ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಹರಿಕಥಾ ಸಪ್ತಾಹ:ಇಂದುಎರಡನೇ ದಿನದ ಕಾರ್ಯಕ್ರಮ

ಹೊಸಂಗಡಿ: ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದ ಅಂಗವಾಗಿ ಇಂದು (ಮಾ. 26, ಗುರುವಾರ) ಸಂಜೆ 6:00 ಗಂಟೆಗೆ ಎರಡನೇ ದಿನದ ಕಾರ್ಯಕ್ರಮ ಜರುಗಲಿದೆ. ಈ ದಿನದ ಪ್ರಮುಖ ಆಕರ್ಷಣೆಯಾಗಿ ಹರಿದಾಸ ಜಯಾನಂದ ಹೊಸದುರ್ಗ ಅವರು ‘ಸತ್ಯದಾಸ ಸಾವಿತ್ರಿ’ ಎಂಬ ಹರಿಕಥೆಯನ್ನು ಪ್ರಸ್ತುತಪಡಿಸಲಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಸಾರುವ ಈ ಹರಿಕಥಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಕಲಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

Read More

ಕಾಸರಗೋಡು: ಅನಂಗೂರ್ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಧರ್ಮ ನೇಮ ಏಪ್ರಿಲ್ 5ರಂದು

ಕಾಸರಗೋಡು ನಗರದ ಸಮೀಪದ ನುಳ್ಳಿಪ್ಪಾಡಿಯ ಪಿ.ಎಂ.ಎಸ್. ರಸ್ತೆಯಲ್ಲಿರುವ ಅನಂಗೂರ್ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಧರ್ಮ ನೇಮ ಕಾರ್ಯಕ್ರಮವು ಈ ಬಾರಿ ಏಪ್ರಿಲ್ 5, ಭಾನುವಾರ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 27, 2026ರಂದು ತಂಬಿಲ ಸೇವೆ ನಡೆಯಲಿದ್ದು, ಏಪ್ರಿಲ್ 4 ಶನಿವಾರ ಸಂಜೆ 7ಕ್ಕೆ ಗುಳಿಗನ ಕೋಲ ಹಾಗೂ ರಾತ್ರಿ 8ಕ್ಕೆ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ. ಏಪ್ರಿಲ್ 5 ಭಾನುವಾರ ಬೆಳಿಗ್ಗೆ 9ರಿಂದ ಧೂಮಾವತಿ ದೈವ ಕೋಲ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ…

Read More

ಅಶ್ರಫ್ ವಿರುದ್ಧ ಸುರೇಂದ್ರನ್ ದೂರು: ಭರತ್ ಶೆಟ್ಟಿ ಕುರಿತು ವಿವಾದಾತ್ಮಕ ಹೇಳಿಕೆ

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚುತ್ತಿರುವ ನಡುವೆ, ಶಾಸಕ ಹಾಗೂ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ವಿರುದ್ಧ ಎನ್‌ಡಿಎ ಅಭ್ಯರ್ಥಿ ಕೆ ಸುರೇಂದ್ರನ್ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕರ್ನಾಟಕದ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಪ್ರಚೋದನಕಾರಿ ಹಾಗೂ ಮತೀಯ ವಿಭಜನೆ ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಎನ್‌ಡಿಎ ಪರ ಪ್ರಚಾರಕ್ಕೆ ಆಗಮಿಸಿದ್ದ ಭರತ್ ಶೆಟ್ಟಿ ಕುರಿತು ಈ ಹೇಳಿಕೆ ನೀಡಲಾಗಿದೆ ಎನ್ನಲಾಗಿದೆ. ಎಕೆಎಂ ಅಶ್ರಫ್ ಯೂಟ್ಯೂಬ್ ಚಾನೆಲ್ ವೊಂದಕ್ಕೆ…

Read More

ತುರ್ತಿ ತರವಾಡಿನಲ್ಲಿ ಕೂವಂ ಅಳಕ್ಕಲ್ ಹಾಗೂ ಅಡಯಾಳo ಕಾರ್ಯಕ್ರಮ

ಅಯ್ಯಾಯಿರಂಪಟ್ಟಂ ಸ್ವರೂಪ ನಾಡಿನ ಅತ್ಯಂತ ಪುರಾತನ, ಋಷಿಮುನಿಗಳ ತಪೋ ಭೂಮಿ, ಉಪ್ಪಳ 25 ವಿಲ್ಲು ಶ್ರೀ ಭಗವತಿ ಕ್ಷೇತ್ರದ ಮಹಾಶಕ್ತಿ ಐವರ್ ಭಗವತಿ ಮಾತೆಯ ಪ್ರಧಾನ ತರವಾಡು, ತುರ್ತಿ ಶ್ರೀ ವಿಷ್ಣುಮೂರ್ತಿ, ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ, ತಾರವಡ್ ಉತ್ಸವಸ್ಥಾನದಲ್ಲಿ ಪಡೆoಕುಡಿ ತೀಯಾ (ಕೋಟ್ಯಾನ್‌ ) ತರವಾಡಿನಲ್ಲಿ ಮಹಾ ಉತ್ಸವ ನಡೆಯಲಿದೆ . ಇದರ ಪೂರ್ವ ಭಾವಿಯಾಗಿ ಸೀಮೆಯ ದೈವ ದೇವಾದಿಗಳಿಗೆ ನೈವೇದ್ಯಕ್ಕೆ ಭತ್ತ ಅಳಿಯಿವುದು ಕೂವಂ ಅಳಕ್ಕಲ್ ಹಾಗು ಅಡಯಾಳo ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ಜರಗಿತು…

Read More

ಬಾಲಕಿ ಮುಂದೆ ನಗ್ನತೆ ಪ್ರದರ್ಶನ: ವಿಕೃತ ಕಾಮಿಗೆ ಪೋಕ್ಸೋ ಸಂಕೋಲೆ

ಮಂಜೇಶ್ವರ: ರಸ್ತೆ ಕೇಳುವ ನೆಪದಲ್ಲಿ 12 ವರ್ಷದ ಬಾಲಕಿಯ ಮುಂದೆ ಅಸಭ್ಯವಾಗಿ ವರ್ತಿಸಿ ನಗ್ನತೆ ಪ್ರದರ್ಶಿಸಿದ ಯುವಕನನ್ನು ಕುಂಬಳೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶೇಣಿ ಮಣಿಯಂಪಾರೆಯಲ್ಲಿ ವಾಸವಿರುವ ವಯನಾಡ್ ಮೂಲದ ಅದ್ನುಲ್ ಫಾರಿಸ್ (22) ಬಂಧಿತ ಆರೋಪಿ. ​ಮಂಗಳವಾರ ಸಂಜೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಯು, ಕುಂಬಳೆಗೆ ಹೋಗುವ ದಾರಿ ಕೇಳಿದ್ದಾನೆ. ಬಾಲಕಿ ದಾರಿ ತೋರಿಸುತ್ತಿದ್ದಂತೆ ಆತ ವಿಕೃತವಾಗಿ ನಗ್ನತೆ ಪ್ರದರ್ಶಿಸಿದ್ದಾನೆ.ಇದರಿಂದ ಬೆದರಿದ ಬಾಲಕಿ ತಕ್ಷಣ ಸಮೀಪದ ಅಂಗಡಿಗೆ ಓಡಿ…

Read More

ಕುಂಬಳೆಯಲ್ಲಿ ಗ್ಯಾಸ್ ಕೊರತೆ ತೀವ್ರ: ಮಲ್ಲಿಕಾ ಏಜೆನ್ಸಿ ವಿರುದ್ಧ ಜನರ ಆಕ್ರೋಶ, ತಕ್ಷಣ ಕ್ರಮಕ್ಕೆ ಒತ್ತಾಯ

ಕುಂಬಳೆ: ಮಲ್ಲಿಕಾ ಇಂಟರ್‌ಪ್ರೈಸಸ್ ಗ್ಯಾಸ್ ಏಜೆನ್ಸಿಯಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 22,000 ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಗೆ ಪ್ರತಿದಿನ ಸಾವಿರಾರು ಜನರು ಆಗಮಿಸುತ್ತಿದ್ದರೂ, ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆ ಕೊರತೆ, ವಿತರಣೆಯಲ್ಲಿ ವಿಳಂಬ ಹಾಗೂ ಸಮರ್ಪಕ ಮಾಹಿತಿ ಅಭಾವದಿಂದ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಗ್ಯಾಸ್ ಸಿಗದೆ ಕೆಲವರು ಖಾಲಿಹಸ್ತದಿಂದ ಮನೆಗೆ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂದ…

Read More

ಮಂಜೇಶ್ವರ ಹೈಡ್ರಾಮಾ:ಕಣದಿಂದ ಎಸ್.ಡಿ.ಪಿ.ಐ ಹಿಂದಕ್ಕೆ ಸರಿಯುವ ಸೂಚನೆ: ಕೇರಳ ರಾಜಕೀಯದ ದಿಕ್ಸೂಚಿ ಬದಲಿಸುವ ಮಾಸ್ಟರ್ ಪ್ಲಾನ್

​ಮಂಜೇಶ್ವರ: ಕೇರಳ ರಾಜಕೀಯದ ಅತ್ಯಂತ ಕುತೂಹಲಕಾರಿ ಕೇಂದ್ರಬಿಂದುವಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೈಡ್ರಾಮಾ ಶುರುವಾಗಿದೆ. ಇಲ್ಲಿಯವರೆಗೆ ಅಬ್ಬರಿಸಿದ್ದ ಎಸ್.ಡಿ.ಪಿ.ಐ, ಈಗ ಅಂತಿಮ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಂಜೇಶ್ವರದಲ್ಲಿ ಬಿಜೆಪಿ ಮತ್ತು ಯುಡಿಎಫ್ ನಡುವೆ ನೇರ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಸ್ಪರ್ಧಿಸುವುದರಿಂದ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಕಣ್ಣೂರಿನಲ್ಲಿ ನಡೆದ ತುರ್ತು…

Read More

ಅಶ್ರಫ್ ಪರ ಭಾರೀ ಬೆಂಬಲ: ಯುಡಿಎಫ್ ಸಮಾವೇಶದಲ್ಲಿ ಜನಸಾಗರ

ಮಂಜೇಶ್ವರ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರ ಗೆಲುವಿಗಾಗಿ ಆಯೋಜಿಸಲಾದ ‘ಯುಡಿಎಫ್ ಮಂಡಲ ಕನ್ವೆನ್ಷನ್’ ಮಂಗಳವಾರ ಭರ್ಜರಿಯಾಗಿ ನಡೆಯಿತು. ನಯಾಬಜಾರ್‌ನ ಫೆರೋ ಆಡಿಟೋರಿಯಂನಲ್ಲಿ ನಡೆದ ಈ ಬೃಹತ್ ಸಮಾವೇಶವು ಸಾವಿರಾರು ಕಾರ್ಯಕರ್ತರನ್ನು ಆಕರ್ಷಿಸಿ, ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿಸಿದೆ. ಸಂಜೆ 3 ಗಂಟೆಗೆ ಆರಂಭವಾದ ಸಮಾವೇಶವನ್ನು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಂಜೇಶ್ವರವು ಸೌಹಾರ್ದತೆಯ ನೆಲೆಬೀಡು. ಎ.ಕೆ.ಎಂ. ಅಶ್ರಫ್ ಅವರ ಗೆಲುವು ಕ್ಷೇತ್ರದ…

Read More

ಕಾಸರಗೋಡು ಗೋ-ಕುಟೀರ ನಿರ್ಮಾಣಕ್ಕೆ ಎರಡನೇ ಹಂತದ ಚಾಲನೆ

ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ “ಕಾಸರಗೋಡು ಗೋ-ಕುಟೀರ” ಯೋಜನೆಯು ಮತ್ತೊಂದು ಮಹತ್ವದ ಹಂತವನ್ನು ತಲುಪಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಈ ಯೋಜನೆಗೆ ವೇಗ ಸಿಕ್ಕಿದ್ದು, ಗೋಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡ ಈ ಕೇಂದ್ರವು ಸ್ಥಳೀಯ ಭಕ್ತರ ಗಮನ ಸೆಳೆಯುತ್ತಿದೆ. ಕಳೆದ ನವೆಂಬರ್ 4, 2025ರಂದು ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯನ್ನು ಅಂಗವಾಗಿ, ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಅವರಿಂದ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು….

Read More

ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ಏಪ್ರಿಲ್ 7 ಕ್ಕೆ ಹೊರೆಕಾಣಿಕೆ ಸಮರ್ಪಣೆ

ಕಾಸರಗೋಡು ಜಿಲ್ಲೆಯ ಚೇಟ್ಟುಕುಂಡು ಪ್ರದೇಶದ ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ನಡೆಯಲಿರುವ ವಯನಾಟು ಕುಲವನ್ ದೈವ ಕಟ್ಟು ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಭಕ್ತರಲ್ಲಿ ಅಪಾರ ಉತ್ಸಾಹ ಕಂಡುಬರುತ್ತಿದೆ. ಅನೇಕ ವರ್ಷಗಳ ನಿರೀಕ್ಷೆಗೆ ತೆರೆ ಬಿದ್ದು, ಮತ್ತೆ ಈ ತರವಾಡಿನಲ್ಲಿ ಗಗ್ಗರ ನಾದ ಮೊಳಗಲಿರುವುದು ವಿಶೇಷವಾಗಿದೆ. ಏಪ್ರಿಲ್ 7ರಿಂದ 9ರವರೆಗೆ ನಡೆಯಲಿರುವ ಈ ಮಹೋತ್ಸವವು ಭಕ್ತಿಭಾವದ ಸಂಗಮವಾಗಲಿದ್ದು, ನೂರಾರು ಭಕ್ತರನ್ನು ಸೆಳೆಯುವ ನಿರೀಕ್ಷೆಯಿದೆ. ಮೊದಲ ದಿನವಾದ ಏಪ್ರಿಲ್ 7ರಂದು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ನಂತರದ ದಿನಗಳಲ್ಲಿ…

Read More
error: Content is protected !!