ಮಾದಕ ದ್ರವ್ಯ ಪ್ರಕರಣಗಳಲ್ಲಿ ಆರೋಪಿಗೆ ಪಿಟ್ ಎನ್‌ಡಿಪಿಎಸ್ ಕಾಯ್ದೆ: ಬಂಧನ
ಕಾಸರಗೋಡು, ಏಪ್ರಿಲ್ 3: ಹಲವು ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೋಯಿಪ್ಪಾಡಿ ಮೂಲದ ವ್ಯಕ್ತಿಯನ್ನು ಪಿಟ್ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ. ಕುಂಬಳೆ ಪೊಲೀಸರು ಕೋಯಿಪ್ಪಾಡಿ ಕಡಪ್ಪುರದ ಶಫೀರಾ ಮನ್ಸಿಲ್ ನಿವಾಸಿ ಕೆ.ಕೆ. ಸಾಧಿಕ್ (33) ಅವರನ್ನು ಬಂಧಿಸಿದ್ದು, ಇನ್‌ಸ್ಪೆಕ್ಟರ್ ಬೈಜು ಕೆ. ಥೋಮಸ್ ಹಾಗೂ ಎಸ್‌ಐಗಳಾದ ಸನಿತ್ ಮತ್ತು ಅನಂತಕೃಷ್ಣನ್ ಆರ್. ಮೆನನ್ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತನನ್ನು ಪೂಜಪ್ಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದ್ದು, ಮುಂದಿನ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ….