ಮಂಜೇಶ್ವರ ಚುನಾವಣೆಗೆ ಸಸ್ಪೆನ್ಸ್: ಲವಿನಾ ಎಂಟ್ರಿಯಿಂದ ಹೈ-ವೋಲ್ಟೇಜ್ ಫೈಟ್, ತ್ರಿಕೋನ ಕಾದಾಟಕ್ಕೆ ಹೊಸ ಟ್ವಿಸ್ಟ್ – ಸ್ವತಂತ್ರ ಅಭ್ಯರ್ಥಿಯಿಂದ ಶಾಕ್!
ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮಂಜೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷೆ ಜೀನ್ ಲವಿನಾ ಮಾಂತೆರೋ ಅವರು ಅಂತಿಮ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆಗೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆ ಪ್ರಮುಖ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬದಲಾಯಿಸುವ ಸಾಧ್ಯತೆಯಿದ್ದು, ವಿಶೇಷವಾಗಿ ಬಿಜೆಪಿಗೆ ಇದು ಅನುಕೂಲಕರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಧಕ್ಕೆಯಾಗುವ ಭೀತಿಯಲ್ಲಿ ಯುಡಿಎಫ್ ಪಾಳೆಯದಲ್ಲಿ ಆತಂಕ ಮನೆಮಾಡಿದೆ. ಮಂಜೇಶ್ವರ ಕ್ಷೇತ್ರದಲ್ಲಿ…