ಪೊಲೀಸರ ಕಣ್ಣುತಪ್ಪಿಸಿ ಓಡಾಡುತ್ತಿದ್ದ ಆರೋಪಿ ಕೊನೆಗೂ ಸೆರೆ

ಮಂಜೇಶ್ವರ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಕುಂಬಳೆ ಪೊಲೀಸರು ಚಾಣಾಕ್ಷತನದಿಂದ ಬಂಧಿಸಿದ್ದಾರೆ.ಆರಿಕ್ಕಾಡಿ ಬನ್ನಂಗುಳ ನಿವಾಸಿ ಅಬ್ದುಲ್ ಜಲೀಲ್ ಅಲಿಯಾಸ್ ಜಲ್ಲು (28) ಬಂಧಿತ ಆರೋಪಿ. ​ಬದಿಯಡ್ಕ ಮತ್ತು ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಕಳೆದ ಕೆಲವು ಸಮಯದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಎಂಬಲ್ಲಿ ಗುಟ್ಟಾಗಿ ನೆಲೆಸಿದ್ದ ಈತನ ಬಗ್ಗೆ ಕುಂಬಳೆ ಎಸ್‌….

Read More

ಅಪಘಾತಕ್ಕೀಡಾದ ಬೈಕ್ ಕಳವು; ಯುವಕ ಬಂಧನ

ಮಂಜೇಶ್ವರ: ಅಪಘಾತಕ್ಕೀಡಾಗಿ ರಸ್ತೆ ಬದಿಯಲ್ಲಿದ್ದ ಬೈಕನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಂಜ ಸಂತಡ್ಕ ನಿವಾಸಿ ಮುಹಮ್ಮದ್ ಅಲಿಯಾಸ್ ಮುನ್ನ (21) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ​ಮೇ 1ರಂದು ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂ.ಎನ್. ಸಂತೋಷ್ ಎಂಬವರ ಬೈಕ್ ಅಪಘಾತಕ್ಕೀಡಾಗಿತ್ತು. ಗಾಯಗೊಂಡಿದ್ದ ಸಂತೋಷ್ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಂಡು ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ​ ಈತನ ಮೇಲೆ ಈಗಾಗಲೇ ಮಂಜೇಶ್ವರ ಠಾಣೆಯಲ್ಲಿ ಪೋಕ್ಸೊ ಪ್ರಕರಣ…

Read More

ಕುಂಜತ್ತೂರು: ಬಸ್ ಚಾಲಕರ ಹಠಮಾರಿ ಧೋರಣೆಗೆ ಹೆಚ್ಚಿದ ಅಪಘಾತದ ಭೀತಿ: ಸಾರಿಗೆ ನಿಯಮ ಪಾಲಿಸುವಂತೆ ಮುಸ್ಲಿಂ ಯೂತ್ ಲೀಗ್ ಟೌನ್ ಕಮಿಟಿಯಿಂದ ಕಡಕ್ ಎಚ್ಚರಿಕೆ

ಮಂಜೇಶ್ವರ: ಕುಂಜತ್ತೂರು ಜಂಕ್ಷನ್‌ನಲ್ಲಿ ತಲಪಾಡಿ ಕಡೆಗೆ ಹೋಗುವ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ನಿಗದಿಪಡಿಸಿದ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ, ಅಂಡರ್‌ಪಾಸ್ ಬಳಿಯೇ ನಿಲ್ಲಿಸುತ್ತಿರುವುದರಿಂದ ಅಪಘಾತಗಳು ನಿತ್ಯ ದರ್ಶನವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾದ ನಂತರ ಅಂಡರ್‌ಪಾಸ್ ಬಳಿ ಬಸ್‌ಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವುದು ಇತರ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ದೊಡ್ಡ ಪ್ರಾಣಭೀತಿಯನ್ನು ತಂದೊಡ್ಡಿದೆ. ​ಈ ಬಗ್ಗೆ ಸಾರ್ವಜನಿಕರು ಮತ್ತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ಸಂಪರ್ಕಿಸಿದರೂ ಯಾರೂ ಇತ್ತಕಡೆ ತಿರುಗಿಯೂ ನೋಡಿಲ್ಲವೆಂಬ ಆರೋಪವಿದೆ. ​ಈ…

Read More

ಮಂಜೇಶ್ವರ ಗೋವಿಂದ ಪೈ-ಕೆದಂಬಾಡಿ ರಸ್ತೆಯಲ್ಲಿ ಗುಂಡಿ, ನೀರು ನಿಂತು ಜನರ ಆಕ್ರೋಶ

​ಮಂಜೇಶ್ವರ: ರಾಜ್ಯ ಸರ್ಕಾರದ ಕಿಫ್ಬಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಂಜೇಶ್ವರ ಗೋವಿಂದ ಪೈ – ಕೆದಂಬಾಡಿ ರಸ್ತೆ ಕಾಮಗಾರಿ ಮುಗಿದ ಬೆನ್ನಲ್ಲೇ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. 2027ರ ತನಕ ರಸ್ತೆಯ ನಿರ್ವಹಣಾ ವಾರಂಟಿ ಅವಧಿ ಇದ್ದರೂ, ಗುತ್ತಿಗೆದಾರನ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಿಫ್ಬಿ ಫಂಡ್‌ನಿಂದ ಮಂಜೂರಾದ 5 ಕೋಟಿ 24 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆಯ ಕಾಮಗಾರಿಯು 2024ರಲ್ಲಿ ಪೂರ್ಣಗೊಂಡಿತ್ತು. ನಿಯಮದಂತೆ ಸತತ ಮೂರು ವರ್ಷಗಳ ಕಾಲ…

Read More

ಭಾವೈಕ್ಯತೆಯ ಬಂಡಿ ಉತ್ಸವ: ಉದ್ಯಾವರ ಅರಸು ಮಂಜೀಷ್ಣಾರ್ ಜಾತ್ರೋತ್ಸವ ಸಂಪನ್ನ

​ಮಂಜೇಶ್ವರ: ತುಳುನಾಡಿನ ಸುಪ್ರಸಿದ್ಧ ಸೌಹಾರ್ದತಾ ತಾಣಗಳಲ್ಲಿ ಒಂದಾದ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವವು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಯೊಂದಿಗೆ ಅದ್ಧೂರಿಯಾಗಿ ನೆರವೇರಿತು. ಈ ಕ್ಷೇತ್ರದ ವಿಶೇಷತೆಯೆಂಬಂತೆ, ಶತಮಾನಗಳ ಪ್ರಾಚೀನ ಪದ್ಧತಿಯನ್ನು ಈ ಬಾರಿಯೂ ಅಚ್ಚುಕಟ್ಟಾಗಿ ಪಾಲಿಸಲಾಯಿತು. ಜಾತ್ರೋತ್ಸವದ ಪ್ರಮುಖ ವಿಧಿವಿಧಾನಗಳ ಸಂದರ್ಭದಲ್ಲಿ ಸಿಂಹಾಸನ ಕಟ್ಟೆಯ ಬಲಭಾಗದಲ್ಲಿ ಕ್ಷೇತ್ರದ ಆಡಳಿತ ವರ್ಗದವರು ಹಾಗೂ ಎಡಭಾಗದಲ್ಲಿ ಮುಸ್ಲಿಂ ಬಾಂಧವರು (ಜಮಾಹತಿನವರು) ಆಸೀನರಾಗಿ ಇಡೀ ಉತ್ಸವವನ್ನು ಕಣ್ತುಂಬಿಕೊಂಡರು. ಧರ್ಮದ ಗಡಿಗಳನ್ನು ಮೀರಿ ಒಂದೇ ವೇದಿಕೆಯಲ್ಲಿ ಸೌಹಾರ್ದತೆಯಿಂದ…

Read More

ಉಪ್ಪಳದ ಕೊಂಡೆವೂರು ಆಶ್ರಮದಲ್ಲಿ 132 ಅಪರೂಪದ ಕಾಸರಗೋಡು ಕುಳ್ಳನ್ ಹಸುಗಳ ಸಂರಕ್ಷಣೆ

ಉಪ್ಪಳ: ಕಾಸರಗೋಡು ಜಿಲ್ಲೆಯ ಕೊಂಡೆವೂರು ನಿತ್ಯಾನಂದಮಠ ಆಶ್ರಮ ಕೇವಲ ಆಧ್ಯಾತ್ಮಿಕ ಕೇಂದ್ರವಷ್ಟೇ ಅಲ್ಲ, ಅಪರೂಪದ ನಾಡುಜಾತಿ ಪಶು ಸಂರಕ್ಷಣೆ ಹಾಗೂ ಪ್ರಕೃತಿ ಸ್ನೇಹಿ ಜೀವನಶೈಲಿಗೆ ಮಾದರಿಯಾಗಿಯೂ ಗಮನ ಸೆಳೆಯುತ್ತಿದೆ. ವಂಶನಾಶದ ಅಂಚಿನಲ್ಲಿದ್ದ ಅಪರೂಪದ ಕಾಸರಗೋಡು ಕುಳ್ಳನ್ ಹಸು ಜಾತಿಯ 132 ಹಸುಗಳನ್ನು ಆಶ್ರಮದಲ್ಲಿ ಸಂರಕ್ಷಿಸಿ ಪೋಷಿಸಲಾಗುತ್ತಿದೆ. ಒಮ್ಮೆ ಕಾಸರಗೋಡು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಈ ನಾಡುಜಾತಿ ಹಸುಗಳು, ಜೀವನಶೈಲಿಯ ಬದಲಾವಣೆ, ಅರಣ್ಯ ನಾಶ ಹಾಗೂ ಸಂಕರ ಜಾತಿಯ ಹಸುಗಳ ಪ್ರಭಾವದಿಂದ ನಿಧಾನವಾಗಿ ನಾಶದ ಅಂಚಿಗೆ ತಲುಪಿದ್ದವು….

Read More

ಭಾವಿ ಪತಿಯ ಸಮಾಧಿ ಪಕ್ಕದಲ್ಲೇ ಯುವತಿಯ ಅಂತ್ಯಕ್ರಿಯೆ:ಸಾವಿನಲ್ಲೂ ಒಂದಾದ ಪ್ರೇಮಿಗಳು; ಅಂತಿಮ ಆಸೆ ಈಡೇರಿಸಿದ ಕುಟುಂಬ

​ಮಂಜೇಶ್ವರ: ಅಪಘಾತದಲ್ಲಿ ಮೃತಪಟ್ಟ ತನ್ನ ಭಾವಿ ಪತಿಯ ಪಕ್ಕದಲ್ಲೇ ತನ್ನನ್ನೂ ಹೂಳಬೇಕೆಂಬ ಯುವತಿಯ ಅಂತಿಮ ಬಯಕೆಯನ್ನು ಕುಟುಂಬಸ್ಥರು ಈಡೇರಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮೃತ ಯುವಕ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರತಿಶ್ರುತ ವಧು ಪ್ರಫುಲ್ಲಾ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಈ ಪ್ರೇಮಿಗಳು ಸಾವಿನಲ್ಲೂ ಒಂದಾಗಿದ್ದಾರೆ. ​ಮಂಜೇಶ್ವರದ ಕಿದೂರು ಕುಂಡಂಗೇರಡುಕ ನಿವಾಸಿ ಜಯಾನಂದ ಅವರ ಪುತ್ರಿ ಪ್ರಫುಲ್ಲಾ (26), ಕಳೆದ ಭಾನುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ತಮಿಳುನಾಡು ಮೂಲದ ಮಣಿ ಮತ್ತು ಪ್ರಫುಲ್ಲಾ ಅವರ…

Read More

ಭಾವಿ ಪತಿಯ ಸಮಾಧಿ ಪಕ್ಕದಲ್ಲೇ ಯುವತಿಯ ಅಂತ್ಯಕ್ರಿಯೆ: ಸಾವಿನಲ್ಲೂ ಒಂದಾದ ಪ್ರೇಮಿಗಳು; ಅಂತಿಮ ಆಸೆ ಈಡೇರಿಸಿದ ಕುಟುಂಬ

​ಮಂಜೇಶ್ವರ: ಅಪಘಾತದಲ್ಲಿ ಮೃತಪಟ್ಟ ತನ್ನ ಭಾವಿ ಪತಿಯ ಪಕ್ಕದಲ್ಲೇ ತನ್ನನ್ನೂ ಹೂಳಬೇಕೆಂಬ ಯುವತಿಯ ಅಂತಿಮ ಬಯಕೆಯನ್ನು ಕುಟುಂಬಸ್ಥರು ಈಡೇರಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮೃತ ಯುವಕ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರತಿಶ್ರುತ ವಧು ಪ್ರಫುಲ್ಲಾ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಈ ಪ್ರೇಮಿಗಳು ಸಾವಿನಲ್ಲೂ ಒಂದಾಗಿದ್ದಾರೆ. ​ಮಂಜೇಶ್ವರದ ಕಿದೂರು ಕುಂಡಂಗೇರಡುಕ ನಿವಾಸಿ ಜಯಾನಂದ ಅವರ ಪುತ್ರಿ ಪ್ರಫುಲ್ಲಾ (26), ಕಳೆದ ಭಾನುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ತಮಿಳುನಾಡು ಮೂಲದ ಮಣಿ ಮತ್ತು ಪ್ರಫುಲ್ಲಾ ಅವರ…

Read More

ಬೆದ್ರಂಪಳ್ಳ ಬನ ಪಾಟ್ಲದಳ ರಸ್ತೆ ಅಭಿವೃದ್ಧಿಯಲ್ಲಿ ಕಳಪೆ ಕಾಮಗಾರಿ : ನಾಗರಿಕರಿಂದ ತಡೆ

ಪೆರ್ಲ : ಎಣ್ಮಕಜೆ ಪಂಚಾಯತಿನ 16ನೇ ವಾರ್ಡಿನ ಬೆದ್ರಂಪಳ್ಳ ಬನ -ಬಲ್ತಕಲ್ಲು- ಪಾಟ್ಲದಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಗುತ್ತಿಗೆದಾರನ ಅವ್ಯವಹಾರ ಆರೋಪಿಸಿ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ 2023-24 ರರಾಜ್ಯ ಸರಕಾರದ ಬಜೆಟ್ ನಲ್ಲಿ ಸುಮಾರು 70 ಲಕ್ಷ ರೂ ಯೋಜನೆ ಮೀಸಲಿರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಹಸೈನಾರ್ ಪೆರ್ಲ ಎಂಬವರ ಮಾಲಕತ್ವದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಇದೀಗ ಕಳಪೆ ಮಟ್ಟದ ಡಾಮರು, ಜಲ್ಲಿ ಕಲ್ಲುಗಳನ್ನು ಉಪಯೋಗಿಸಿ ಯೋಜನೆಯಲ್ಲಿ…

Read More

ಬೆಜ್ಜದಗುತ್ತು ಕುಟುಂಬದ ಮನೆಯಲ್ಲಿ ಜೀರ್ಣೋದ್ಧಾರ ಶಿಲಾನ್ಯಾಸ ಕಾರ್ಯಕ್ರಮ

ಐಲ ಮಾಗಣೆಯ ಪ್ರಧಾನ ಮನೆಗಳಲ್ಲಿ ಒಂದಾದ ಬೆಜ್ಜದಗುತ್ತು ಕುಟುಂಬದ ಮನೆಯು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಗಳ ಪೌರೋಹಿತ್ವದಲ್ಲಿ ಬೆದ್ರಡ್ಕ ರಮೇಶ್ ಕಾರಂತರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಕ್ಕಾಗಿ ಶಿಲಾನ್ಯಾಸ‌ ಕಾರ್ಯಕ್ರಮ ನಡೆಯಿತು

Read More
error: Content is protected !!