ಹೊಸಂಗಡಿ ಲಾಡ್ಜ್ ಬೆದರಿಕೆ ಪ್ರಕರಣ: ಮುಖ್ಯ ಸಂಚುಗಾರ ಅಬೂಬಕ್ಕರ್ ಬಂಧನ
ಮಂಜೇಶ್ವರ: ಹೊಸಂಗಡಿಯ ಲಾಡ್ಜ್ ಒಂದರಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಬೆದರಿಸಿ, ನಗ್ನಚಿತ್ರಗಳನ್ನು ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣದ ಮುಖ್ಯ ಸಂಚುಗಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ಪಿ.ಎಂ. ಅಬೂಬಕ್ಕರ್ (40) ಬಂಧಿತ ಆರೋಪಿ. ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದೆ.ಈ ಪ್ರಕರಣದಲ್ಲಿ ಅಬೂಬಕ್ಕರ್ ಐದನೇ ಆರೋಪಿಯಾಗಿದ್ದಾನೆ. 2026ರ ಜನವರಿಯಲ್ಲಿ ಹೊಸಂಗಡಿ ಪೇಟೆಯ ಲಾಡ್ಜ್ ಒಂದರ ರೂಮ್ ನಂಬರ್ 206ರಲ್ಲಿ ಈ ಘಟನೆ ನಡೆದಿತ್ತು. ರೂಮಿನಲ್ಲಿದ್ದ ಯುವತಿ ಮತ್ತು…
