ಕುಬಣೂರು ಶ್ರೀ ಪಿಲಿಚಾಮುಂಡಿ,ರಕ್ತೇಶ್ವರೀ ಹಾಗೂ ಗುಳಿಗ ದೈವಸ್ಥಾನದಲ್ಲಿ ವರ್ಷಾವಧಿ ನೇಮ ಜನವರಿ 26ಕ್ಕೆ

ಉಪ್ಪಳ : ಕುಬಣೂರು ಶ್ರೀ ಪಿಲಿಚಾಮುಂಡಿ,ರಕ್ತೇಶ್ವರೀ ಹಾಗೂ ಗುಳಿಗ ದೈವಸ್ಥಾನದಲ್ಲಿ ತಾರೀಕು 26-01-2026ನೇ ಸೋಮವಾರ ಶ್ರೀ ಪಿಲಿಚಾಮುಂಡಿ ದೈವದ ನೇಮ ಮತ್ತು ರಕ್ತೇಶ್ವರಿ,ಗುಳಿಗ ದೈವಗಳ ತಂಬಿಲ ಸೇವೆಯು ಕುಬಣೂರಾಯ ಕುಟುಂಬ ಮತ್ತು ಗ್ರಾಮಸ್ಥರ ಕೊಡುವಿಕೆಯೊಂದಿಗೆ ಬಹು ವಿಜ್ರಂಭಣೆಯಿಂದ ಜರಗಲಿರುವುದು. ಬೆಳಿಗ್ಗೆ ಗಂಟೆ 9ಕ್ಕೆ ಗಣಪತಿ ಹೋಮ ಮಧ್ಯಾಹ್ನ 2.00 ಗಂಟೆಗೆ ಕುಬಣೂರಾಯರ ಮನೆಯಿಂದ ಭಂಡಾರ ಹೊರಟು ಸಾಯಂಕಾಲ ಗಂಟೆ 4.00ರಿಂದ 5.00ರ ತನಕ ಭಜನೆ ,ಸಾಯಂಕಾಲ ಗಂಟೆ 5.00ರಿಂದ ದೈವದ ನೇಮ ನಡೆಯುವುದು

Read More

3.39 ಗ್ರಾಂ ಎಂಡಿಎಮ್‌ಎ ವಶ: ಮೂವರು ಯುವಕರ ಬಂಧನ; ಆಟೋ ಹಾಗೂ ಬುಲೆಟ್ ಜಪ್ತಿ

ಮಂಜೇಶ್ವರ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3.39 ಗ್ರಾಂ ಎಂಡಿಎಮ್‌ಎ (MDMA) ಸಾಗಾಟಕ್ಕೆ ಯತ್ನಿಸುತ್ತಿದ್ದ ಮೂವರು ಯುವಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ 6.15ರ ಸುಮಾರಿಗೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಸ್ಸೋಟ್–ಸತ್ಯದುಕ್ಕ–ಬಡಾಜೆ ಹಿಂದೂಸ್ತಾನ್ ಗ್ರೌಂಡ್ ಸಮೀಪ ನಡೆಸಿದ ತಪಾಸಣೆಯ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. KL-14 AD 9865 ಸಂಖ್ಯೆಯ ಆಟೋ ರಿಕ್ಷಾದ ಹಿಂಬದಿ ಸೀಟಿನಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆಂದು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದ…

Read More

ಪೈವಳಿಕೆ ಪಂಚಾಯತ್ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಮುಸ್ಲಿಂ ಲೀಗ್ ಸದಸ್ಯೆಯ ಬೆಂಬಲ

ಪೈವಳಿಕೆ: ಇಂದು ನಡೆದ ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯೆ ಮೈಮೂನತುಲ್ ಮಿಸ್ರಿಯಾ ಅವರು ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರಿಗೆ ಮತ ಚಲಾಯಿಸಿದರು. ಇದರೊಂದಿಗೆ ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರು ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಡಂಕೋಡಿ ವಾರ್ಡ್‌ನಿಂದ ಗೆದ್ದಿರುವ ಮುಸ್ಲಿಂ ಲೀಗ್ ಸದಸ್ಯೆ ಮೈಮೂನತುಲ್ ಮಿಸ್ರಿಯಾ ಅವರು, ಕುರುಡಪದವು ವಾರ್ಡ್‌ನಿಂದ ಆಯ್ಕೆಯಾದ ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರಿಗೆ ಮತ ನೀಡಿದರು. ಈ ಮೂಲಕ…

Read More

ಪೈವಳಿಗೆ ಪಂಚಾಯತ್ ಚುನಾವಣೆ ಮತ್ತೆ ಕೈ ಜೋಡಿಸಿದ ಬಿಜೆಪಿ ಯುಡಿಎಫ್ ಮೈತ್ರಿ

ಪೈವಳಿಗೆ ಪಂಚಾಯತ್‌ನಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಮತ್ತೆ ಬಿಜೆಪಿ–ಯುಡಿಎಫ್ ಮೈತ್ರಿ ಸ್ಪಷ್ಟವಾಗಿ ಹೊರಹೊಮ್ಮಿದೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ಸುಮನಾ ಜಿ. ಭಟ್ ಅವರು ಸಿಪಿಎಂ ಅಭ್ಯರ್ಥಿ ದಿನೇಶ್ವರಿ ನಾಗೇಶ್ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಪ್ರಮುಖ ಬೆಳವಣಿಗೆಯಾಗಿ ಕಾಡಂಕೋಡಿ ವಾರ್ಡ್‌ನ ಮುಸ್ಲಿಂ ಲೀಗ್ ಸದಸ್ಯೆ ಮೈಮುನತುಲ್ ಮಿಸ್ರಿಯಾ ಅವರು ಬಿಜೆಪಿ ಸದಸ್ಯೆ ಸುಮನಾ ಜಿ. ಭಟ್ ಪರವಾಗಿ ಮತ ಚಲಾಯಿಸಿದ್ದು, ಬಿಜೆಪಿ–ಯುಡಿಎಫ್…

Read More

ಕೇರಳ ವಿರುದ್ದ ಕರ್ನಾಟಕ ಸಿಎಂ ಹೇಳಿಕೆ ವಾಸ್ತವಕ್ಕೆ ವಿರುದ್ಧ: ಕೆ. ಆರ್. ಜಯಾನಂದ

ಮಂಜೇಶ್ವರ : ಮಲಯಾಳಂ ಭಾಷಾ ಮಸೂದೆ ಹೆಸರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಸಚಿವರು ಮಸೂದೆ ಯಲ್ಲೇನಿದೆ ಎಂಬುದರಿಯದೇ ಕೇರಳ ಮತ್ತು ಮಲಯಾಳಂ ಬಗ್ಗೆ ವಾಸ್ತವ ವಿರುದ್ಧ ಹೇಳಿಕೆ ನೀಡಿದ್ದು ಸರಿಯಲ್ಲ.ಇದು ಕೇರಳ ವಿರೋಧಿ ಧೋರಣೆ ತಳೆಯುತ್ತಿದ್ದಾರೆ ಎಂಬುವುದಕ್ಕೆ ಉತ್ತಮ ಉದಾಹರಣೆ ಯಾಗಿದೆ. ಈ ಹೇಳಿಕೆ ಎಂದು ಸಿಪಿಐ ಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ಆರ್ ಜಯಾನಂದ ಆರೋಪಿಸಿದ್ದಾರೆ. ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಸರಕಾರ ವರ್ಷದ ಹಿಂದೆಯೇ ಮಂಡಿಸಿ ಅಂಗೀಕರಿಸಿತ್ತು.ಆದರೆ ಅಂದು ಇದಕ್ಕೆ ರಾಷ್ಟ್ರಪತಿ…

Read More

ಮಂಜೇಶ್ವರ: ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಗೆ 1994-95 ನೇ ಸಾಲಿನ ಪೂರ್ವ ವಿದ್ಯಾರ್ಥಿಗಳಿಂದ ಸಹಾಯ ಹಸ್ತ

ಮಂಜೇಶ್ವರ : ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯ ಅಡುಗೆ ಕೋಣೆಗೆ ಅಗತ್ಯವಿರುವ ಸಾಮಾಗ್ರಿಗಳ ಕೊರತೆ ಇರುವುದು ತಿಳಿದ ಹಿನ್ನೆಲೆಯಲ್ಲಿ, ಅದೇ ಶಾಲೆಯ 1994–95ನೇ ಸಾಲಿನ ಪೂರ್ವ ವಿದ್ಯಾರ್ಥಿಗಳು ಶಾಲೆಗೆ ಅಗತ್ಯವಿದ್ದ ಅಡುಗೆ ಕೋಣೆಯ ಸಾಮಾಗ್ರಿಗಳನ್ನು ದೇಣಿಗೆಯಾಗಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪೂರ್ವ ವಿದ್ಯಾರ್ಥಿಗಳಾದ ಅಶ್ರಫ್ ಕುಂಜತ್ತೂರು, ಗಫೂರ್, ಚಂದ್ರಹಾಸ, ಅಶ್ರಫ್ ವಿ.ವಿ., ಗಣೇಶ ಹಾಗೂ ಲತೀಫ್ ಅವರುಗಳು ಅಗತ್ಯ ಸಾಮಾಗ್ರಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪಿಟಿಎ ಅಧ್ಯಕ್ಷರಾದ ಮುಸ್ತಫ ಉದ್ಯಾವರ ಹಾಗೂ ಶಾಲೆಯ…

Read More

ಬಂದ್ಯೋಡ್ ನಲ್ಲಿ ಅಗ್ನಿ ದುರಂತ: ಪೀಠೋಪಕರಣ–ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ

ಬಂದ್ಯೋಡ್ : ಬಂದ್ಯೋಡ್ ನಲ್ಲಿ ಸಿರಿಯಾಲ್ ಖದೀಜಾ ಅವರ ಒಡೆತನದ ಮನೆಯಲ್ಲಿ ನಿನ್ನೆ ಸಂಜೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಬೆಂಕಿಯಿಂದ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದ್ದು, ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಯ ಬಜಾರ್‌ನಿಂದ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಪ್ರಾಥಮಿಕ ತನಿಖೆಯ ಪ್ರಕಾರ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆ ವೇಳೆ ಮನೆಯಲ್ಲಿ…

Read More

ಕುಂಬಳೆ ಅನಂತಪುರ ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ: ಕಟ್ಟಡ ಸಂಪೂರ್ಣ ಧ್ವಂಸ

ಮಂಜೇಶ್ವರ: ಕುಂಬಳೆ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಪಟಾಕಿ ನಿರ್ಮಾಣ ಘಟಕ ಅಗ್ನಿಗಾಹುತಿಯಾಗಿ ಬೃಹತ್ ಸ್ಫೋಟದೊಂದಿಗೆ ಕಟ್ಟಡ ಛಿದ್ರ ಛಿದ್ರವಾಗಿದೆ. ಸೋಮವಾರ ಬೆಳಿಗ್ಗೆ 10ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಕೈಗಾರಿಕಾ ಪ್ರಾಂಗಣದಲ್ಲಿ ಕಾರ್ಯಾಚರಿಸುವ ರೆಡ್‌ ಫೋರ್ಟ್ ಸಿಡಿಮದ್ದು ನಿರ್ಮಾಣ ಘಟಕ ದ ಗೋದಾಮಿನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಕಾಸರಗೋಡು ಹಾಗೂ ಉಪ್ಪಳದಿಂದ ಅಗ್ನಿ ಶಾಮಕದಳ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದೆ. ಕಟ್ಟಡ ಸಂಪೂರ್ಣ ಕುಸಿದು ಛಿದ್ರವಾಗಿದೆ. ಜೀವಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Read More

ಉಪ್ಪಳದಲ್ಲಿ 180 ವರ್ಷಗಳ ಪರಂಪರೆಯ ಆವಳಾ ಅಬ್ದುಲ್ ಖಾದರ್ ಉಪ್ಪಾಪ ಕುಟುಂಬ ಸಮ್ಮಿಲನ

ಉಪ್ಪಳ: ಉಪ್ಪಳದ ಫೆರೋ ಹಾಲಿನಲ್ಲಿ ಸುಮಾರು 180 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಆವಳಾ ಅಬ್ದುಲ್ ಖಾದರ್ ಉಪ್ಪಾಪ ಅವರ ಕುಟುಂಬ ಪರಂಪರೆಯ ಭವ್ಯ ಕುಟುಂಬ ಸಮ್ಮಿಲನವು ನಡೆಯಿತು. ಈ ಕುಟುಂಬ ಸಮ್ಮಿಲನದ ಅಧ್ಯಕ್ಷತೆಯನ್ನು ಕುಟುಂಬದಲ್ಲಿರುವ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿರುವ ಅಬ್ದುಲ್ ಖಾದರ್ ಹಾಜಿ ಪಂಜರವರು ಅಲಂಕರಿಸಿದರು. ದುಆ ಮತ್ತು ಕಿರಾಅತ್‌ನೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲಾ ಗಣ್ಯ ಅತಿಥಿಗಳನ್ನು ಶಕೀಲ್ ಮಂಗಳೂರು ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುನೀರ್ ಬಾಯಾರ್…

Read More

ಮಂಜೇಶ್ವರ: ಟೋಲ್ ಶುಲ್ಕ ವಸೂಲಿಗೆ ತೀವ್ರ ವಿರೋಧ, ಶಾಸಕರ ನೇತೃತ್ವದಲ್ಲಿ ರಸ್ತೆ ತಡೆ

ಮಂಜೇಶ್ವರ : ರಾ. ಹೆದ್ದಾರಿಯ ಟೋಲ್ ಶುಲ್ಕ ಸಂಗ್ರಹಕ್ಕೆ ಟೋಲ್ ವಿರೋಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ, ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ತಡೆಯೊಡ್ಡಲಾಯಿತು.ಸೋಮವಾರ ಬೆಳಿಗ್ಗೆ ಟೋಲ್ ಶುಲ್ಕ ವಸೂಲಾತಿ ಆರಂಭಗೊಂಡ ಬೆನ್ನಲ್ಲೇ ಪ್ರತಿಭಟನಾಕಾರರು ಆಗಮಿಸಿ ತಡೆಯೊಡ್ಡುವ ದೃಶ್ಯ ಕಂಡು ಬಂತು. ಕೂಡಲೇ ಆಗಮಿಸಿದ ಪೊಲೀಸರು ಶಾಸಕರ ಸಹಿತ ಪ್ರತಿಭಟನಾ ಕಾರರನ್ನು ಬಂಧಿಸಿ ಕೊಂಡೊಯ್ಯಲು ಯತ್ನಿಸಿದರು. ಇದು ಸ್ಥಳದಲ್ಲಿ ಸಂಘರ್ಷಾವಸ್ಥೆಗೆ ಕಾರಣವಾಯಿತು. ಟೋಲ್ ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಕಾಸರಗೋಡು ಮಂಗಳೂರು ಮಧ್ಯೆ ಕು0ಬಳೆಯಲ್ಲಿ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ…

Read More
error: Content is protected !!