ವಿಟ್ಲದಲ್ಲಿ ದಾರುಣ ಘಟನೆ: ಲಾರಿ ದುರಸ್ತಿ ಮಾಡುವಾಗ ಚಕ್ರದ ಅಡಿಗೆ ಸಿಲುಕಿ ಚಾಲಕ ಸಾವು

​ ಮಂಜೇಶ್ವರ : ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಟಿಪ್ಪರ್ ಲಾರಿ ಚಾಲಕನೊಬ್ಬ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಮೃತರನ್ನು ಧರ್ಮಸ್ಥಳ ಪರಿಸರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಅಕ್ರಮ ಬಾಕ್ಸೈಟ್ ಸಾಗಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಲಾರಿಯನ್ನು ಸರಿಪಡಿಸಲು ಮಹೇಶ್ ಅವರು ವಾಹನದ ಕೆಳಗೆ ಹೋಗಿ ಕೆಲಸ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಲಾರಿ ಮುಂದಕ್ಕೆ ಚಲಿಸಿದೆ. ಪರಿಣಾಮ ಚಾಲಕ…

Read More

ಕಾಸರಗೋಡು ಜಿಲ್ಲೆಗೆ ಹೊಸ ಎಸ್ಪಿ: ಇತಿಹಾಸ ನಿರ್ಮಿಸಿದ ನಿತಿನ್ ರಾಜ್

​ಕಾಸರಗೋಡು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ನಿತಿನ್ ರಾಜ್ ಪಿ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಎಸ್ಪಿ ಬಿ.ವಿ. ವಿಜಯ್ ಭರತ್ ರೆಡ್ಡಿ ಅವರಿಂದ ಅವರು ಅಧಿಕಾರದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ​ಈ ನೇಮಕವು ಜಿಲ್ಲೆಯ ಇತಿಹಾಸದಲ್ಲಿ ವಿಶೇಷ ಮಹತ್ವ ಪಡೆದಿದೆ. ಕಾಸರಗೋಡು ಜಿಲ್ಲೆ ಅಸ್ತಿತ್ವಕ್ಕೆ ಬಂದು 44 ವರ್ಷಗಳ ಬಳಿಕ, ಇದೇ ಮೊದಲ ಬಾರಿಗೆ ಸ್ಥಳೀಯರೊಬ್ಬರು ಜಿಲ್ಲೆಯ ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ರಾವಣೇಶ್ವರಂ ಮೂಲದ ಇವರು ಕಾಞಂಗಾಡು ದುರ್ಗಾ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ….

Read More

ಕನ್ನಡ ಸಾಹಿತ್ಯಾಸಕ್ತರ ವಿಳಾಸ ಕೋರಿಕೆ

ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.), ಕನ್ನಡ ಗ್ರಾಮ, ಕಾಸರಗೋಡು ನೇತೃತ್ವದಲ್ಲಿ 2026ರ ನವೆಂಬರ್ 7 ಮತ್ತು 8ರಂದು ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ-2026 ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಕಳುಹಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯಾಸಕ್ತರ ವಿಳಾಸಗಳನ್ನು ಕೋರಲಾಗಿದೆ. ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕಲಾವಿದರು, ಲೇಖಕರು, ಸಾಹಿತಿಗಳು, ಕವಿಗಳು, ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಜಾಲತಾಣಗಳ ಆಡಳಿತಗಾರರು, ಸಾರ್ವಜನಿಕರು…

Read More

ಉಡುಪಿಯ ಸರಿಗಮಭಾರತಿ ಸಂಗೀತ ಶಾಲೆಯ ಸಂಸ್ಥಾಪಕಿ, ವಿಧುಷಿ ಶ್ರೀಮತಿ ಉಮಾಶಂಕರಿ ಟಿ. ಕೆ , ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್‌ಗೆ ಆಯ್ಕೆ

ಕಾಸರಗೋಡು: ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಸಾರಥ್ಯದ ಕನ್ನಡ ಭವನ ನೀಡುವ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026” ಗೆ ಆಯ್ಕೆಯಾಗಿದ್ದಾರೆ. ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜುಲೈ 26, 2026ರಂದು ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026” ಹಾಗೂ ಕನ್ನಡ ಭವನ ರಜತ ಸಂಭ್ರಮ ಸಮಾರೋಪ ಸಮಾರಂಭದಲ್ಲಿ…

Read More

ಉದ್ಯೋಗದಿಂದ ತೆಗೆದ ದ್ವೇಷಕ್ಕೆ ಹೋಟೆಲ್ ಕಳ್ಳತನ: ಆರೋಪಿ ಅಶ್ರಫ್ ಅಲಿ ಬಂಧನ

ಮಂಜೇಶ್ವರ: ಕೆಲಸದಿಂದ ತೆಗೆದುಹಾಕಿದ ಸಿಟ್ಟಿನಿಂದ ಮಾಜಿ ಮಾಲಿಕರ ಹೋಟೆಲ್‌ಗೆ ನುಗ್ಗಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಬೇಕೂರಿನ ಅಶ್ರಫ್ ಅಲಿ (40) ಬಂಧಿತ ಆರೋಪಿ. ಬಂದ್ಯೋಡಿನ ‘ಇರಾನಿ ಅಬ್ಬಾಸಿ ಕಬಾಬ್‌’ ಹೋಟೆಲ್‌ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಅಶ್ರಫ್, ಕೆಲಸದಿಂದ ತೆಗೆದುಹಾಕಿದ ದ್ವೇಷಕ್ಕೆ ಜೂನ್ 13ರಂದು ರಾತ್ರಿ ಹೋಟೆಲ್‌ನ ಬೀಗ ಮುರಿದು ನುಗ್ಗಿದ್ದನು. ಘಟನೆಯಲ್ಲಿ 53,000 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು. ಕುಂಬಳೆ ಎಸ್‌ಐ ಗಣೇಶ್ ನೇತೃತ್ವದ ತಂಡ ಆರೋಪಿಯನ್ನು ಪತ್ತೆ…

Read More

ಮಂಜೇಶ್ವರ: ಲಾಡ್ಜ್‌ ಮೇಲೆ ದಾಳಿ, ಎಂಡಿಎಂಎ-ಗಾಂಜಾ ಸಮೇತ ಇಬ್ಬರ ಬಂಧನ

ಮಂಜೇಶ್ವರ: ಹೊಸಂಗಡಿಯ ಲಾಡ್ಜ್‌ವೊಂದರಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸಂಗ್ರಹಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಚ್ಚಂಪಾಡಿ ನಿವಾಸಿ ಅಹಮ್ಮದ್ ಸೈಫುದ್ದೀನ್ (21) ಮತ್ತು ಹೊಸಬೆಟ್ಟು ನಿವಾಸಿ ಮುಹಮ್ಮದ್ ಮುಸ್ತಾಕ್ (36) ಬಂಧಿತ ಆರೋಪಿಗಳು. ​ಪೊಲೀಸರು ಲಾಡ್ಜ್ ಕೊಠಡಿಯನ್ನು ಶೋಧಿಸಿದಾಗ, ಹಾಸಿಗೆಯ ತಲೆದಿಂಬಿನ ಅಡಿಯಲ್ಲಿ ಬಚ್ಚಿಟ್ಟಿದ್ದ 1.61 ಗ್ರಾಂ ಎಂಡಿಎಂಎ ಹಾಗೂ 38.33 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಅಹಮ್ಮದ್ ಸೈಫುದ್ದೀನ್ ಈ ಹಿಂದೆಯೇ ಎರಡು…

Read More

ಹಿರಿಯ ಚೇತನ ಇಂದಿರಾ ರೈ ಮಾಯಿಪ್ಪಾಡಿಗುತ್ತು ನಿಧನ: ಕಂಬನಿ ಮಿಡಿದ ಬಂಧುಮಿತ್ರರು

ಮಂಜೇಶ್ವರ : ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ, ಕಾಸರಗೋಡಿನ ಹಿರಿಯ ವ್ಯಕ್ತಿತ್ವ, ಮಾಜಿ ಸಂಸದ ಎಂ. ರಾಮಣ್ಣ ರೈ ಅವರ ಸಹೋದರಿ ಹಾಗೂ ಕುಂದ್ಲಾಜೆ ಪಂಚಾಯಿತಿಯ ಮಾಜಿ ಸದಸ್ಯೆ ಇಂದಿರಾ ರೈ ಮಾಯಿಪ್ಪಾಡಿಗುತ್ತು ಅವರು ಇಂದು ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದ ಕಾರಣದಿಂದ ದೈವಾಧೀನರಾಗಿದ್ದಾರೆ. ​ಪುತ್ರಕಳ ದಿ. ರಾಘವ ರೈ ಅವರ ಧರ್ಮಪತ್ನಿಯಾಗಿದ್ದ ಇಂದಿರಾ ರೈ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು.​ಮೃತರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಪುತ್ರರಾದ ಕೂಡ್ಲು…

Read More

​ಗಡಿನಾಡ ಮಹಿಳೆಯರ ಸಂಚಾರಕ್ಕೆ ಸಿಕ್ಕಿತು ಉಚಿತ ಭಾಗ್ಯ: ಮಂಜೇಶ್ವರದಲ್ಲಿ ‘ಪ್ರಿಯದರ್ಶಿನಿ’ ಯೋಜನೆಗೆ ಚಾಲನೆ

​ಮಂಜೇಶ್ವರ: ಕೇರಳದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಬಹುನಿರೀಕ್ಷಿತ ‘ಪ್ರಿಯದರ್ಶಿನಿ’ ಯೋಜನೆಗೆ ಮಂಜೇಶ್ವರ ಕ್ಷೇತ್ರದಲ್ಲಿ ಇಂದು ಅಧಿಕೃತವಾಗಿ ಚಾಲನೆ ದೊರೆತಿದೆ. ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಬಸ್ಸಿನ ಧ್ವಜ ಹಾರಿಸಿ, ಡಬಲ್ ಬೆಲ್ ಬಾರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ​ಮೊದಲ ಟಿಕೆಟ್ ವಿತರಣೆ ಮತ್ತು ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಬಸ್ಸಿನೊಳಗೆ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಅವರಿಗೆ ಶಾಸಕರು ಸಾಂಕೇತಿಕವಾಗಿ ಮೊದಲ ಟಿಕೆಟ್ ನೀಡಿದರು. ಬಳಿಕ ಬಸ್ಸಿನ…

Read More

ಸಮುದ್ರ ಪಾಲಾದ ಇಬ್ಬರು ಯುವಕರ ಮೃತದೇಹ ಪತ್ತೆ

ಕಾಸರಗೋಡು: ಬೇಕಲ ಕೋಟೆ ಸಮೀಪದ ಪಳ್ಳಿಕೆರೆ ಸಮುದ್ರ ತೀರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಸೋಮವಾರ ಮಧ್ಯಾಹ್ನ ಪತ್ತೆಯಾಗಿವೆ. ಮೃತರನ್ನು ಕೊಟ್ಟಾಯಂ ಜಿಲ್ಲೆಯ ಚಂಗನಕ್ಕೇರಿ ಮೂಲದ ಅಪ್ಪುಟಿ ಅಬ್ರಹಾಂ (20) ಹಾಗೂ ಅಂಕಿತ್ (20) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ನಾಲ್ವರು ಯುವಕರು ಕೊಟ್ಟಾಯಂನಿಂದ ಪಳ್ಳಿಕೆರೆ ಸಮುದ್ರ ತೀರಕ್ಕೆ ಆಗಮಿಸಿ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿದ ನಾಲ್ವರಲ್ಲಿ ಇಬ್ಬರು ಸುರಕ್ಷಿತವಾಗಿ ದಡ ಸೇರಿದ್ದರೆ, ಅಪ್ಪುಟಿ ಅಬ್ರಹಾಂ…

Read More

ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ತಂತ್ರಜ್ಞಾನ ಬಳಸಬೇಕು: ಎಂ.ಎಲ್. ಅಶ್ವಿನಿ

ಕಾಸರಗೋಡು: ಸ್ಮಾರ್ಟ್‌ಫೋನ್ ಸೇರಿದಂತೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಜ್ಞಾನಾರ್ಜನೆ ಹಾಗೂ ಶಿಕ್ಷಣದ ಉದ್ದೇಶಕ್ಕೂ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಕರೆ ನೀಡಿದರು. ಮಧೂರು ಎಸ್‌ಸಿ-ಎಸ್‌ಟಿ ಪಂಚಾಯತ್ ಸಮಿತಿಯ ವತಿಯಿಂದ ಕೂಡ್ಲು ಗೋಪಾಲಕೃಷ್ಣ ವಿದ್ಯಾಲಯದಲ್ಲಿ ಆಯೋಜಿಸಲಾದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ ಅವರು, ಕಳೆದ 12 ವರ್ಷಗಳಲ್ಲಿ ಶಿಕ್ಷಣ ಸೇರಿದಂತೆ…

Read More
error: Content is protected !!