ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ಭರ್ಜರಿ ಬೇಟೆ: 595.68 ಗ್ರಾಂ ಚಿನ್ನದೊಂದಿಗೆ ಪಶ್ಚಿಮ ಬಂಗಾಳದ ವ್ಯಕ್ತಿ ಬಂಧನ

ಮಂಜೇಶ್ವರ: ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ, ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 595.68 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳ ಮೂಲದ ಸುರ್ಜಿತ್ ಖೋರಾಯ್ ಎಂಬಾತನನ್ನು ಎಕ್ಸೈಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ​ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KA 19 F 3416) ಈತ ಚಿನ್ನವನ್ನು ಸಾಗಿಸುತ್ತಿದ್ದನು. ಖಚಿತ ಮಾಹಿತಿಯ ಮೇರೆಗೆ ತಪಾಸಣೆ ನಡೆಸಿದ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಜೋಸೆಫ್ ಪಿ.ಎ. ಮತ್ತು ಅವರ…

Read More

ಮಳೆಯಿಂದ ಮನೆ ಕುಸಿತ: ಕುಟುಂಬದ ನೆರವಿಗೆ ಧಾವಿಸಿದ ಕಲ್ಕಿ ಯುವಕರ ತಂಡ

ಮಂಜೇಶ್ವರ, ಜೂನ್ 20: ಈ ಬಾರಿಯ ಭಾರೀ ಮಳೆಯಿಂದ ಮಂಜೇಶ್ವರ ಸಮೀಪದ ಮಜಿಬೈಲ್ ಪ್ರದೇಶದಲ್ಲಿ ಮನೆಯೊಂದು ಹಾನಿಗೊಳಗಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ನೆರವಿಗೆ ಸ್ಥಳೀಯ ಕಲ್ಕಿ ಯುವಕ ತಂಡ ಧಾವಿಸಿ ಮಾನವೀಯತೆ ಮೆರೆದಿದೆ. ಕೇಶವ ಮತ್ತು ಲಲಿತ ದಂಪತಿಗಳ ಮನೆ ಮಳೆಯಿಂದ ಹಾನಿಗೊಳಗಾಗಿದ್ದು, ಕುಟುಂಬದ ಸದಸ್ಯರು, ಸೊಸೆಯಂದಿರು ಹಾಗೂ ಪುಟ್ಟ ಮಕ್ಕಳು ಇದೇ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವನೋಪಾಯಕ್ಕಾಗಿ ಮನೆಯ ಒಬ್ಬ ಸದಸ್ಯ ಲಾಟರಿ ವ್ಯವಹಾರ ನಡೆಸುತ್ತಿದ್ದು, ಮನೆ ಹಾನಿಗೊಳಗಾದ ಕಾರಣ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು….

Read More

ಆರಿಕ್ಕಾಡಿ: ತೆರವುಗೊಂಡ ಟೋಲ್‌ಗೇಟ್ : ಆದರೆ ಅಪಾಯಕಾರಿ ಹಂಪ್‌ಗಳ ಕಾಟ ನಿರಂತರ

ಮಂಜೇಶ್ವರ : ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್ ತೆರವುಗೊಂಡು ನಾಲ್ಕು ತಿಂಗಳೇ ಕಳೆದಿದ್ದರೂ, ಅಲ್ಲಿನ ಅವೈಜ್ಞಾನಿಕ ಹಂಪ್‌ಗಳು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿವೆ.ಟೋಲ್ ಇಲ್ಲದ ಕಾರಣ ಅತಿವೇಗದಲ್ಲಿ ಬರುವ ವಾಹನಗಳು, ಇದ್ದಕ್ಕಿದ್ದಂತೆ ಹಂಪ್ ಕಂಡು ಬ್ರೇಕ್ ಹಾಕುತ್ತಿರುವುದು ಸರಣಿ ಅಪಘಾತಗಳಿಗೆ ಕಾರಣವಾಗಿದೆ. ​ ಕಳೆದ ದಿನ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿರುವುದು ಇಲ್ಲಿನ ದುಸ್ಥಿತಿಗೆ ಸಾಕ್ಷಿಯಾಗಿದೆ. ಟೋಲ್‌ಗೇಟ್ ಇಲ್ಲವೆಂದು ತಿಳಿದು ವೇಗವಾಗಿ ಬರುವ ವಾಹನ ಸವಾರರಿಗೆ, ಹತ್ತಿರ ಬಂದಾಗ ಮಾತ್ರ ಹಂಪ್ ಕಾಣಿಸಿಕೊಳ್ಳುತ್ತದೆ. ಇದರಿಂದ ದಿಢೀರ್ ಬ್ರೇಕ್ ಹಾಕುವ…

Read More

ಶ್ರೀಮತಿ ಲತಾ ಬಾಳೆಹೊನ್ನೂರು, ಇವರೀಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಸಾಹಿತ್ಯ ರತ್ನ “ಅಚೀವ್ಮೆಂಟ್ ಅವಾರ್ಡ್ 2026

ಕಾಸರಗೋಡು, ಜೂನ್ 20: ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.223/2008), ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನದ ಅಂಗಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನದ ರಜತ ಸಂಭ್ರಮ ಕಾರ್ಯಕ್ರಮಗಳ ಸಮಾರೋಪ ಅಂಗವಾಗಿ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ – 2026” ಜುಲೈ 26ರಂದು ನಡೆಯಲಿದೆ. ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ದಿವಂಗತ ಡಾ. ಲಲಿತಾ ಎಸ್.ಎನ್. ಭಟ್ ಅವರ ಹೆಸರಿನ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು, ಕನ್ನಡ…

Read More

ಕುರುಡಪದವು ಶಾಲೆಯಲ್ಲಿ ವಾಚನಾ ದಿನದ ಔಪಚಾರಿಕ ಉದ್ಘಾಟನೆ

ಕುರುಡಪದವು: ಎ ಯು ಪಿ ಶಾಲೆ ಕುರುಡಪದವಿನಲ್ಲಿ ವಾಚನಾ ದಿನದ ಔಪಚಾರಿಕ ಉದ್ಘಾಟನೆಯು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಬಷೀರ್ ಸಾಪ್ಟ್ಕೋ ವಹಿಸಿದ್ದರು.ವಿಧ್ಯಾರ್ಥಿನಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಗಿರೀಶ್ ಸರ್ ವಾಚನ ದಿನದ ಪ್ರಾಸ್ತಾವಿಕ ನುಡಿಗಳಾಡುದರೊಂದಿಗೆ ಅಥಿತಿಗಳೂ ಸೇರಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.ಸತ್ಯ ಸಾಯಿ ಲೋಕ ಸೇವಾ ಶಾಲೆ ಅಳಿಕೆ ಇಲ್ಲಿನ ನಿವೃತ್ತ ಗಣಿತ ಅಧ್ಯಾಪಕರಾದ ಶ್ರೀ ಉದನೇಶ್ವರ ಭಟ್ ಅಳಿಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು…

Read More

ಶ್ರೀಮತಿ ಜ್ಯೋತಿ ವಿನಾಯಕ್ ಭಟ್ ಶಿರ್ಸಿ ಇವರೀಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026

ಕಾಸರಗೋಡು, ಜೂನ್ 20: ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008), ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನದ ಅಂಗಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನದ ರಜತ ಸಂಭ್ರಮ ಕಾರ್ಯಕ್ರಮಗಳ ಸಮಾರೋಪ ಅಂಗವಾಗಿ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ – 2026” ಜುಲೈ 26, 2026ರಂದು ನಡೆಯಲಿದೆ. ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ದಿವಂಗತ ಡಾ. ಲಲಿತಾ ಎಸ್.ಎನ್. ಭಟ್ ಅವರ ಹೆಸರಿನ ವೇದಿಕೆಯಲ್ಲಿ ನಡೆಯಲಿರುವ…

Read More

ದ್ವಿಚಕ್ರ ವಾಹನದಿಂದ ಬಿದ್ದು ತಾಯಿ ದುರ್ಮರಣ: ಮಗನ ಕಣ್ಣೆದುರೇ ನಡೆದ ದುರಂತ; ಕುಟುಂಬದಲ್ಲಿ ಶೋಕ

ಮಂಜೇಶ್ವರ, ಜೂನ್ 20: ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ತಾಯಿಯೊಬ್ಬರು ಮೃತಪಟ್ಟ ಘಟನೆ ಕುಂಬ್ಳೆ ದೇವಿನಗರದಲ್ಲಿ ನಡೆದಿದೆ. ಕುಂಬ್ಳೆ ಸುನಾಮಿ ಕಾಲನಿಯ ನಿವಾಸಿ ಅಂದಿಕ್ಕ (48) ಮೃತಪಟ್ಟ ದುರ್ದೈವಿ. ಮಗ ಮುಬಾರಕ್ (19) ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ತಾಯಿ ಮಗನ ಕಣ್ಣೆದುರೇ ಪ್ರಾಣ ಕಳೆದುಕೊಂಡಿರುವುದು ಕುಟುಂಬದವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಘಟನೆಯಲ್ಲಿ ಮುಬಾರಕ್ ಅವರಿಗೆ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರ ನೆರವಿನಿಂದ…

Read More

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಡಾ. ವಾಮನ್ ರಾವ್ ಬೇಕಲ್

ಕಾಸರಗೋಡು, ಜೂನ್ 20: ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿಗೆ ಮಾತ್ರ ಸೀಮಿತವಾಗದೆ ಜ್ಞಾನ ವಿಸ್ತರಣೆಗಾಗಿ ವಿವಿಧ ವಿದ್ವತ್ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಪ್ರತಿಯೊಂದು ಮನೆಯಲ್ಲಿ ಪುಟ್ಟ ಗ್ರಂಥಾಲಯ ಸ್ಥಾಪಿಸುವ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹೇಳಿದರು. ನಗರದ ಬಿ.ಇ.ಎಂ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ವಾಚನ ವಾರಾಚರಣೆಯ ಅಂಗವಾಗಿ ನಡೆದ ‘ಜೀವನದಲ್ಲಿ ಪುಸ್ತಕದ ಪ್ರಸ್ತುತತೆ’ ವಿಷಯದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಓದುವ ಸಂಸ್ಕೃತಿ…

Read More

ಜುಲೈ 26ರಂದು ಕಾಸರಗೋಡಿನಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ-2026’

ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗಡಿನಾಡಿನ ಸಮಸ್ಯೆಗಳ ಕುರಿತು ಚರ್ಚೆಗೆ ವೇದಿಕೆ ಕಾಸರಗೋಡು, ಜೂನ್ 20: ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗಡಿನಾಡಿನ ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚಿಸಲು ವೇದಿಕೆಯಾಗಲಿರುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ-2026’ ಜುಲೈ 26ರಂದು ಕಾಸರಗೋಡು ಜಿಲ್ಲೆಯ ನುಳ್ಳಿಪಾಡಿಯ ಕನ್ನಡ ಭವನದಲ್ಲಿ ನಡೆಯಲಿದೆ. ಕನ್ನಡ ಭವನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ಡಾ. ಸಿದ್ರಾಮ ನೀಲಜಗಿ ಸಾರಥ್ಯದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಹಾಗೂ ಕರ್ನಾಟಕದ ಸಹಯೋಗದಲ್ಲಿ ಈ ಸಮ್ಮೇಳನವನ್ನು…

Read More

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನ ದಾರುಣ ಸಾವು

ಮಂಜೇಶ್ವರ: ಕುಂಬಳೆ ನಾಯ್ಕಾಪು ಮುಜಂಗಾವು ಎಂಬಲ್ಲಿ ಶುಕ್ರವಾರ ಸಂಜೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಿಂದ ಆಯತಪ್ಪಿ ಬಿದ್ದು ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೇಳ ನಿವಾಸಿ ಫ್ರಾನ್ಸಿಸ್ ಡಿಸೋಜ (47) ಸಾವನ್ನಪ್ಪಿದ ದುರ್ದೈವಿ.​ಮನೆ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದಾಗ ಫ್ರಾನ್ಸಿಸ್ ಅವರು ಆಕಸ್ಮಿಕವಾಗಿ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸಹೋದ್ಯೋಗಿಗಳು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

Read More
error: Content is protected !!