ಕಾಸರಗೋಡು: ಅಕ್ರಮ ಮರಳು ಸಾಗಾಟ – ಟಿಪ್ಪರ್ ಲಾರಿ ಚಾಲಕ ಬಂಧನ

ಕಾಸರಗೋಡು ಜಿಲ್ಲೆಯ ವರ್ಕಾಡಿ ಸಮೀಪದ ಕುಳಾಯಿ ನದಿಯಿಂದ ಅಕ್ರಮವಾಗಿ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಚಾಲಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಲಾರಿ ಹಾಗೂ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಧಿತನನ್ನು ಬಂಟ್ವಾಳ ತಾಲೂಕಿನ ಪಜೀರ್ ಸಮೀಪದ ವೋಂಡ ಮಜಲ್ ನಿವಾಸಿ ರಾಶಿದ್ (19) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 9.30ರ ವೇಳೆಗೆಕುಳಾಯಿ ಬಯಲು ಪ್ರದೇಶದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ಕೆ.ಜಿ. ರತೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ…

Read More

ನಿಶ್ಚಿತಾರ್ಥಗೊಂಡಿದ್ದ ವರನ ಅಕಾಲಿಕ ನಿಧನದಿಂದ ಮನನೊಂದು ಯುವತಿ ಆತ್ಮಹತ್ಯೆ

ನಿಶ್ಚಿತಾರ್ಥಗೊಂಡಿದ್ದ ವರನ ಅಕಾಲಿಕ ನಿಧನದಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಕಿದೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಕಿದೂರು ನಿವಾಸಿ ಬಿ. ಜಯಾನಂದನ್ ಅವರ ಪುತ್ರಿ ಪ್ರಫುಲ್ಲ (26) ಎಂದು ಗುರುತಿಸಲಾಗಿದೆ. ಈಕೆಗೆ ತಮಿಳುನಾಡು ಮೂಲದ ಮಣಿ (30) ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಕೆಲವು ದಿನಗಳ ಹಿಂದೆ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಭಾವಿ ಪತಿಯ ಅಗಲಿಕೆಯಿಂದ ಪ್ರಫುಲ್ಲಾ ತೀವ್ರ ಮಾನಸಿಕ ಆಘಾತ ಮತ್ತು ಖಿನ್ನತೆಗೆ…

Read More

ಕೇರಳದಲ್ಲೇ ವಿಶಿಷ್ಟ ಸಂಪ್ರದಾಯಕ್ಕೆ ಸಾಕ್ಷಿಯಾದ ಕಾಸರಗೋಡಿನ ಬಾರಿಕ್ಕಾಡು ಮಹಿಷಮರ್ಧಿನಿ ಕ್ಷೇತ್ರದಲ್ಲಿ ವಾರ್ಷಿಕ ಪಂಚಮೂರ್ತಿ ಭೂತಬಲಿ

ಕಾಸರಗೋಡು: ದೇವರ ಸ್ವಂತ ನಾಡು ಕೇರಳದಲ್ಲಿ ಧಾರ್ಮಿಕ ಮೌಲ್ಯಗಳ ಆಚಾರ ವಿಚಾರಗಳಿಗೆ ಅದರದ್ದೇ ಆದ ಮಹತ್ವವಿದೆ. ತಲತಲಾಂತರದಿಂದ ಬಳುವಳಿಯಾಗಿ ಬಂದ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಹೋಗುತ್ತಾ ಇದ್ದಾರೆ. ಕೇರಳ ಎಂದಾಕ್ಷಣ ನೆನಪಿಗೆ ಬರುವುದು ಹಸಿರ ಐಸಿರಿಯ ನಡುವೆ ದೇವಾಲಯದ ಭವ್ಯತೆ – ಅದರ ಘನತೆಯನ್ನು ಸಾರುವ ಕೆಲವು ಅಪರೂಪದ ಆಚರಣೆ . ಕೇರಳಂ ರಾಜ್ಯದ ಮತ್ಯಾವುದೇ ಕ್ಷೇತ್ರದಲ್ಲಿ ಕಾಣ ಸಿಗದ ಪಂಚದೇವರ ಉತ್ಸವ ಮೂರ್ತಿಗಳ ಭೂತ ಬಲಿಯು ಈ ಸನ್ನಿಧಿಯಲ್ಲಿ ಮಾತ್ರವೇ ನೋಡಬಹುದಾಗಿದೆ . ತಾಳ ಮೇಳಗಳ…

Read More

ಉಪ್ಪಳ ಸೀ ಪರ್ಲ್ಸ್ ಫ್ಲ್ಯಾಟ್ ಸಮುಚ್ಚಯಕ್ಕೆ ಜಪ್ತಿ ನೋಟಿಸ್; ನಿವಾಸಿಗಳಲ್ಲಿ ಆತಂಕ

ಸೀ ಪ್ಯಾಲಸ್ ಫ್ಲ್ಯಾಟ್ ಸಮುಚ್ಚಯಕ್ಕೆ ಸಂಬಂಧಿಸಿದ ಸಾಲ ವಿವಾದ ತೀವ್ರಗೊಂಡಿದ್ದು, ಕೆಎಫ್‌ಸಿ (KFC) ಜಪ್ತಿ ನೋಟಿಸ್ ಅಂಟಿಸಿರುವುದು ಫ್ಲ್ಯಾಟ್ ಮಾಲೀಕರು ಮತ್ತು ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಮಂಗಲ್ಪಾಡಿ ಪಂಚಾಯತ್ ವತಿಯಿಂದ 104 ಫ್ಲ್ಯಾಟ್‌ಗಳಲ್ಲಿ 99 ಫ್ಲ್ಯಾಟ್‌ಗಳಿಗೆ ಈಗಾಗಲೇ ಸಂಖ್ಯೆ ನೀಡಲಾಗಿದ್ದು, ಅಗ್ನಿಶಾಮಕ ದಳದ ಎನ್‌ಒಸಿ ಸೇರಿದಂತೆ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ನಿರ್ವಹಣಾ ಮಂಡಳಿ ತಿಳಿಸಿದೆ. ಫ್ಲ್ಯಾಟ್ ನಿರ್ಮಾಣಕ್ಕಾಗಿ ಕೆಎಫ್‌ಸಿಯಿಂದ ₹8.35 ಕೋಟಿ ಸಾಲ ಪಡೆಯಲಾಗಿತ್ತು. ಇದುವರೆಗೆ ₹10.41 ಕೋಟಿ ಮರುಪಾವತಿ ಮಾಡಲಾಗಿದೆ. ಆದರೂ ಬ್ಯಾಂಕ್ ಇದೀಗ ₹17…

Read More

ಮನೆ ಮೇಲೆ ಸಿಡಿಲು ಬಡಿದು ಭಾರೀ ಹಾನಿ; ಕುಟುಂಬದವರು ಅದೃಷ್ಟವಶಾತ್ ಪಾರು

ಪಯ್ಯೋಳಿ: ಪಯ್ಯೋಳಿ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡ್‌ನ ತಾಳಿ ತಜಾಎಸ್‌ಟಿ ಕಾಲೊನಿಯಲ್ಲಿ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೊಳಗಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಮತ್ತಾಡಿ ಸೀತ ದಂಪತಿಗಳ ಮನೆ ಮೇಲೆ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಛಾವಣಿ ಮತ್ತು ಗೋಡೆಗಳಿಗೆ ಭಾರೀ ಹಾನಿಯಾಗಿದೆ. ಮನೆಯೊಳಗಿನ ವಿದ್ಯುತ್ ಸಂಪರ್ಕ ವ್ಯವಸ್ಥೆ ಸಂಪೂರ್ಣ ಸುಟ್ಟು ಹೋಗಿದ್ದು, ಎಲೆಕ್ಟ್ರಾನಿಕ್ ಉಪಕರಣಗಳೂ ಬೆಂಕಿಗೆ ಆಹುತಿಯಾಗಿವೆ. ಘಟನೆಯ ವೇಳೆ ಮನೆಯಲ್ಲಿ ಇದ್ದ ಮಕ್ಕಳು ಹಾಗೂ ಕುಟುಂಬ…

Read More

ದುರಂತಕ್ಕೆ ಆಹ್ವಾನ ನೀಡುತ್ತಿವೆಯೇ ಹೊಸಂಗಡಿ -ಆನೆಕಲ್ಲು ರಸ್ತೆಯ ಅಪಾಯಕಾರಿ ಮರಗಳು?

​ಮಂಜೇಶ್ವರ: ಹೊಸಂಗಡಿಯಿಂದ ಆನೆಕಲ್ಲು ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಈಗ ಸಾವಿನ ದಾರಿಯಾಗಿ ಮಾರ್ಪಡುತ್ತಿದೆಯೇ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ. ರಸ್ತೆಯುದ್ದಕ್ಕೂ ಹೆಮ್ಮರವಾಗಿ ಬೆಳೆದು ನಿಂತಿರುವ ಬೃಹತ್ ಮರಗಳು ಮತ್ತು ರಸ್ತೆಗೆ ವಾಲಿರುವ ಅವುಗಳ ಬೃಹತ್ ರೆಂಬೆಗಳು ಸಂಚಾರಿಗಳ ಪಾಲಿಗೆ “ತೂಗುಗತ್ತಿ”ಯಾಗಿ ಪರಿಣಮಿಸಿವೆ. ​ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ​ಈ ರಸ್ತೆಯ ಇಕ್ಕೆಡೆಗಳಲ್ಲಿರುವ ದೈತ್ಯ ಮರಗಳು ರಸ್ತೆಯ ಮೇಲೆಯೇ ಬಾಗಿ ನಿಂತಿವೆ. ಬಸ್‌ಗಳು, ಲಾರಿಗಳಂತಹ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುವಾಗ ರೆಂಬೆಗಳಿಗೆ ತಾಗಿ…

Read More

ಮೇ ೧೧ ರಂದು ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ

ಕಾಸರಗೋಡು: ಸಪ್ತ ಭಾಷಾ ಸಂಗಮ ನೆಲೆ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಉಬ್ರಂಗಳ ಗ್ರಾಮದಲ್ಲಿ ನೆಲೆಯಾದ 2000 ವರ್ಷಗಳ ಇತಿಹಾಸವಿರುವ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರವು ‘ಬಡಗು ಶಬರಿಮಲೆ’ಯೆಂದೇ ಇತಿಹಾಸ ಪ್ರಸಿದ್ಧವಾಗಿದೆ. ಶ್ರೀ ಕ್ಷೇತ್ರದಲ್ಲಿ ಮೇ 11ರಂದು 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವ ಸಂಜೆ ಗಂಟೆ 5 ರಿಂದ ನಡೆಯಲಿದೆ ಎಂದು ಶ್ರೀಕ್ಷೇತ್ರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್…

Read More

ಸೈಲೆನ್ಸರ್‌ನಲ್ಲಿ ಬದಲಾವಣೆ ಮಾಡಿ ಬೆಂಕಿ-ಹೊಗೆ ಹೊರಸೂಸಿದ ಕಾರು: ಇಬ್ಬರ ಬಂಧನ

ಕಾಸರಗೋಡು, ಮೇ 7: ಕಾರಿನ ಸೈಲೆನ್ಸರ್‌ನಲ್ಲಿ ಅಕ್ರಮ ಬದಲಾವಣೆ ಮಾಡಿ ಬೆಂಕಿ ಹಾಗೂ ಹೊಗೆ ಹೊರಸೂಸುವ ರೀತಿಯಲ್ಲಿ ವಾಹನ ಚಲಾಯಿಸಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೀಂಜದ ಕೌಚ್ಚಿಲ್ ಚಾರ್ಲೆಯ ನಿವಾಸಿ ಅಹ್ಮದ್ ಬಿಲಾಲ್ (19) ಹಾಗೂ ಬಂಬ್ರಾಣದ ಹಸೈನಾರ್ (22) ಬಂಧಿತ ಆರೋಪಿಗಳು. ಪೊಲೀಸರು ಹೋಂಡಾ ಕಾರನ್ನೂ ವಶಕ್ಕೆ ಪಡೆದಿದ್ದಾರೆ. ಘಟನೆ ಮಂಗಳವಾರ ಉಪ್ಪಳದಲ್ಲಿ ನಡೆದಿತ್ತು. ಅತಿಯಾದ ಶಬ್ದದೊಂದಿಗೆ ಸಂಚರಿಸುತ್ತಿದ್ದ ಕಾರಿನ ಸೈಲೆನ್ಸರ್‌ನಿಂದ ಬೆಂಕಿ ಮತ್ತು ಹೊಗೆ ಹೊರಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ Instagramನಲ್ಲಿ…

Read More

ಕಾಸರಗೋಡಿನಲ್ಲಿ ಕನ್ನಡ ಸಂಭ್ರಮ: ಮೇ 16ರಂದು ಸಂಸ್ಕೃತಿ ಉತ್ಸವ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ 16ರಂದು ಬೆಳಗ್ಗೆ 9ರಿಂದ ಸುಬ್ಬಯ್ಯಕಟ್ಟೆ ಕುಡಾಲ್ ಮೇರ್ಕಳದ ಕುಡಾಲು ಅನುದಾನಿತ ಕಿ.ಪ್ರಾ.ಶಾಲೆ ವಠಾರದಲ್ಲಿ ನಡೆಯಲಿದೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು ಇದರ ಸಂಸ್ಥಾಪಕರಾದಎಸ್ ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು…

Read More

ಪೆರ್ಲ ನೇತಾಜಿ ಗ್ರಂಥಾಲದಲ್ಲಿ ರೀಡಿಂಗ್ ಥಿಯೇಟರ್

ಪೆರ್ಲ : ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ಬಾಲವೇದಿಕೆಯ ಮಕ್ಕಳ ವಾಚನಾ ಕಳರಿ ಅಂಗವಾಗಿ ರೀಡಿಂಗ್ ಥೀಯೇಟರ್ ಕಾರ್ಯಕ್ರಮ ಜರಗಿತು.ಕವಿ ಶ್ರೀನಿವಾಸ ಪೆರಿಕ್ಕಾನ ರೀಡಿಂಗ್ ಥಿಯೇಟರ್ ಉದ್ಘಾಟಿಸಿ ‘ಮಕ್ಕಳ ರಚನಾ ಕೌಶಲ್ಯತೆ ಎಳೆವೆಯಲ್ಲೇ ಬೆಳೆಯಲು ವಾಚನಾ ಕಳರಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡುವುದು ಅತೀ ದೊಡ್ಡ ಕೆಲಸವಾಗಿದೆ’ ಎಂದು ನುಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು ತರಗತಿ ನಡೆಸಿದರು. ನಾಟಕ ಓದು, ಕಥಾ ಓದು ಮುಂತಾದ ಸಾಹಿತ್ಯ ಪ್ರಕಾರಗಳನ್ನು…

Read More
error: Content is protected !!