ಬಸ್ಸಿನಲ್ಲೇ ಕುಸಿದು ಬಿದ್ದ ಮಹಿಳೆ ಸಾವು: ಮೃತರ ಗುರುತು ಪತ್ತೆಗೆ ಪೊಲೀಸರ ಮೊರೆ
ಮಂಜೇಶ್ವರ:ಮಂಗಳೂರು-ಕಾಸರಗೋಡು ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆಯೊಬ್ಬರು ಚಲಿಸುವ ಬಸ್ಸಿನಲ್ಲೇ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮಂಗಳೂರಿನಿಂದ ಹೊರಟಿದ್ದ ಸಾರಿಗೆ ಬಸ್ಸನ್ನು ಇವರು ಕೈಕಂಬ ಎಂಬಲ್ಲಿ ಹತ್ತಿದ್ದರು. ಕಾಸರಗೋಡಿಗೆ ಟಿಕೆಟ್ ಪಡೆದಿದ್ದ ಇವರು, ಬಸ್ ಕುಂಬಳೆ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ಇವರನ್ನು ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮೃತ ಮಹಿಳೆಯ ಬಳಿ ಯಾವುದೇ…
