ಹನುಮಗಿರಿ ಬ್ರಹ್ಮಕಲಶಕ್ಕೆ ಪಂದಳ ಮಹಾರಾಜರಿಗೆ ಆಹ್ವಾನ

ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳನ್ನು(ತಿರುವಾಭರಣ) ಹೊಂದಿರುವ ಪಂದಳ ರಾಜ ಮನೆತನದ ಮಹಾರಾಜಾ ಪುಣರ್ತಂ ನಾರಾಯಣ ವರ್ಮಾ ಅವರಿಗೆ ಹನುಮಗಿರಿಯ ಬ್ರಹ್ಮಕಲಶದ ಆಹ್ವಾನವನ್ನು ಕೇರಳದ ಪಂದಳ ಅರಮನೆಯಲ್ಲಿ ಫಲ ತಾಂಬೂಲ ನೀಡಿ ಶಾಲು ಅರ್ಪಿಸಿ ಆಮಂತ್ರಣ ಪತ್ರ ನೀಡಿ ಕ್ಷೇತ್ರದ ಬ್ರಹ್ಮಕಲಶ ಪ್ತಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ ರೆಂಜ ಹಾಗೂ ಸುಬ್ಬಪ್ಪ ಪಾಟಾಳಿ ಪಟ್ಟೆ ಹನುಮಾಗಿರಿಗೆ ಆಹ್ವಾನಿಸಿದರು. ಮಕರವಿಳಕ್ಕು ಉತ್ಸವಕ್ಕೆ 3 ದಿನಗಳ ಮುನ್ನ, ಅಯ್ಯಪ್ಪನ ಆಭರಣಗಳನ್ನು ಇಲ್ಲಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ.ಅಂತಹ ಪವಿತ್ರ ಕ್ಷೇತ್ರದ…

Read More

ಹಾಡಹಗಲೇ ಬೈಕ್ ಕಳ್ಳರ ಅಟ್ಟಹಾಸ: ಪೇಟೆ ಮಧ್ಯೆಯೇ ಪಲ್ಸರ್ ಎಗರಿಸಿದ ಖದೀಮ

​ ಮಂಜೇಶ್ವರ: ಜನನಿಬಿಡ ಕುಂಬಳೆ ಪೇಟೆಯಲ್ಲಿ ಕಳ್ಳರ ಕೈಚಳಕ ಮಿತಿಮೀರಿದ್ದು, ಹೋಟೆಲ್‌ಗೆ ಊಟಕ್ಕೆ ಹೋದ ವ್ಯಕ್ತಿಯ ಬೈಕ್ ನಾಪತ್ತೆಯಾದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಂಚಿಕಟ್ಟೆ ನಿವಾಸಿ ಅಜಿತ್ ಕುಮಾರ್ ಎಂಬವರು ಕಳೆದ ಶನಿವಾರ ಮಧ್ಯಾಹ್ನ ಬಸ್ ನಿಲ್ದಾಣದ ಹಿಂಭಾಗದ ಹೋಟೆಲ್‌ವೊಂದರ ಎದುರು ತಮ್ಮ ‘ಪಲ್ಸರ್’ ಬೈಕ್ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಕೇವಲ 15 ನಿಮಿಷಗಳ ಅಂತರದಲ್ಲಿ ಹೊರಬಂದಾಗ ಬೈಕ್ ಮಾಯವಾಗಿರುವುದು ಕಂಡುಬಂದಿದೆ. ​ಬೈಕ್ ಕಳ್ಳರ ಈ ದುಸ್ಸಾಹಸ ಕುಂಬಳೆ ಪೊಲೀಸರಿಗೆ ಸವಾಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು…

Read More

ಮಂಜೇಶ್ವರ: ತ್ಯಾಜ್ಯ ಸಮಸ್ಯೆ ತೀವ್ರ – ಸಾರ್ವಜನಿಕರ ಆಕ್ರೋಶ, ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳು ತ್ಯಾಜ್ಯದ ಕೂಪಗಳಾಗಿ ಮಾರ್ಪಟ್ಟಿದ್ದು, ಇಡೀ ಪರಿಸರ ದುರ್ವಾಸನೆಯಿಂದ ನರಳುತ್ತಿದೆ. ಮಳೆಗಾಲ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ತ್ಯಾಜ್ಯ ನಿರ್ವಹಣೆಗೆ ಯಾವುದೇ ಶಾಶ್ವತ ಪರಿಹಾರ ಕಾಣದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖ ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿಗಳು ಗುಡ್ಡದಂತೆ ಜಮಾಯಿಸಿದ್ದು, ಪ್ಲಾಸ್ಟಿಕ್ ಚೀಲಗಳು, ಕೊಳೆತ ಆಹಾರ ಪದಾರ್ಥಗಳು ಮತ್ತು ಮೃತ ಪ್ರಾಣಿಗಳ ಅವಶೇಷಗಳಿಂದ ಪರಿಸರ ಅಸ್ವಚ್ಛವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ…

Read More

ವಿನೋದ್ ಥಾವ್ಡೆ ಕಾಸರಗೋಡು ಭೇಟಿ: ಚುನಾವಣಾ ಸಿದ್ಧತೆ ಪರಿಶೀಲನೆ ಬಿಜೆಪಿ ಕಚೇರಿಯಲ್ಲಿ ಭರ್ಜರಿ ಸ್ವಾಗತ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ಇಂದು ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಂದರ್ಶಿಸಿದ ಅವರನ್ನು ಜಿಲ್ಲಾಧ್ಯಕ್ಷೆ ಹಾಗೂ ಕಾಸರಗೋಡು ವಿಧಾನಸಭಾ ಕ್ಷೇತ್ರ ಎನ್. ಡಿ ಎ ಅಭ್ಯರ್ಥಿ ಅಶ್ವಿನಿ ಎಂ. ಎಲ್ ಶಾಲು ಹಾಕಿ ಸ್ವಾಗತಿಸಿದರು.ಇದೇ ಮೊದಲ ಬಾರಿಗೆ ಕಾಸರಗೋಡು ಆಗಮಿಸಿದ ಅವರು ಬಿಜೆಪಿಯ ಪ್ರತಿಷ್ಠಿತ ಕ್ಷೇತ್ರಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಸಾಧ್ಯತೆಗಳ ಅವಲೋಕನ ಮತ್ತು ಚಟುವಟಿಕೆಗಳ ಮಾಹಿತಿ…

Read More

ಸುರೇಶ್ ಗೋಪಿಗೆ ಹೈಕೋರ್ಟ್ ಶಾಕ್ ಸಂಸದ ಸ್ಥಾನ ರದ್ದು ಬೇಡಿಕೆ ಮನವಿ ಸ್ವೀಕಾರ

ಚಲನಚಿತ್ರ ನಟ, ಬಿಜೆಪಿ ನಾಯಕ, ಕೇಂದ್ರ ಸಹಸಚಿವ ಸುರೇಶ್ ಗೋಪಿ ಅವರ ತ್ರಿಶೂರಿನ ಸಂಸದ ಸ್ಥಾನವನ್ನು ಪ್ರಶ್ನಿಸಿ ಹೖಕೋರ್ಟಿಗೆ ಸಲ್ಲಿಸಲ್ಪಟ್ಟ ವಿಚಾರಣಾ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿ ಮಾನ್ಯತೆ ನೀಡಿದೆ. ತನ್ನ ಆಯ್ಕೆ ಪ್ರಶ್ನಿಸಿ ಸಲ್ಲಿಸಲ್ಪಟ್ಟ ಮನವಿ ಯನ್ನು ತಿರಸ್ಕರಿಸಬೇಕೆಂದು ವಿನಂತಿಸಿ ಸುರೇಶ್ ಗೋಪಿ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ತಿರಸ್ಕರಿಸಿ ಹೖಕೋರ್ಟು ಜಸ್ಟೀಸ್ ಕೌಸರ್ ಎಡಪ್ಪಾಗತ್ತ್ ಆದೇಶ ನೀಡಿದ್ದಾರೆ. ಇದರಿಂದಾಗಿ ಸುರೇಶ್ ಗೋಪಿ ಅವರಿಗೆ ತಿರುಗೇಟು ಉಂಟಾಗಿದೆ.ತ್ರಿಶೂರು ನಿವಾಸಿ, ಸಿಪಿಐ ನಾಯಕ ಎ. ಎಸ್. ಬಿನೋಯ್ ಅವರು ಹೖಕೋರ್ಟಿಗೆ…

Read More

ಮಂಜೇಶ್ವರ ಶಾಸಕನ ಭರವಸೆಗಳ ವಿರುದ್ಧ ಬಿಜೆಪಿ ವಾಗ್ದಾಳಿ

ಹೊಸಂಗಡಿ :ಶಾಸಕನಾಗಿ ಖಾಸಗಿ ಕಟ್ಟಡದ ಮೂರನೇ ಅಂತಸ್ತೀನಲ್ಲಿ ಇರುವ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಾಡಲಾಗದ ಮಂಜೇಶ್ವರ ಶಾಸಕರ ಭರವಸೆ ಗಳು ಹಾಸ್ಯಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಈ ಬಾರಿ ಗೆದ್ದರೆ ಮಹಿಳೆಯರಿಗೆ ಬಸ್ ಉಚಿತ ಎಂಬ ಶಾಸಕರ ಘೋಷಣೆ ವಂಚನೆಯ ಪರಮಾವಧಿ ಯಾಕೆಂದರೆ ಮಂಜೇಶ್ವರ ವಿ ಸಾ ವ್ಯಾಪ್ತಿಯಲ್ಲಿ ksrtc ಬಸ್ ಎಲ್ಲಿಯೂ ಲೋಕಲ್ ಸರ್ವಿಸ್ ನಡೆಸುವುದಿಲ್ಲ. ಕಾಸರಗೋಡು ಮಂಗಳೂರು ಅಂತರ ರಾಜ್ಯ ksrtc ಗಳಲ್ಲಿ ಉಚಿತ…

Read More

ಕಾಸರಗೋಡು: ಹವಾಲಾ ಹಣದ ಕಳ್ಳಸಾಗಣೆ ವಿರುದ್ಧ ಪೊಲೀಸರ ಕಟ್ಟೆಚ್ಚರ – 72.9 ಲಕ್ಷ ರೂ. ವಶ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಹವಾಲಾ ಹಣದ ಕಳ್ಳಸಾಗಣೆ ತೀವ್ರಗೊಳ್ಳುತ್ತಿದ್ದು, ಕಾಸರಗೋಡು ಮತ್ತು ಕುಂಬಳೆ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 72.9 ಲಕ್ಷ ರೂಪಾಯಿ ದಾಖಲೆಗಳಿಲ್ಲದೆ ವಶಪಡಿಸಿಕೊಂಡಿದ್ದಾರೆ. ಕುಂಬಳೆಯಲ್ಲಿ 61.5 ಲಕ್ಷ ರೂಪಾಯಿ ಹಾಗೂ ಕಾಸರಗೋಡು ತಾಲೂಕು ಕಚೇರಿ ಸಮೀಪದ ಸಂಚಾರ ವೃತ್ತದ ಬಳಿ 11.40 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಕುಂಬಳೆಯ ಘಟನೆಯಲ್ಲಿ ಕಪ್ಪು ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾಸರಗೋಡು ತಲಂಕರದ ಮಾಡನ್ನೂರ್ ಹೌಸ್ ನಿವಾಸಿ ಶಬೀರ್ ಬಂಧಿತನಾಗಿದ್ದಾನೆ. ಗುಪ್ತ…

Read More

ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗು ಬ್ರಹ್ಮಕಲಶೋತ್ಸವ , ನೇಮೋತ್ಸವ ಉತ್ಸವಕ್ಕೆ ಸಕಲ ಸಿದ್ಧತೆ

ಕುಂಜತ್ತೋರು ತೂಮಿನಾಡು, ಪ್ರದೇಶದಲ್ಲಿರುವ ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಸಕಲ ಸಿದ್ಧತೆಯು ನಡೆದಿದ್ದು ಏಪ್ರಿಲ್ 2ರಿಂದ 6,ರ ವರೆಗೆ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಶ್ರೀ ಕೆ. ಮರಿಭಟ್ ಅವರ ದಿವ್ಯ ಹಸ್ತದಿಂದ ವೈದಿಕ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವಪೂರ್ಣವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಏಪ್ರಿಲ್ 2 ರಂದು ಬೆಳಗ್ಗೆ ಗಣಹೋಮ , ತೋರಣ ಮುಹೂರ್ತ ,ಉಗ್ರಾಣ ಮುಹೂರ್ತ ಚಪ್ಪರ ಮುಹೂರ್ತ ಗಳೊಂದಿಗೆ ಆರಂಭವಾಗುವ ಧಾರ್ಮಿಕಗಳೊಂದಿಗೆ ಮಹೋತ್ಸವಕ್ಕೆ ಚಾಲನೆ…

Read More

​ಮಂಜೇಶ್ವರದಲ್ಲಿ ಚುನಾವಣಾ ಕಹಳೆ: ಬಿಜೆಪಿ ಪರ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅಬ್ಬರದ ಪ್ರಚಾರ

​ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಗಡಿಭಾಗದ ಪ್ರತಿಷ್ಠಿತ ಕ್ಷೇತ್ರವಾದ ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಗೆಲುವಿಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು. ​ಕ್ಷೇತ್ರದಾದ್ಯಂತ ಸಂಚರಿಸಿದ ಶಾಸಕ ವೇದವ್ಯಾಸ ಕಾಮತ್ ಅವರು, ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ…

Read More

ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೈನಡ್ಕ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಮಧೂರು ಸಮೀಪದ ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೈನಡ್ಕ ಇದರ ನೂತನ ಪಧಾದಿಕಾರಿಗಳ ಆಯ್ಕೆ ಸಭೆಯು ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ ಬೈನಡ್ಕದಲ್ಲಿ ಇತ್ತೀಚೆಗೆ ನಡೆಯಿತು . ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀ ಪುರಶೋತ್ತಮ ಕೋಟೆವಲಪ್ಪು ಆಯ್ಕೆಗೊಂಡರು . ಗೌರವ ಅಧ್ಯಕ್ಷರಾಗಿ ಶ್ರೀ ರಾಜೇಶ್ವರ ಹೊಳ್ಳ , ಹಾಗೂ ಶ್ರೀ ವೆಂಕಪ್ಪ ನಾಯಕ್ , ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಯಾದವ್ ಬೈನಡ್ಕ , ಕಾರ್ಯದರ್ಶಿ ಶ್ರೀ…

Read More
error: Content is protected !!