗೆ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ -ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲು

ಮಂಜೇಶ್ವರ : ಸಾರಿಗೆ ಬಸ್ಸಿನಲ್ಲಿ ಸಂಚರಿಸುತಿದ್ದ ವಿದ್ಯಾರ್ಥಿನಿಗೆ ನಿರ್ವಾಹಕ ಕಿರುಕುಳ ನೀಡಿದ್ದಾನೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯನ್ನು ಇತರ ಪ್ರಯಾಣಿಕರ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಾರಿ ಮಧ್ಯೆ ಕೆಳಗಿಳಿಸಿರುವುದಾಗಿ ವಿದ್ಯಾರ್ಥಿನಿ ದೂರಿದ್ದಾಳೆ. ಮಂಗಳವಾರ ಬೆಳಿಗ್ಗೆ ಬಂದ್ಯೋಡ್ ನಲ್ಲಿ ಈ ಘಟನೆ ನಡೆದಿದೆ.ಗಡಿ ಪ್ರದೇಶದಲ್ಲಿರುವ ಕಾಲೇಜೊಂದರಲ್ಲಿ ಅಂತಿಮ ಬಿ ಸಿ ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬಂದ್ಯೋಡ್ ನಿಂದ ಕರ್ನಾಟಕ ಸಾರಿಗೆ ಬಸ್ಸು ನೋಂದಣಿ ಸಂಖ್ಯೆ ಕೆ ಎ 19 ಎಫ್ 3421 ಬಸ್ಸಿಗೆ ಹತ್ತಿದ್ದಾಳೆ. ಇಂತಹ ಪ್ರಯಾಣದ…

Read More

ಪಶುಗಳ ಆಕೃತಿಯನ್ನು ಹೋಲುವ ಎರಡು ಆದಿ ಕಾಲದ ಶಿಲಾ ವರ್ಣಚಿತ್ರಗಳ ಪತ್ತೆ….. !

ಕಾಸರಗೋಡು: ಎರಿಕ್ಕುಲಂ ವಲಿಯ ಪಾರಾದಲ್ಲಿ ಪೂರಕ ಶಿಲಾ ಅಧ್ಯಯನದ ವೇಳೆ, 20 ಚದರ ಮೀಟರ್ ಪ್ರದೇಶದಲ್ಲಿರುವ ‘ಕರಿಂಪರಾ’ ಬಂಡೆಯಲ್ಲಿ ಇನ್ನೂ ಎರಡು ಹೊಸ ಶಿಲಾ ವರ್ಣಚಿತ್ರಗಳು ಪತ್ತೆಯಾಗಿವೆ ಕೇರಳ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ವೇಳೆ ಈ ಪತ್ತೆ ನಡೆದಿದೆ.ಹೊಸವಾಗಿ ಕಂಡುಬಂದಿರುವ ಚಿತ್ರಗಳು ಎಂಟುಕುಡುಕ ಮತ್ತು ಅರಿಯಟ್ಟ ಪಾರಾ ಪ್ರದೇಶಗಳಲ್ಲಿ ಕಂಡುಬರುವ ದನಗಳ ಆಕೃತಿಗಳನ್ನು ಹೋಲುತ್ತವೆ ಪ್ರಾಣಿಗಳ ಚಿತ್ರಗಳು ನೈಋತ್ಯ ದಿಕ್ಕಿಗೆ ಸಾಗುವ ರೀತಿಯಲ್ಲಿ ಕತ್ತಲ್ಪಟ್ಟಿರುವುದು ಗಮನಾರ್ಹ. ಶತಮಾನಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿಯಿಂದ ವಯನಾಡಿನವರಗಿನ ಕೆಂಪು…

Read More

ಸತ್ಯಸಾಯಿ ಬಾಬಾ ರ ಶತಾಬ್ದಿ ಮತ್ತು ನವಚೇತನ ಕೇರ್ ಸೆಂಟರ್ ಲೋಕಾರ್ಪಣೆ

ದೈಗೋಳಿ : ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಯಲ್ಲಿ ಸತ್ಯ ಸಾಯಿ ಬಾಬಾರವರ ಶತಾಬ್ದಿ ಉತ್ಸವ ಮತ್ತು ನೂತನವಾಗಿ ನಿರ್ಮಿಸಲಾದ ನವಚೇತನ ಸೆಂಟರ್ ನ ಲೋಕಾರ್ಪಣೆಯು ತಾ. 23 ಭಾನುವಾರದಂದು ನಡೆಯಿತು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮಿಗಳು ಕೇರ್ ಸೆಂಟರ್ ನ್ನು ಲೋಕಾರ್ಪಣೆ ಗೈದರು. ಬೆಳಗ್ಗೆ 9 ರಿಂದ ಧನ್ವಂತರಿ ಪೂಜೆ ನಡೆದು ನಂತರ ಬೃಜೇಶ್ ಚೌಟ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಮಣಿಪಾಲ…

Read More

ಕಾಸರಗೋಡು : ರಸಮಂಜರಿ ಕಾರ್ಯಕ್ರಮದ ವೇಳೆ ಕಾಲ್ತುಳಿತ – 15 ಮಂದಿಗೆ ಗಾಯ

ಕಾಸರಗೋಡು:  ನಗರದ ಹೊರವಲಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಿಂದ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತದಿಂದ ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಸರಗೋಡು ನಗರದ ಹಲವು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಫ್ಲೀ ಯುವಜನ ಸಂಘಟನೆ ವತಿಯಿಂದ ನುಳ್ಳಿಪ್ಪಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಹೆಸರಾಂತ, ಗಾಯಕ ಹನಾನ್ ಷಾ ಅವರ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರಿದ್ದರು. ಕಾರ್ಯಕ್ರಮಕ್ಕೆ…

Read More

ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ಶ್ರೀಮತಿ ರೂಪಕಲಾ ದಂಪತಿ ವಿವಾಹ “ರಜತ ಸಂಭ್ರಮ “

ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಮುಂದಾಳು ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ರೂಪಕಲಾ ದಂಪತಿಗಳ ವಿವಾಹದ 25ನೇ ವರ್ಷಚಾರಣೆ, ವಿವಾಹ ರಜತ ಸಂಭ್ರಮ ಕಾರ್ಯಕ್ರಮ, ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ 15.11.2025 ರಂದು ಅದ್ದೋ ರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೊಳ್ಳ ದಂಪತಿಗಳು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ಸೀರೆ, ಧೋತಿ ವಸ್ತ್ರ, ಗಳೊಂದಿಗೆ ಭಾಗಿನ ಸಮರ್ಪಿಸಿ ಗೌರವಿಸಿದರು. ಸುಮಾರು 25 ಮಂದಿ…

Read More

ಸ್ಥಳೀಯಾಡಳಿತ ಚುನಾವಣೆ-ಯುಡಿಎಫ್ ಒಳಜಗಳ ಗಂಭೀರ ಸ್ವರೂಪ

ಮಂಜೇಶ್ವರ: ಮಂಜೇಶ್ವರದಲ್ಲಿ ಸ್ಥಳೀಯಾಡಳಿತ ಚುನಾವಣೆಯನ್ನು ಮುನ್ನಡೆಸುವ ಹಿನ್ನೆಲೆ ಯುಡಿಎಫ್ ಒಳಜಗಳ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯುಡಿಎಫ್ ಮೈತ್ರಿಯೊಳಗಿನ ಪಕ್ಷ ಹಂಚಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗೆ ಸೀಟು ನೀಡದಿರುವುದು ಹೊಸ ತಳಹದಿಯ ಉದ್ವಿಗ್ನತೆಯನ್ನು ಉಂಟುಮಾಡಿದೆ. ಇದರ ಪರಿಣಾಮವಾಗಿ ಬಾನುವಾರ ಬೆಳಿಗ್ಗೆ ಮಂಜೇಶ್ವರ ಹೊಸಂಗಡಿಯಲ್ಲಿ ಇರುವ ಕಾಂಗ್ರೆಸ್ ಕಚೇರಿಯನ್ನು ಸ್ಥಳೀಯ ಕಾರ್ಯಕರ್ತರು ಸಂಕೇತಾತ್ಮಕವಾಗಿ ಮುಚ್ಚುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕಚೇರಿ ಮುಚ್ಚುವ ಸಂದರ್ಭ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೇತಾರರು ಈ ಬಾರಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಂಜೇಶ್ವರ ಕಾಂಗ್ರೆಸ್ ನೇತಾರರು…

Read More
error: Content is protected !!