ಬಂಗ್ರಮಂಜೇಶ್ವರದಲ್ಲಿ ಭೂಕುಸಿತ, ಮನೆ-ಬಾವಿ ನಾಶ: ಕುಟುಂಬ ಸ್ಥಳಾಂತರ

​ಮಂಜೇಶ್ವರ: ಬಂಗ್ರಮಂಜೇಶ್ವರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದು, ಕನಿಲ ಭಂಡಾರ ನಿಲಯದ ಪುರುಷೋತ್ತಮ ಅವರ ಮನೆಗೆ ಭಾರಿ ಹಾನಿಯಾಗಿದೆ. ಶುಕ್ರವಾರ ಮಣ್ಣು ಕುಸಿದು ಬಾವಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದರೆ, ಶನಿವಾರ ಮುಂಜಾನೆ ಮತ್ತೆ ಗುಡ್ಡ ಕುಸಿದು ಮನೆಯ ಅಡುಗೆಕೋಣೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯ ಭಾಗಶಃ ಹಾನಿಗೊಳಗಾಗಿದ್ದು, ಆತಂಕಗೊಂಡ ಎಂಟು ಮಂದಿಯ ಕುಟುಂಬವನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಸುತ್ತಮುತ್ತಲಿನ ಮನೆಗಳಿಗೂ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಪಂಚಾಯತ್ ಮತ್ತು…

Read More

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ!

ಉಪ್ಪಳ : ಜೋಡುಕಲ್ಲುವಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಗುರುಪ್ರಸಾದ್ ಮತ್ತು ತುಳಸಿ ದಂಪತಿಗಳ ಒಂದೂವರೆ ವರ್ಷದ ಪುತ್ರ ರಿತುರಾಜ್ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಶನಿವಾರ ಮಧ್ಯಾಹ್ನ ತಾಯಿ ಸಮೀಪದಲ್ಲೇ ಬಟ್ಟೆ ಒಗೆಯುತ್ತಿದ್ದಾಗ, ಅನಿರೀಕ್ಷಿತವಾಗಿ ಬಂದ ನಾಯಿ ಮಗುವನ್ನು ಕಚ್ಚಿ ಎಳೆದಾಡಿದೆ. ಮಗುವಿನ ಚೀರಾಟ ಕೇಳಿ ತಾಯಿ ಕೂಡಲೇ ಓಡಿಬಂದಾಗ ನಾಯಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಬೀದಿ…

Read More

ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಮಳಿಗೆಗೆ ನುಗ್ಗಿದ ಕಾರು

​ಮಂಜೇಶ್ವರ: ಇಲ್ಲಿಯ ಕಟ್ಟೆ ಬಜಾರ್ ತಿರುವಿನಲ್ಲಿ ಇಂದು ಅನಿರೀಕ್ಷಿತ ಅಪಘಾತವೊಂದು ಸಂಭವಿಸಿದೆ.ಹೊಸಂಗಡಿಯಿಂದ ಮಂಜೇಶ್ವರದತ್ತ ತೆರಳುತ್ತಿದ್ದ ಕಾರಿನ ಒಳಗೆ ಹಠಾತ್ತನೆ ಇಲಿಯೊಂದು ಕಾಣಿಸಿಕೊಂಡಿದ್ದೇ ಚಾಲಕನ ಗಾಬರಿಗೆ ಕಾರಣವಾಯಿತು. ಚಾಲಕನ ಕಾಲಿನ ಬಳಿ ಇಲಿ ಚಲಿಸುತ್ತಿದ್ದಂತೆಯೇ ಕಸಿವಿಸಿಗೊಂಡ ಚಾಲಕ ವಾಹನದ ಮೇಲಿನ ಹಿಡಿತ ಕಳೆದುಕೊಂಡರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು, ತದನಂತರ ಸಮೀಪವಿದ್ದ ಹಳೆಯ ಕಟ್ಟಡದ ಟೈಲರ್ ಅಂಗಡಿಯೊಳಗೆ ನುಗ್ಗಿತು. ಅದೃಷ್ಟವಶಾತ್, ಫೋನ್ ಮಾತನಾಡಲು ದ್ವಿಚಕ್ರ ವಾಹನದಿಂದ ಇಳಿದಿದ್ದ ಸವಾರ ಕ್ಷಣಾರ್ಧದಲ್ಲಿ…

Read More

ಭಾರೀ ಮಳೆಗೆ ಮಂಜೇಶ್ವರದಲ್ಲಿ ಗುಡ್ಡ ಕುಸಿತ; ಬಾವಿ ಮಣ್ಣಿನಲ್ಲಿ ಸಂಪೂರ್ಣ ಮುಚ್ಚಳ

ಮಂಜೇಶ್ವರ: ನಿನ್ನೆ ಸುರಿದ ಭಾರೀ ಮಳೆಯ ಪರಿಣಾಮ ಮಂಜೇಶ್ವರದ ಪೊಯ್ಯೆ ಕಂಡ ಪ್ರದೇಶದಲ್ಲಿ ಗುಡ್ಡ ಕುಸಿದ ಘಟನೆ ನಡೆದಿದೆ.ಗುಡ್ಡದಿಂದ ಜರಿದು ಬಂದ ಅಪಾರ ಪ್ರಮಾಣದ ಮಣ್ಣು ಪುರುಷೋತ್ತಮ ಎಂಬವರ ಮನೆಯ ಬಾವಿಯೊಳಗೆ ನುಗ್ಗಿ, ಬಾವಿ ಸಂಪೂರ್ಣ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ಬಾವಿಗೆ ಭಾರೀ ಹಾನಿಯಾಗಿದ್ದು, ಬಳಕೆಗೆ ಅಸಾಧ್ಯವಾಗಿದೆ. ಗುಡ್ಡ ಕುಸಿತ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಮನೆ ಇದ್ದರೂ, ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

Read More

ಮಂಜೇಶ್ವರದಲ್ಲಿ ಕುಸಿದ ಹೆಂಚಿನ ಮನೆ: ಕೂದಲೆಳೆಯ ಅಂತರದಲ್ಲಿ ಬದುಕುಳಿದ ಕುಟುಂಬ

​ಮಂಜೇಶ್ವರ : ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪವಿರುವ ವೇದಾವತಿ ಎಂಬವರ ಮನೆ ಹಠಾತ್ತಾಗಿ ಕುಸಿದುಬಿದ್ದಿದೆ. ತೀವ್ರ ಶಬ್ದ ಕೇಳಿ ಎಚ್ಚೆತ್ತ ಕುಟುಂಬದವರು ತಕ್ಷಣ ಮನೆಯಿಂದ ಹೊರಗೆ ಓಡಿಬಂದಿದ್ದರಿಂದ, ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ​ಮನೆ ಕುಸಿದ ಪರಿಣಾಮ ಹೆಂಚಿನ ಛಾವಣಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ತೀವ್ರ ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡ ಹರಿಶ್ಚಂದ್ರ ಮಂಜೇಶ್ವರ, ಸ್ಥಳೀಯ ವಾರ್ಡ್ ಸದಸ್ಯೆ ಹರಿಣಾಕ್ಷಿ ಮತ್ತು ಕಲ್ಕಿ ಮಂಜೇಶ್ವರದ ಅರುಣ್ ದುರ್ಗಿಪಳ್ಳ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ…

Read More

ಉದ್ಯಾವರ ದುಬೈ ಸಮಿತಿ ಯುಡಿಸಿ ವತಿಯಿಂದ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಜೇಶ್ವರ: ಉದ್ಯಾವರ ಪ್ರದೇಶದ ದುಬೈನಲ್ಲಿ ನೆಲೆಸಿರುವ ಪ್ರವಾಸಿಗರ ಒಕ್ಕೂಟವಾದ ‘ಉದ್ಯಾವರ ದುಬೈ ಸಮಿತಿ’ ಯುಡಿಸಿ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ‘ಎ ಪ್ಲಸ್’ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ‘ಎಜುಕೇಷನಲ್ ಎಕ್ಸಲೆನ್ಸ್ ಅವಾರ್ಡ್-2026’ ನೀಡಿ ಸನ್ಮಾನಿಸಿತು. ​ಕಳೆದ 40 ವರ್ಷಗಳಿಂದ ಉದ್ಯಾವರ ಪ್ರದೇಶದಲ್ಲಿ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಮತ್ತು ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಾವರ ದುಬೈ ಸಮಿತಿಯು, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾಗಿದೆ. ​ಮಂಜೇಶ್ವರದ ಎ.ಕೆ. ಗಾರ್ಡನ್‌ನಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್…

Read More

​ಮಂಜೇಶ್ವರದಲ್ಲಿ ಪೋಲಿಯೋ ಲಸಿಕಾ ಅಭಿಯಾನ: ಜನಪ್ರತಿನಿಧಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಸಕ್ರಿಯ ಭಾಗಿ

ಮಂಜೇಶ್ವರ: ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ, ಭಾನುವಾರ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೋಲಿಯೋ ಲಸಿಕಾ ಅಭಿಯಾನವು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ನಡೆಯಿತು. ಈ ಅಭಿಯಾನದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೈಜೋಡಿಸಿ ಯಶಸ್ವಿಗೊಳಿಸಿದರು. ​ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು,…

Read More
error: Content is protected !!