ಸಂಕಷ್ಟದ ಸಾಥಿಗೆ ಕೃತಜ್ಞತೆಯ ಹರಕೆ: ಕೇರಳದ ಅರ್ಜುನನ ತಾಯಿಯಿಂದ ಮಂಜೇಶ್ವರದ ಅಭ್ಯರ್ಥಿಗೆ ‘ಗೆಲುವಿನ ಇಡುಗಂಟು

ಮಂಜೇಶ್ವರ: ರಾಜಕೀಯದ ಆಚೆಗೂ ಮಾನವೀಯ ಸಂಬಂಧಗಳು ಎಷ್ಟು ಗಾಢವಾಗಿರುತ್ತವೆ ಎಂಬುದಕ್ಕೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಹಾಗೂ ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಕುಟುಂಬದ ನಡುವಿನ ಭೇಟಿ ಸಾಕ್ಷಿಯಾಗಿದೆ. ​ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಲಾರಿ ಸಹಿತ ಗಂಗಾವಳಿ ನದಿ ಪಾಲಾಗಿದ್ದ ಅರ್ಜುನನ ಪತ್ತೆಗಾಗಿ ನಡೆದ ಸುದೀರ್ಘ 70ಕ್ಕೂ ಹೆಚ್ಚು ದಿನಗಳ ಕಾರ್ಯಾಚರಣೆಯ ವೇಳೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸೇತುವೆಯಂತೆ ನಿಂತು ಅಶ್ರಫ್…

Read More

200 ಬಾಕ್ಸ್ ಮೀನುಗಳಿದ್ದ ಲಾರಿ ಕಳವು: ಇಬ್ಬರು ಬಂಧನ

ಕುಂಬಳೆ: ಬಂದಿಯೊಡ್ ಅಡ್ಕ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 200 ಬಾಕ್ಸ್ ಮೀನುಗಳಿದ್ದ ಲಾರಿಯನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇಚ್ಚಿಲಂಪಾಡಿ ಕೊಡೀಯಮ್ಮ ನಿವಾಸಿ ಅಬ್ದುಲ್ಲ ಎ.ಪಿ (32) ಹಾಗೂ ಕುಂಬಳೆ ಎಡನಾಡು ಮುಕ್ಕರಿಕ್ಕಂಡದ ಮೊಹಮ್ಮದ್ ರಿಜ್ವಾನ್ (27) ಬಂಧಿತರು. ಅಡ್ಕ ಎಂ. ಸಕ್ಕರಿಯಾ ನೀಡಿದ ದೂರಿನ ಪ್ರಕಾರ, ಸೆಡ್.ಎಂ.ಎಸ್ ಫಿಶ್ ಸರ್ವಿಸ್ ಕಚೇರಿ ಸಮೀಪ ನಿಲ್ಲಿಸಿದ್ದ ಮೀನು ಲಾರಿಯೇ ಕಳುವಾಗಿದೆ. ಶನಿವಾರ ರಾತ್ರಿ 11.30 ಗಂಟೆಯಿಂದ ಮುಂದಿನ ದಿನ ಬೆಳಗ್ಗೆ 8 ಗಂಟೆಯೊಳಗಿನ…

Read More

ಕಾಸರಗೋಡು ಗೋ-ಕುಟೀರ ನಿರ್ಮಾಣಕ್ಕೆ ಎರಡನೇ ಹಂತದ ಚಾಲನೆ

ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋ-ಕುಟೀರದ ಕಾಮಗಾರಿ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ಕಳೆದ ನವೆಂಬರ್ 4, 2025ರಂದು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರಿಂದ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತವಾಗಿ ಮೊದಲ ಅಂತಸ್ತಿನ ಗೋಮೇವು ಸಂಗ್ರಹಾಲಯ ಹಾಗೂ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಮಾರ್ಚ್ 24, 2026ರಂದು ಬೆಳಗ್ಗೆ 9.45ಕ್ಕೆ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ…

Read More

ಮಂಜೇಶ್ವರ ವಿಧಾನ ಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ? ಮತ ವಿಭಜನೆಗೆ ಕಾರಣವಾಗಲಿದೆಯೇ ಈ ನಿರ್ಧಾರ ? ಬಿಜೆಪಿಗೆ ಈ ನಿರ್ಧಾರದಿಂದ ವರವೋ ಯುಡಿಎಫ್ ಗೆ ಶಾಪವೋ ?

ಕಾಸರಗೋಡು: ರಾಜ್ಯದ ಗಡಿ ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ಕಾದುಕೊಂಡಿದ್ದು, ಗೆಲ್ಲುವ ಕುದುರೆ ಯಾವುದು ಎಂಬ ಕುತೂಹಲ ಹೆಚ್ಚಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಎಸ್‌ಡಿಪಿಐ ತನ್ನ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ.ಎಂ. ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ಸಮೀಕರಣಗಳಲ್ಲಿ ಅಚ್ಚರಿ ಮೂಡಿಸಿದೆ. ವಿಶೇಷವೆಂದರೆ, ಯುಡಿಎಫ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್ ಅವರ ಹೆಸರಿನೊಂದಿಗೆ ಹೋಲಿಕೆಯಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ….

Read More

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಭಕ್ತಿಭರವಸೆಯ ಹರಿಕಥಾ ಸಪ್ತಾಹ: ಸದಸ್ಯರು ಮತ್ತು ಭಕ್ತರಿಗೆ ಆಹ್ವಾನ

ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರ, ಹೊಸಂಗಡಿ–ಮಂಜೇಶ್ವರ ಪ್ರದೇಶದಲ್ಲಿ ಮಾರ್ಚ್ 25ರಿಂದ 31ರವರೆಗೆ ಭಕ್ತಿಭಾವದಿಂದ ಹರಿಕಥಾ ಸಪ್ತಾಹವನ್ನು ವೈಭವದಿಂದ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6.00ರಿಂದ 8.00ರವರೆಗೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಖ್ಯಾತ ಹರಿಕಥಾ ವಿದ್ವಾಂಸರು ಭಾಗವಹಿಸಿ ಪುರಾಣ ಪ್ರಸಂಗಗಳನ್ನು ನಿರೂಪಿಸಲಿದ್ದಾರೆ. ಮಾರ್ಚ್ 25, 2026 (ಬುಧವಾರ) ರಿಂದ ಮಾರ್ಚ್ 31, 2026 (ಮಂಗಳವಾರ) ರವರೆಗೆ ವಾರಪೂರ್ತಿ ಹರಿಕಥಾ ಸಪ್ತಾಹವನ್ನು ವೈಭವದಿಂದ ಆಯೋಜಿಸಲಾಗಿದೆ. ಈ ಸಪ್ತಾಹದ ಅಂಗವಾಗಿ ಪ್ರತಿದಿನ ಸಂಜೆ 6.00 ಗಂಟೆಗೆ ಹರಿಕಥಾ ಕಾರ್ಯಕ್ರಮ…

Read More

ಮಂಜೇಶ್ವರದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ

ಮಂಜೇಶ್ವರ: ಯುಡಿಎಫ್ (UDF) ನೇತಾರರು ಹಾಗೂ ಮಂಜೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಘವ್ ಮಂಜೇಶ್ವರ ಮತ್ತು ಪೈವಳಿಕೆಯ ಅಬ್ದುಲ್ ಸಮದ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಅಧಿಕೃತವಾಗಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ K. Surendran ಅವರು ಇಬ್ಬರಿಗೂ ಸದಸ್ಯತ್ವ ನೀಡಿ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ತತ್ವಗಳು ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ಪ್ರೇರಿತರಾಗಿ ಹೊಸ ಮುಖಗಳು ಬಿಜೆಪಿಗೆ ಸೇರುತ್ತಿರುವುದು ಸಂತೋಷದ ವಿಚಾರ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ…

Read More

ಕಾಸರಗೋಡಿನಲ್ಲಿ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಭರ್ಜರಿ ರೋಡ್ ಶೋ, ನಾಮಪತ್ರ ಸಲ್ಲಿಕೆ

ಕಾಸರಗೋಡು: ಸಪ್ತ ಭಾಷಾ ಸಂಗಮ ಭೂಮಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಭರ್ಜರಿ ರೋಡ್ ಶೋ ನಡೆಸಿ ಇಂದು ನಾಮಪತ್ರ ಸಲ್ಲಿಸಿದರು. ಕರಂದಕ್ಕಾಡು ಮೈದಾನದಿಂದ ಆರಂಭವಾದ ರೋಡ್ ಶೋ ಭಾರೀ ಜನಸಾಗರದ ಮಧ್ಯೆ ಸಾಗಿದ್ದು, ಸಾರ್ವಜನಿಕ ಮೆರವಣಿಗೆ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತು. ಮೆರವಣಿಗೆಯಲ್ಲಿ ಪಕ್ಷದ ಧ್ವಜಗಳು, ಘೋಷಣೆಗಳು ಮತ್ತು ಭರ್ಜರಿ ಸ್ವಾಗತದ ನಡುವೆ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಗಮನಸೆಳೆದರು . ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಎಡನೀರು ಮಠಕ್ಕೆ ಭೇಟಿ ನೀಡಿ…

Read More

ಮಂಜೇಶ್ವರ ವಿಧಾನಸಭಾ ಕ್ಷೇತ್ರ: ಎಸ್‌ಡಿಪಿಐ ಅಭ್ಯರ್ಥಿ ಅಶ್ರಫ್ ಬಡಾಜೆ ನಾಮಪತ್ರ ಸಲ್ಲಿಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಅಭ್ಯರ್ಥಿ ಅಶ್ರಫ್ ಬಡಾಜೆ ಅವರು ಸೋಮವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಮಧ್ಯಾಹ್ನ ಸುಮಾರು 1.30ರ ವೇಳೆಗೆ ಉಪ್ಪಳ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಅವರು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಕಾರ್ಯಕರ್ತರು ಉಪ್ಪಳ ಪಟ್ಟಣದ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು. ಪಕ್ಷದ…

Read More

ಮಂಜೇಶ್ವರದಲ್ಲಿ ಯು.ಡಿ.ಎಫ್. ಅಬ್ಬರ: ಎ.ಕೆ.ಎಂ. ಅಶ್ರಫ್ ನಾಮಪತ್ರ ಸಲ್ಲಿಕೆ

ಮಂಜೇಶ್ವರ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯು.ಡಿ.ಎಫ್. ಅಧಿಕೃತ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಉಪ್ಪಳದ ಲೀಗ್ ಕಚೇರಿಯಿಂದ ಯು.ಡಿ.ಎಫ್. ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಪಕ್ಷದ ಧ್ವಜಗಳನ್ನು ಹಿಡಿದು ಭರ್ಜರಿ ಮೆರವಣಿಗೆ ನಡೆಸಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿದ್ದು, ಭಾರೀ ಜನಸಮೂಹ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಶ್ರಫ್ ಅವರು, “ಮಂಜೇಶ್ವರದ ಅಭಿವೃದ್ಧಿ ಹಾಗೂ ಜನಸಾಮಾನ್ಯರ…

Read More

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಜನ್ಮ ದಿನಾಚರಣೆ: ಕೆ. ಸುರೇಂದ್ರನ್ ಭಾವನಾತ್ಮಕ ನಮನ

ಕಾಸರಗೋಡು: ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜನ್ಮ ದಿನದ ಅಂಗವಾಗಿ ಅವರ ನಿವಾಸಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆ. ಸುರೇಂದ್ರನ್ ಅವರು, ರಾಷ್ಟ್ರಕವಿಗಳ ಜನ್ಮನಾಡಿನಲ್ಲಿ ಗಡಿನಾಡ ಕನ್ನಡಿಗರ ಜನ್ಮಸಿದ್ಧ ಹಕ್ಕುಗಳ ಸಂರಕ್ಷಣೆ ತನ್ನ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮಂಜೇಶ್ವರ ಗೋವಿಂದ ಪೈ ಅವರ ಸೇವೆಯನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು…

Read More
error: Content is protected !!