ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚನೆ

ಮಂಜೇಶ್ವರ: ಜನರ ಅಗತ್ಯತೆಯ ಬೇಡಿಕೆಗಳು ಹಾಗೂ ಸ್ಥಳೀಯ ಅಭಿವೃದ್ಧಿ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮಂಜೇಶ್ವರ ಗ್ರಾಮ ಪಂಚಾಯತಿಯ ಅಧೀನದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ಅನ್ನು ರಚಿಸಲಾಯಿತು. ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ವರ್ಕಿಂಗ್ ಗ್ರೂಪ್ ರಚನೆಗೊಳಿಸಲಾಯಿತು. ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ–ಆರ್ಥಿಕ ಪ್ರಗತಿಗೆ ಒತ್ತು ನೀಡುವ ಸಮಗ್ರ ಯೋಜನೆಗಳನ್ನು ತಯಾರಿಸುವುದು ವರ್ಕಿಂಗ್ ಗ್ರೂಪ್‌ನ ಪ್ರಮುಖ ಜವಾಬ್ದಾರಿಗಳಾಗಿವೆ. ಜನರ ಭಾಗವಹಿಸುವಿಕೆಯಿಂದ ಯೋಜನೆಗಳನ್ನು ಜಾರಿಗೊಳಿಸುವ ರೂಪರೇಖೆಯನ್ನೂ…

Read More

ಮಾಣಿಲ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ತೌಡುಗೋಳಿ ದುರ್ಗಾದೇವಿ ಕ್ಷೇತ್ರ ಶಿಲಾನ್ಯಾಸ

ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರದೈವಗಳ ಸಾನಿಧ್ಯ ಇಲ್ಲಿ ಗುರುವಾರ ಬೆಳಿಗ್ಗೆ ಗಂಟೆ 7.45ಕ್ಕೆ. ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ಶಿಲಾನ್ಯಾಸ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದೊಂದಿಗೆ ನೆರವೇರಿತು. ಕ್ಷೇತ್ರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮಾಣಿಲ ಶ್ರೀ ಗಳು ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಕಾಲಘಟ್ಟದಲ್ಲಿ ನಾವಿರುವಾಗ ತೌಡುಗೋಳಿಯಲ್ಲಿ ನಡೆಯುತ್ತಿರುವಂತಹ ಈ ಕ್ಷೇತ್ರದ ಜೀರ್ಣೋದ್ದಾರ ಮಹತ್ವ ಪಡೆದಿದೆ….

Read More

ಬಾಡಿಗೆ ಮನೆಯಲ್ಲಿ ವಾಸ, ಕಳ್ಳತನ ಮಾಡಿ ಪರಾರಿ: ಆರೋಪಿಯ ಬಂಧನ

ಮಂಜೇಶ್ವರ: ಮಣ್ಣಂಕುಳಿಯ ಅಂಗನವಾಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಜೇಶ್ವರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಕರ್ನಾಟಕದ ಪುತ್ತೂರು ತಾಲ್ಲೂಕಿನ ನೆಲ್ಯಾಡಿ ಕೊಕ್ಕಡ ನಿವಾಸಿ ಅಶ್ರಫ್ (55) ಎಂದು ಗುರುತಿಸಲಾಗಿದೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಉಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ಈಗಾಗಲೇ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕಳ್ಳತನ ಮಾಡಿದ ವಸ್ತುಗಳನ್ನು…

Read More

ಪಟ್ಲ ಸತೀಶ್ ಶೆಟ್ಟಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ

ದೆಹಲಿ ಕರ್ನಾಟಕ ಸಂಘದಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ.ಕಲಾ ಸೇವೆಯಲ್ಲಿ ಅಪ್ರತಿಮ ಸಾಧನೆಗೈದು ಯಕ್ಷಗಾನ ಕಲೆಯ ಘನತೆಯನ್ನು ಪ್ರಪಂಚದಾದ್ಯಂತ ವಿಸ್ತರಿಸಿದ ಹಾಗೂ ತನ್ನ ವೈಯಕ್ತಿಕ ವರ್ಚಸ್ಸಿನ ಮೂಲಕ ಸಾವಿರಾರು ಕಲಾವಿದರ ಪಾಲಿಗೆ ಬೆಳಕಾದ ಪಟ್ಲರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಒಲಿದು ಬಂದಿದೆ.

Read More

ಉಪ್ಪಳ ಮಣ್ಣಂಗುಳಿ ಅಂಗನವಾಡಿಯಲ್ಲಿ ಕಳ್ಳತನ: ಬೀಗ ಮುರಿದು ಮಿಕ್ಸಿ–ಪಾತ್ರೆ ಕಳವು

ಕಾಸರಗೋಡು: ಉಪ್ಪಳ ಮಣ್ಣಂಗುಳಿ ಅಂಗನವಾಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಮಿಕ್ಸಿ ಹಾಗೂ ವಿವಿಧ ಪಾತ್ರೆಗಳನ್ನು ಕಳವು ಮಾಡಿದ್ದಾರೆ. ಮಂಗಳವಾರ ಸಂಜೆ 3.30ರ ವೇಳೆಗೆ ಅಂಗನವಾಡಿಯನ್ನು ಮುಚ್ಚಿ ಹೋಗಲಾಗಿತ್ತು. ಬುಧವಾರ ಬೆಳಿಗ್ಗೆ 9.30ಕ್ಕೆ ಅಂಗನವಾಡಿ ತೆರೆಯಲು ಬಂದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಶಿಕ್ಷಕಿ ಭಾಗೀರಥಿ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಪ್ರಕಾರ, ಒಂದು ಮಿಕ್ಸಿ, ಮೂರು ಜಾರ್‌ಗಳು, ಎರಡು ಕುಕ್ಕರ್‌ಗಳು,…

Read More

ಕನ್ನಡ ಭವನ ಕರ್ನಾಟಕ ರಾಜ್ಯ ಸಂಚಾಲಕರಾದ ಪತ್ರಕರ್ತ, ಸಾಹಿತಿ, ಸಂಘಟಕ ಶ್ರೀ ಸಿ. ವೈ. ಮೆಣಸಿನಕಾಯಿ ಇವರೀಗೆ “ಕವಿ ಕಾವ್ಯ ವಿಭೂಷಣ “ಪ್ರಶಸ್ತಿ “2026.

ಕಾಸರಗೋಡು: ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ 22.02.2026.ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್. ಅರಸ್ “ವೇದಿಕೆಯಲ್ಲಿ ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಶ್ರೀಮದ್ ಎಡನೀರ್ ಶ್ರೀಗಳ ಹಾಗೂ ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿ, ಗೋವಿನಾಳ ಇವರ ದಿವ್ಯ…

Read More

ರಾತ್ರಿ 10 ಬಳಿಕ ಧ್ವನಿವರ್ಧಕ ಬಳಸಿದರೆ ಕಠಿಣ ಕ್ರಮ: ಪೊಲೀಸರಿಂದ ಎಚ್ಚರಿಕೆ

ಮಂಜೇಶ್ವರ: ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸುವ ಸಮಾರಂಭಗಳು ಮತ್ತು ಕಾರ್ಯಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಜಾರಿಯಲ್ಲಿದ್ದ ನಿಯಮ ಪಾಲನೆಯಾಗದ ಹಿನ್ನೆಲೆಯಲ್ಲಿ, ಅತಿಯಾದ ಶಬ್ದದಿಂದ ಸಾರ್ವಜನಿಕರಿಗೆ ಕಿರಿಕಿರಿ ಹೆಚ್ಚಿದಂತೆ ದೂರುಗಳು ಹೆಚ್ಚಾಗಿವೆ. ಈ ಹಿನ್ನೆಲೆ ಎಲ್ಲಾ ಪೊಲೀಸ್ ಠಾಣೆಗಳಿಗೆ ರಾತ್ರಿ 10 ನಂತರ ಧ್ವನಿವರ್ಧಕ ಬಳಕೆಯಾದಲ್ಲಿ ಅದನ್ನು ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ರಾತ್ರಿ ಗಸ್ತು ಬಿಗುಗೊಳಿಸಲಾಗಿದ್ದು, ದೂರು ಬಂದರೆ ಅಥವಾ ನೇರವಾಗಿ ಪತ್ತೆಯಾದರೆ…

Read More

ಬಂಗ್ರಮಂಜೇಶ್ವರದಲ್ಲಿ ‘ವಿಶ್ವ ರೂಪಂ’ ಯುವಜನೋತ್ಸವದ ಮಹಾಸಮಾರೋಪ ಸಂಪನ್ನ

ಬಂಗ್ರಮಂಜೇಶ್ವರ: ಇಲ್ಲಿನ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ, ಓಜ ಸಾಹಿತ್ಯ ಕೂಟದ ನೇತೃತ್ವದಲ್ಲಿ ಕಳೆದ 12 ವಾರಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ “ವಿಶ್ವ ರೂಪಂ’ ಯುವಜನ ಓಜಸ್ವರೂಪಂ – ಸೀಸನ್ 2.0 (2025–26) ರ ಭವ್ಯ ಸಮಾರೋಪ ಸಮಾರಂಭವು ಫೆಬ್ರವರಿ 1, 2026ರಂದು ವಿಜೃಂಭಣೆಯಿಂದ ಜರುಗಿತು. ಈ ಭವ್ಯ ಸಮಾರೋಪ ಸಮಾರಂಭವು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದೊಂದಿಗೆ ಸಂಪನ್ನಗೊಂಡಿತು. ಪೂಜ್ಯ…

Read More

ಮೇರು ಕವಯತ್ರಿ ಲತಾ ಧನು ಸೀತಾಂಗೋಳಿ ಯವರೀಗೆ “ಚುಟುಕು ಸಿರಿ ರತ್ನ “ಪ್ರಶಸ್ತಿ.

ಮೇರು ಕವಯತ್ರಿ ಲತಾ ಧನು ಸೀತಾಂಗೋಳಿ ಇವರೀಗೆ, ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ “ಚುಟುಕು ಯುಗಾಚಾರ್ಯ ಎಂ. ಜಿ. ಆರ್. ಅರಸ್ ” ಭವ್ಯ ಸಮ್ಮೇಳನ ವೇದಿಕೆಯಲ್ಲಿ “ಚುಟುಕು ಸಿರಿ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಪರಿಷತ್ತು ಸಂಸ್ಥಾಪಕರಾದ ಡಾ….

Read More

ಪ್ರಯಾಣಿಕರಿಗೆ ರಿಲೀಫ್: ಕಾಸರಗೋಡು–ಮಂಗಳೂರು ಮಾರ್ಗದ ಟೋಲ್ ರದ್ದು, ಬಸ್ ದರ ಹಿಂಪಡೆ

ಮಂಜೇಶ್ವರ: ಕ್ರಿಯಾ ಸಮಿತಿಯ ಹೋರಾಟಕ್ಕೆ ಮಣಿದು ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಕಾಸರಗೋಡು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತವಾಗಿ ಜಾರಿಯಲ್ಲಿದ್ದ ಟೋಲ್ ವಸೂಲಾತಿಯನ್ನು ಕೇಂದ್ರ ಹೆದ್ದಾರಿ ಇಲಾಖೆ ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರ ಪರಿಣಾಮ, ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇತ್ತೀಚೆಗೆ ಜಾರಿಗೊಳಿಸಿದ್ದ ಟಿಕೆಟ್ ದರ ಏರಿಕೆ ಹಿಂಪಡೆಯಲಾಗಿದೆ. ಈ ಕುರಿತು ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ವಿಭಾಗ ಅಧಿಕೃತ ಪ್ರಕಟಣೆ ಹೊರಡಿಸಿದೆ. ಟೋಲ್ ಗೇಟ್ ಆರಂಭವಾದಂದಿನಿಂದ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಸಾರಿಗೆ ಸಂಘಟನೆಗಳು ಹಾಗೂ ಸಾರ್ವಜನಿಕರು…

Read More
error: Content is protected !!