ಯುವತಿಯ ಮೇಲೆ ಲೈಂಗಿಕ ಕಿರುಕುಳ, ಬೆದರಿಕೆ ಆರೋಪ:ಯುವಕ ಬಂಧನ

ಮಂಜೇಶ್ವರ : ಯುವತಿಯ ಹೆಗಲಿಗೆ ಕೈಯಿಟ್ಟು ಚುಂಬಿಸಲು ಯತ್ನಿಸಿದ ಹಾಗೂ ಬೆದರಿಕೆ ಹಾಕಿದ ಆರೋಪದ ಮೇರೆಗೆ ಮಂಜೇಶ್ವರ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಕುಂಜತ್ತೂರು ಜಲಾಲಿ ಮಸೀದಿ ಸಮೀಪದ ಸಣ್ಣಡ್ಕ ಹೌಸ್ ನಿವಾಸಿ ಸುನಿಲ್ ಕುಮಾರ್ (38) ಬಂಧಿತ ಆರೋಪಿ. ಮಂಜೇಶ್ವರ ಎಸ್‌.ಐ ವೈಷ್ಣವ್ ರಾಮಚಂದ್ರನ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ. ಜನವರಿ 26ರಂದು ಕುಂಜತ್ತೂರು ಮಾಸ್ಕೋ ಹಾಲ್ ಸಮೀಪದ ಬಸ್ ನಿಲ್ದಾಣದಲ್ಲಿ ಯುವತಿಯ ಕೈ ಹಿಡಿದು ಚುಂಬಿಸಲು ಯತ್ನಿಸಿದ ಘಟನೆ ನಡೆದಿತ್ತು. ಫೆಬ್ರವರಿ 8ರಂದು ರಾತ್ರಿ…

Read More

ಐದು ವರ್ಷಗಳ ಸೇವಾ ಪಯಣಕ್ಕೆ ಕೃತಜ್ಞತೆ ಸಲ್ಲಿಸಿದ: ಕೊಳ್ನಾಡು ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷೆ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ

ಕೊಳ್ನಾಡು ಗ್ರಾಮ ಪಂಚಾಯತ್‌ನ ಅತೀ ಕಿರಿಯ ಸದಸ್ಯೆಯಾಗಿ ಹಾಗೂ ಒಂದು ಅವಧಿಯ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ತಾಳಿತ್ತನೂಜಿ–ನಾರ್ಶದ ಪ್ರಜ್ಞಾವಂತ ಮತದಾರರು, ಪಕ್ಷದ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಗ್ರಾಮದ ಎಲ್ಲಾ ಹಿತೈಷಿ ನಾಗರೀಕರಿಗೆ,ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ (ಸುಗ್ರಾಮ)ಇವರಿಗೂ ಮೊಟ್ಟ ಮೊದಲನೆಯದಾಗಿ ತುಂಬು ಹೃದಯದ ಧನ್ಯವಾದಗಳು. ತಾಳಿತ್ತನೂಜಿ–ನಾರ್ಶ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಹಾಗೂ ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯತ್‌ಗಳಲ್ಲೊಂದಾದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಜವಾಬ್ದಾರಿಯಿಂದ ಸ್ವೀಕರಿಸಿ,…

Read More

ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ‘ಚಿನ್ನು ಪಾಪು’ ಆತ್ಮಹತ್ಯೆ

ಮಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದ ಸಾಮಾಜಿಕ ಮಾಧ್ಯಮದ ಯುವ ಪ್ರಭಾವಿ ‘ಚಿನ್ನು ಪಾಪು’ ಅವರು ಸೋಮವಾರ ಕಾಸರಗೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ‘ಚಿನ್ನು ಪಾಪು’ ಎಂದು ಪರಿಚಿತರಾಗಿದ್ದ ಅವರನ್ನು ದೇಲಂಪಾಡಿ ಪಂಚಾಯತ್ ನ ಅಧೂರ್ ಮೂಲದ ರೇಷ್ಮಾ (24) ಎಂದು ಗುರುತಿಸಲಾಗಿದೆ. ಕಾಸರಗೋಡು ಪಟ್ಟಣದ ಸಮೀಪದ ಉಳಿಯತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮಧ್ಯಾಹ್ನ ವೇಳೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು…

Read More

ಸಾಹಿತಿ, ರಂಗ ಕಲಾವಿದರು, ಕನ್ನಡ ಪರ ಸೇವೆಯಲ್ಲಿ ಸದಾ ನಿರತರಾಗಿರುವ ಪಿ. ಎಸ್. ಸಾಲಿಮಠ ಬೆಂಗಳೂರು ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ “2026 ಗೆ ಆಯ್ಕೆ

ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಅಂಗವಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್ ಅರಸ್ “ವೇದಿಕೆಯಲ್ಲಿ 22.02.2026.ರಂದು, ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ…

Read More

ಯುವಕನ ಮೇಲೆ ಭೀಕರ ಹಲ್ಲೆ.ಮೂವರ ವಿರುದ್ಧ ಎಫ್‌ಐಆರ್

ಮಂಜೇಶ್ವರ : ನಯಬಜಾರ್‌ನಲ್ಲಿ ಯುವಕನನ್ನು ತಡೆದು ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಐಲ ಕಡಪ್ಪುರ ಶಿವಾಜಿನಗರ ಸಮೀಪದ ಕುದುಪುಳು ನಿವಾಸಿ ಮೊಹಮ್ಮದ್ ಹನೀಫ್ (28) ಎಂಬವರು ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಹನೀಫ್ ಅವರನ್ನು ನಯಬಜಾರ್‌ನಲ್ಲಿ ತಡೆದು ಉಪ್ಪಳ ನಿವಾಸಿಗಳಾದ ಕೌಸರ್, ಅಂಬು ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ….

Read More

ವಿದ್ಯಾರ್ಥಿಗಳಿಗೆ ಅನುಭವಾಧಾರಿತ ಕಲಿಕೆಗೆ ವೇದಿಕೆ: ಪೀಸ್ ಕ್ರಿಯೇಟಿವ್ ಕುಂಜತ್ತೂರು ಶಾಲೆಯಲ್ಲಿ ಭರ್ಜರಿ “ಪೀಸ್ ಕಾರ್ನಿವಲ್” ಮೇಳ ಫೆಬ್ರವರಿ 14ಕ್ಕೆ

ಮಂಜೇಶ್ವರ: ವಿದ್ಯಾರ್ಥಿಗಳ ಶಿಕ್ಷಣವನ್ನು ಪಠ್ಯಪುಸ್ತಕಗಳ ಮಿತಿಯಿಂದ ಹೊರತಂದು ನೈಜ ಅನುಭವಗಳ ಮೂಲಕ ಸಮೃದ್ಧಗೊಳಿಸುವ ಉದ್ದೇಶದಿಂದ ದಿನಾಂಕ 14-02-2026 ರಂದು ಪೀಸ್ ಕ್ರಿಯೇಟಿವ್ ಕುಂಜತ್ತೂರು ಶಾಲಾ ಆವರಣದಲ್ಲಿ ಬೃಹತ್ “ಪೀಸ್ ಕಾರ್ನಿವಲ್” ಮೇಳವನ್ನು ಹಮ್ಮಿಕೊಂಡಿರುವುದಾಗಿ ಸಂಬಂಧಪಟ್ಟವರು ಶಾಲಾ ಆವರಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಪ್ರಾಂಶುಪಾಲ ಅಬ್ದುಲ್ ಖಾದರ್ ಮಾಹಿತಿ ನೀಡಿದ್ದಾರೆ.ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆ ತನಕ ಸಹಸ್ರಾರು ಮಂದಿ ಭಾಗವಹಿಸುವ ನಿರೀಕ್ಷೆಯಿರುವ ಈ ಕಾರ್ನಿವಲ್ ಶಿಕ್ಷಣ, ಉದ್ಯಮ ಮತ್ತು ಮನರಂಜನೆ ಅಪರೂಪದ ಸಂಗಮವಾಗಲಿರುವುದಾಗಿ ಅವರು ಹೇಳಿದರು. ವ್ಯಾಪಾರ ವಹಿವಾಟಿನ…

Read More

ಆನೆಕಲ್ಲು ಶಾಲಾ ವಾರ್ಷಿಕೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

ಆನೆಕಲ್ಲು: ಎ.ಯು. ಪಿ. ಶಾಲೆ ಆನೆಕಲ್ಲು ಇದರ ವಾರ್ಷಿಕೋತ್ಸವ ಹಾಗೂ ಶಾಲಾ ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ ಪೆಬ್ರವರಿ 17 ಮಂಗಳವಾರ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಅಹಮ್ಮದ್ ಮಾಸ್ಟರ್ ಆನೆಕಲ್ಲು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ , “ಶಾಲಾ ವಾರ್ಷಿಕೋತ್ಸವದ ಮೂಲಕ ಮಕ್ಕಳ ಸೃಜನಾತ್ಮಕ ಚಟುವಟಿಕೆಗೆ ವೇದಿಕೆಯನ್ನು ಒದಗಿಸುವಂತಾಗುತ್ತದೆ. ಜೊತೆಗೆ ರಕ್ಷಕರ, ಹಳೆವಿಧ್ಯಾರ್ಥಿಗಳಿಗೆ ಶಾಲೆಯ ಮೇಲೆ ಒಳ್ಳೆಯ ಬಾಂಧವ್ಯವನ್ನು ಉಂಟುಮಾಡುತ್ತದೆ” ಎಂದು ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ…

Read More

ಮಧ್ಯರಾತ್ರಿ ಬೆಂಕಿ ಅವಘಡ: ಮನೆ, ವಾಹನಗಳು ಬೆಂಕಿಗೆ ಆಹುತಿ

ಶಾರ್ಟ್ ಸರ್ಕ್ಯೂಟ್‌ ನಿಂದ ಮೂರು ದ್ವಿಚಕ್ರ ವಾಹನ ಹಾಗೂ ಶೆಡ್ ಸಹಿತ ವಿವಿಧ ಸಾಮಾಗ್ರಿಗಳು ಉರಿದು ನಾಶ ಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬೊಳಂ ಪಾಡಿ ಬಳಿಯ ಕಯ್ಯಾರು ಕೆಳಗಿನ ಮನೆ ಪ್ರಕಾಶ್ ರೈ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಿನ್ನೆ ಮುಂಜಾನೆ ಪ್ರಕಾಶ್ ರೈ ಯವರು ಹೊರಗಡೆ ಹೋದಾಗ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಮನೆಯ ಬಳಿಯಲ್ಲೇ ಹೆಂಚು ಹಾಸಿದ ಶೆಡ್ಜ್ ಇದ್ದು ಇದಕ್ಕೆ ಬೆಂಕಿ ತಗಲಿ ಇದೇ ಪರಿಸರದಲ್ಲಿರಿಸ…

Read More

ವಾಕಿಂಗ್ ಟುಗೆದರ್ ಫೌಂಡೇಶನ್–ಆಸ್ಟರ್ ಮಿಮ್ಸ್ ಸಹಯೋಗದಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಶಿಬಿರ

ಉಪ್ಪಳ–ಬೇಕೂರು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ವಾಕಿಂಗ್ ಟುಗೆದರ್ ಫೌಂಡೇಶನ್, ಕಾಸರಗೋಡು ಆಸ್ಟರ್ ಮಿಮ್ಸ್‌ ಜೊತೆಗೂಡಿ ಕ್ಯಾನ್ಸರ್ ಸ್ಕ್ರೀನಿಂಗ್ ಟೆಸ್ಟ್ ಶಿಬಿರವನ್ನು ಆಯೋಜಿಸುತ್ತಿದೆ. ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಫೌಂಡೇಶನ್ ವಿಶೇಷ ಗಮನ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಮಂಜೇಶ್ವರ ಪ್ರದೇಶದ ವಿವಿಧ ಸಮಸ್ಯೆಗಳ ಕುರಿತು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ . ಇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳೊಂದಿಗೆ ಸಹಕಾರ ಮಾಡಿಕೊಂಡು ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯೂ ಇದೆ. ಫೆಬ್ರವರಿ 10ರಂದು ಮಂಗಳವಾರ ಬೇಕೂರು ಸುಭಾಷ್ ನಗರದಲ್ಲಿರುವ ಸೀ…

Read More

ತುರ್ತಿ ತರವಾಡು ಸನ್ನಿಧಿಯಲ್ಲಿ ಶ್ರೀ ವಯನಾಟ್ಟುಕುಲವನ್ ತೆಯ್ಯಂ ಕಟ್ಟು ಮಹೋತ್ಸವ ಆಮಂತ್ರಣ ಬಿಡುಗಡೆ

ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ ಪಡೆಂಕುಡಿಯ ತರವಾಡು ಸನ್ನಿಧಿಯಲ್ಲಿ ಇದೇ ಬರುವ ಏಪ್ರಿಲ್ ತಿಂಗಳ 9 10 11 12 ಎಂಬಿ ದಿನಾಂಕಗಳಲ್ಲಿ ನಡೆಯಲಿರುವ ಶ್ರೀ ವಯನಾಟುಕುಲವನ್ ತೆಯ್ಯಂ ಕಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ತರವಾಡು ಸನ್ನಿಧಿಯಲ್ಲಿ ನಡೆಯಿತು. ಶ್ರೀ ದೈವಗಳಲ್ಲಿ ಪ್ರಾರ್ಥಿಸಿದ ಬಳಿಕ ಅಡ್ಕ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ಶ್ರೀ ಕೃಷ್ಣ ಕಾರ್ ನವರು.. ಆಮಂತ್ರಣ ಪತ್ರಿಕೆಯನ್ನು ಸಮಾಜ ಸೇವ ಧುರೀಣರಾದ ಶ್ರೀ ಕೆ ಆರ್ ಜಯಾನಂದ…

Read More
error: Content is protected !!