ಮಂಜೇಶ್ವರ :ರಾಷ್ಟ್ರೀಯ ಹೆದ್ದಾರಿ ಪಾದಾಚಾರಿ ಮೇಲ್ಸೇತುವೆ ಕಾಮಗಾರಿ ಗೆ ಚಾಲನೆ.

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಎರಡೂ ದಿಕ್ಕುಗಳಿಗೆ ದಾಟಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಪಾದಾಚಾರಿ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿತು. ಮೇಲ್ಸೇತುವೆ ನಿರ್ಮಾಣ ಸ್ಥಳದ ಬಗ್ಗೆ ಕೆಲವೊಂದು ಮಂದಿ ರೈಲು ನಿಲ್ದಾಣದ ಸಮೀಪ ಫ್ಲೈಓವರ್ ಬೇಕೆಂಬ ಬೇಡಿಕೆ ಇಟ್ಟಿದ್ದರೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರಿನವರು ಬೇಡಿಕೆ ಇಟ್ಟಿದ್ದ ಸ್ಥಳದಲ್ಲೇ ಇದೀಗ ಕಾಮಗಾರಿ ಆರಂಭಗೊಂಡಿರುವುದನ್ನು ಹೋರಾಟ ಕ್ರಿಯಾ ಸಮಿತಿ ಹಾಗೂ ಊರವರು ಸ್ವಾಗತಿಸಿದ್ದಾರೆ. ಈ ಪಾದಾಚಾರಿ ಮೇಲ್ಸೇತುವೆ ನಿರ್ಮಾಣದಿಂದಾಗಿ…

Read More

ಸೀತಾಂಗೋಳಿಯಲ್ಲಿ ಹಾರ್ಡ್ ವೇರ್ ಅಂಗಡಿ ಅಗ್ನಿಗಾಹುತಿ

ಸೀತಾಂಗೋಳಿ: ಇಲ್ಲಿನ ಪುತ್ತಿಗೆ ರಸ್ತೆಯ ಮುಕಾರಿಗದ್ದೆಯಲ್ಲಿ ನೂತನವಾಗಿ ಆರಂಭಗೊಂಡ ಆರ್ಶ್ ಹಾರ್ಡ್ ವೇರ್ ಅಂಗಡಿ ಅಗ್ನಿ ಅನಾಹುತಕ್ಕೊಳಗಾಗಿದೆ. ಇಂದು ಬೆಳಿಗ್ಗೆ 9ಗಂಟೆಯ ವೇಳೆಗೆ ಮುಚ್ಚಿದ್ದ ಅಂಗಡಿಯೊಳಗಿಂದ ಹೊಗೆ ಏಳುವುದನ್ನು ಕಂಡು ನಾಗರಿಕರು ನೀಡಿದ ಮಾಹಿತಿಯಂತೆ ಅಗ್ನಿ ಶಾಮಕ ದಳದವರು ಮತ್ತು ಪೋಲೀಸರು ಆಗಮಿಸಿದರು. ಅಗ್ನಿ ಶಾಮಕ ದಳದ ಕಾಸರಗೋಡು, ಉಪ್ಪಳ ಘಟಕದ 4 ವಾಹನ ಬಂದರೂ ತಕ್ಷಣ ಅಗ್ನಿ ನಂದಿಸಲಿಕ್ಕಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.ಬದಿಯಡ್ಕ ಬಳಿಯ ಅರ್ಷಾದ್ ಎಂಬವರ ಮಾಲಕತ್ವದ ಸಂಸ್ಥೆ ಇದಾಗಿದೆ. ಕುಂಬಳೆ ಪೋಲೀಸರು ಸ್ಥಳದಲ್ಲಿದ್ದಾರೆ. ಅಗ್ನಿ…

Read More

ಪೆಟ್ರೋಲ್ ಬಂಕ್ ಟ್ಯಾಂಕ್ ನಿರ್ಮಾಣಕ್ಕೆ ಅಗೆದ ಹೊಂಡದಲ್ಲಿ ಜೀರ್ಣಾವಸ್ಥೆಯಲ್ಲಿ ಪುರುಷ ಶವ ಪತ್ತೆ

ಮಂಜೇಶ್ವರ : ಪೆರಿಯ ನವೋದಯ ನಗರದಲ್ಲಿ ನಿರ್ಮಾಣದಲ್ಲಿರುವ ಪೆಟ್ರೋಲ್ ಬಂಕ್ ನ ಟ್ಯಾಂಕ್ ನಿರ್ಮಿಸಲು ಅಗೆದ ಹೊಂಡದಲ್ಲಿ ಜೀರ್ಣಾವಸ್ಥೆಯಲ್ಲಿರುವ ಪುರುಷನ ಶವವೊಂದು ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿಲ್ಲ. ಗುರುವಾರ ಮಧ್ಯಾಹ್ನದ ಸುಮಾರಿಗೆ ಆಳವಿರುವ ಹೊಂಡದಲ್ಲಿ ಶವ ಮಣ್ಣಿನಲ್ಲಿ ಕೊಳೆತು ಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ.ಪೆಟ್ರೋಲ್ ಬಂಕ್ ಪರಿಸರದಲ್ಲಿ ದುರ್ಗಂಧ ಭೀರಿದ ಹಿನ್ನೆಲೆಯಲ್ಲಿ ಪರಿಸರದ ಮನೆಯವರು ಆಗಮಿಸಿ ನಡೆಸಿದ ಶೋಧದಲ್ಲಿ ಶವ ಪತ್ತೆಯಾಗಿದೆ. ಶವ 3 ದಿನ ಹಳೆಯದಾಗಿರಬಹುದಾಗಿ ಶಂಕಿಸಲಾಗಿದೆ. ಮಾಹಿತಿ ಅರಿತು ಊರವರು ಹಾಗೂ ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Read More

ವರ್ಕಾಡಿ ದೇವಂದಪಡ್ದ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಮಾಪ್ತಿ

ದೇವಂದಪಡ್ದ್ಪು ಶ್ರೀ ಮಹಾವಿಷ್ಣು ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಇತ್ತೀಚೆಗೆ ನಡೆಯಿತು ಜಾತ್ರೋತ್ಸವದ ಪೂರ್ವಭಾವಿಯಾಗಿ ಸಂಧ್ಯಾ ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಳನೇ ದಿವಸದ ಸಂಧ್ಯಾ ಭಜನೆಯನ್ನು ಮುಂಬಯಿ ಉದ್ಯಮಿ ಬಾಸ್ಕರ ಪೂಜಾರಿ ದೊಡುಗುರಿ, ಕನಿಲ ಭಗವತಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ರಾದ ಗಣೇಶ್ ಪಾವೂರು , ಶ್ರೀಮತಿ ವಿದ್ಯಾ ಹರೀಶ್ ಸುವರ್ಣ ಮುಡಿಮಾರ್, ಆನಂದ ಬಲ್ಲೂರು, ಶ್ರೀಮತಿ ದೀಪ ರಂಜನ್ ತಲಪಾಡಿ,ಕೋರಿಮುಗೇರ್ ನವೀನ್ ಕುಮಾರ್ ದಂಪತಿ ಯರು, ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನಾ ಸಂಕೀರ್ತನೆಯಲ್ಲಿ ನಾಗಮೂಲ ಭಜನಾ…

Read More

ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ

ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸತತ 20ನೇ ಬಾರಿಗೆ 100% ಫಲಿತಾಂಶವನ್ನು ಸಾಧಿಸುವ ಮೂಲಕ ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಸಾಧನೆ ಮೆರೆದಿದೆ. ಒಟ್ಟು 76 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 54 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 97% ಅಂಕಗಳೊಂದಿಗೆ ಕುಮಾರಿ ತನ್ವಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಕನ್ನಡ ಭಾಷೆಯಲ್ಲಿ 7 ವಿದ್ಯಾರ್ಥಿಗಳು ಮತ್ತು ಗಣಿತದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ…

Read More

ಪೊಲೀಸ್ ಗುಪ್ತ ಕಾರ್ಯಾಚರಣೆ ನಕಲಿ ಸರ್ಟಿಫಿಕೇಟ್ ನಿರ್ಮಿಸುವ ಕೇಂದ್ರ ಪತ್ತೆ

ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಹೊಸದುರ್ಗದಲ್ಲಿ ಕಾರ್ಯವೆಸಗುತ್ತಿದ್ದ ನಕಲಿ ಸರ್ಟಿಫಿಕೇಟ್ ಹಾಗೂ ದಾಖಲೆಪತ್ರಗಳನ್ನು ನಿರ್ಮಿಸುವ ಗುಪ್ತ ಕೇಂದ್ರಗಳನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕಡಪುರದ ಶಿಹಾಬ್ (38), ಮುಳಿಕ್ಕಾಂ ಕ್ಲಾಯಿಕೋಡಿನ ಪಿ. ರವೀಂದ್ರನ್ (51) ಮತ್ತು ಹೊಸದುರ್ಗ ಕೊವ್ವಲ್‌ಪಳ್ಳಿಯ ಸಂತೋಷ್ ಕುಮಾರ್ (45) ಎಂಬವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಟಿ. ಅಖಿಲ್ ನೇತೃತ್ವದ ಪೊಲೀಸರು ನಿನ್ನೆ ಈ ಕಾರ್ಯಾಚರಣೆ ನಡೆಸಿದ್ದಾರೆ. ನೆಟ್ ಫಾರ್ ಯೂ ಕೆಫೆ ಹಾಗೂ ಬಂಧಿತರಾದ ಆರೋಪಿಗಳ ಪೈಕಿ…

Read More

ಪೊದರು ಗಳಿಂದ ಆವೃತ್ತವಾದ ವಿದ್ಯುತ್ ಟ್ರಾನ್ಸ್ಫರ್ಮಾರ್ ಗಳು, ಸಾರ್ವಜನಿಕ ಸಂಚಾರಕ್ಕೆ ಸವಾಲು

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ಅಂಬಿತ್ತಡಿಗಳಲ್ಲಿ ಸ್ಥಾಪಿತವಾಗಿರುವ ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಧೀನದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು ಪೊದರುಗಳಿಂದ ಆವರಿಸಲ್ಪಟ್ಟು ಸಾರ್ವಜನಿಕ ಸುರಕ್ಷತೆಗೆ ಭಾರೀ ಅಪಾಯಕಾರಿಯಾಗಿದೆ.ಈ ದಾರಿಯಾಗಿ ಪ್ರತಿ ದಿನ ನೂರಾರು ಮಂದಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸುತಿದ್ದಾರೆ. ಅಂಬಿತ್ತಡಿ ಹಾಗೂ ರಾಗಂ ಜಂಕ್ಷನ್ ರಸ್ತೆ ಬದಿಯಲ್ಲಿ ಸ್ಥಾಪಿಸಲ್ಪಟ್ಟಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಪೂರ್ಣವಾಗಿ ಕಾಡುಹಿಡಿದ ಪೊದರುಗಳಿಂದ ಆವರಿಸಲ್ಪಟ್ಟಿವೆ. ಈ ಪೊದರುಗಳು ಮಳೆಯ ಸಮಯದಲ್ಲಿ ತೊಳೆದ ನಂತರ ಅಥವಾ ಗಾಳಿಗೆ ಬಿದ್ದು ಟ್ರಾನ್ಸ್‌ಫಾರ್ಮರ್‌ಗೆ ಸ್ಪರ್ಶಿಸಿದರೆ ವಿದ್ಯುತ್…

Read More

ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟಕ್ಕೆ ಅದ್ದೂರಿ ಯ ತೆರೆ

ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಮೇ 04 ರಿಂದ 11 ವರೆಗೆ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟದ ಸಮಾರೋಪ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ ಸನೋಜ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಚೆಯರ್ಮನ್ ವಿ.ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ,ಅಬ್ದುಲ್ ವಹಾಬ್,ಮುಹಮ್ಮದ್ ಇಬ್ರಾಹಿಂ,ಯು.ಕೆ ಯೂಸುಫ್, ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯೂ,ರಾಜ್ಯ ಸಮಿತಿ ಸದಸ್ಯ ಕೆ. ಸಬೀಶ್, ಜಿಲ್ಲಾ ಜತೆ…

Read More

ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ

ಮಂಜೇಶ್ವರ : ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ ನಡೆಯಿತು.ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಡೆದ ಮಹಾ ಸಭೆಯನ್ನು ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಆರಿಫ್ ಮಚ್ಚಂಪ್ಪಾಡಿ, ಅಬ್ದುಲ್ ರಹ್ಮಾನ್ ಪಾರಕಟ್ಟ, ಸಾಯಿಭದ್ರ ರೈ, ಸಲಾಂ ವರ್ಕಾಡಿ, ರತನ್ ಹೊಸಂಗಡಿ, ರವಿ ಪ್ರತಾಪ ನಗರ, ದೀಪಕ್ ರಾಜ್ ಉಪ್ಪಳ ಮೊದಲಾದವರು ಮಾತನಾಡಿದರು. ನೂತನ ವರ್ಷದ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಲಾಂ…

Read More

ಉದ್ಯಾವರ ಶ್ರೀ ಅರಸು ಮಂಜಿಷ್ಲಾರ್ ದೈವಗಳ ವರ್ಷಾವಧಿ ಉತ್ಸವಕ್ಕೆ ಸಂಭ್ರಮದ ಸಮಾಪ್ತಿ.

ಕಳೆದ ನಾಲ್ಕು ದಿನಗಳಲ್ಲಾಗಿ ನಡೆದ ಉತ್ಸವ ಭಾನುವಾರದಂದು ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂಡಿತು. ಈ ಸಲ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾರೀ ಜನಸ್ತೋಮವೇ ಕಂಡು ಬಂತು. ಧ್ವಜರೋಹಣದ ಮರುದಿವಸ ನಡೆದ ಯಕ್ಷಗಾನ ತಾಳಮದ್ದಳೆ, ಸಂಗೀತ ರಸಮಂಜರಿ ಬಳಿಕ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ ವೀಕ್ಷಿಸಲು ಉಭಯ ರಾಜ್ಯಗಳ ನಾನಾ ಕಡೆಗಳಿಂದ ಭಕ್ತರ ಸಾಗರವೇ ಹರಿದು ಬಂದಿತ್ತು. ಅದೇ ರೀತಿ ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ…

Read More
error: Content is protected !!