ಮಂಗಲ್ಪಾಡಿ: ಕುಕ್ಕರ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್

ಮಂಗಲ್ಪಾಡಿ: ಮಂಗಲ್ಪಾಡಿಯ ಕುಕ್ಕರ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ರ್ಯಾಗಿಂಗ್ ನಡೆಸಿ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.ಮಧ್ಯಾಹ್ನದ ಊಟ ಸೇವಿಸುವ ವೇಳೆ ವಿದ್ಯಾರ್ಥಿ ಮಹಮ್ಮದ್ ಬಿಷ್ರಾನ್ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಕಣ್ಣಿಗೆ ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Read More

ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಮಂಜೇಶ್ವರ …! : ಮಗಳ ಹತ್ಯೆ ತಡೆಯಲು ಹೋದ ಚಿಕ್ಕಪ್ಪನ ಪ್ರಾಣ ಹಾರಿತು ….?

ಕಾಸರಗೋಡು:ಮಂಜೇಶ್ವರ ತಾಲೂಕಿನ ತೂಮಿನಾಡು ಪ್ರದೇಶದಲ್ಲಿ ನಡೆದ ಭೀಕರ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹದಿಹರೆಯದ ಮಗಳನ್ನು ಚಾಕುವಿನಿಂದ ಕೊಂದಿದ್ದು, ಆ ದಾಳಿಯನ್ನು ತಡೆಯಲು ಯತ್ನಿಸಿದ ಚಿಕ್ಕಪ್ಪನೂ ಗಂಭೀರ ಗಾಯಗಳಿಂದ ಇದೀಗ ಮೃತಪಟ್ಟಿದ್ದಾರೆ. ಇದರಿಂದ ಪ್ರಕರಣ ಜೋಡಿ ಕೊಲೆಯಾಗಿ ಮಾರ್ಪಟ್ಟಿದೆ. ಸೋಮವಾರ ಸಂಜೆ ನಡೆದ ಈ ಘಟನೆಯಲ್ಲಿ, ಉಮ್ಮರ್ ಫಾರೂಕ್ ಎಂಬವರು ತಮ್ಮ ಪುತ್ರಿ ಕೆ.ಯು. ಮರಿಯಮತ್ ಜುಮೈಲಾ (18) ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ವೇಳೆ ದಾಳಿಯನ್ನು ತಡೆಯಲು ಮುಂದಾದ ಷೇಕುಂಞ (50) ಎಂಬವರು…

Read More

ಎಸ್.ಆರ್. ಎಫ್.ಸಿ ಪಲ್ಲೇದಪಡ್ಪು ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಕೂಟ.

ಪಲ್ಲೇದಪಡ್ಪು: ಗ್ರಾಮೀಣ ಪ್ರದೇಶದ ಯುವಕರನ್ನು ಒಟ್ಟುಸೇರಿಕೊಂಡು ಕ್ರೀಡಾಸಕ್ತರ ಅಂಡರ್ ಆರ್ಮ್ ಪಿ ಪಿ ಎಲ್ ಕ್ರಿಕೆಟ್ ಪಂದ್ಯಕೂಟ ವರ್ಕಾಡಿ ಪಂಚಾಯತ್ ಮೈದಾನ ಸುಂಕದಕಟ್ಟೆಯಲ್ಲಿ ಜರಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಯುವ ಉದ್ಯಮಿ ಕಾರ್ತಿಕ್ ಎಂಟರ್ಪ್ರೈಸಸ್ ಮಾಲಕ ಪ್ರಕಾಶ್ ಪೊಯ್ಯತ್ತಬೈಲ್ ನೆರವೇರಿಸಿದರು. ಕ್ಲಬ್ ನ ಅಧ್ಯಕ್ಷರಾದ ವಜ್ರೇಶ್ ಕಣಿಯೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ಭಜನಾ ಮಂಡಳಿ ಪಲ್ಲೇದಪಡ್ಪು ಇದರ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ,ಗೋಪಾಲ ಶೆಟ್ಟಿ ಬಗಂಬಿಲ,ರಮೇಶ್ ಆಚಾರ್ಯ,ರಾಜೇಶ್ ಪರಂದಳ,ಸುರೇಶ್,ಮನೋಜ್ ಶೆಟ್ಟಿ,ಚಂದ್ರ ಶೇಖರ ಪಜ್ವ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ಜರಗಿದ…

Read More

ಮಧೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಶ್ಯಾನುಭೋಗ ಅವರಿಗೆ ಸನ್ಮಾನ

ಮಧೂರು: ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಶ್ಯಾನುಭೋಗ್ ಅವರಿಗೆ ಮಧೂರು ಸಮೀಪದ ಬೈನಡ್ಕದ ಯುವ ಶಕ್ತಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬೈನಡ್ಕದಲ್ಲಿರುವ ಯುವ ಶಕ್ತಿ ಕ್ಲಬ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಶಕ್ತಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಚಂದ್ರ ಪಾಟಾಳಿ, ಗೌರವ ಅಧ್ಯಕ್ಷರಾದ ಶ್ರೀ ರಾಜೇಶ್ ಹೊಳ್ಳ, ಸಂಯೋಜಕರಾದ ಶ್ರೀ ಅಖಿಲೇಶ್,…

Read More

ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ಸ್ವಾಗತ ಸಮಿತಿ ರೂಪೀಕರಣಕನ್ನಡ ತಾಯಿಯ ನಿಸ್ವಾರ್ಥ ಸೇವೆಗೆ ಸಂಪೂರ್ಣವಾಗಿ ಸಹಕರಿಸಿ -ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ

ನುಳ್ಳಿಪ್ಪಾಡಿ: ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಿಂದ ಸ್ಥಾಪಿತವಾಗಿ ಕಾಸರಗೋಡು ಜಿಲ್ಲೆಯಲ್ಲದೆ ಕರ್ನಾಟಕದ ದ.ಕ ಜಿಲ್ಲೆ, ಕೊಡಗು, ಮೈಸೂರು, ಕೋಲಾರ, ಗದಗ, ಚಿತ್ರದುರ್ಗ, ಕೊಪ್ಪಳ, ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಮಿತಿ ಕಾಸರಗೋಡು ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಇದೇ ಬರುವ 22.02.2026 ಭಾನುವಾರದಂದು ಕನ್ನಡ ಭವನದ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ ನಡೆಯುವ “ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ರ ಸ್ವಾಗತ…

Read More

ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಲಾರಿ–ಬಸ್‌ನಿಂದ ಬ್ಯಾಟರಿ, ಡೀಸೆಲ್ ಕಳವು

ಮಂಜೇಶ್ವರ: ರಿಪೇರಿ ಉದ್ದೇಶಕ್ಕಾಗಿ ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಭಾರತ್ ಬೆನ್ಸ್ ಲಾರಿಗಳಿಂದ ನಾಲ್ಕು ಬ್ಯಾಟರಿಗಳು ಹಾಗೂ ಮಹಾಲಕ್ಷ್ಮಿ ಬಸ್‌ನಿಂದ ಡೀಸೆಲ್ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕುಂಬಳೆ ಪೆರ್ವಾಡ್‌ನಲ್ಲಿರುವ ಎಸ್‌ಜಿ ಆಟೋ ವರ್ಕ್‌ಶಾಪ್‌ನ ಹಿಂಭಾಗದಲ್ಲಿ ಲಾರಿಗಳು ಮತ್ತು ಬಸ್ ಅನ್ನು ನಿಲ್ಲಿಸಲಾಗಿತ್ತು. ಮೊನ್ನೆ ರಾತ್ರಿ ಕಳ್ಳರು ಈ ವಾಹನಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಿಗ್ಗೆ ವಾಹನಗಳನ್ನು ಪರಿಶೀಲಿಸಿದ ವೇಳೆ ಬ್ಯಾಟರಿಗಳು ಹಾಗೂ ಡೀಸೆಲ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬ್ಯಾಟರಿ ಕಳವಿನಿಂದ ಸುಮಾರು ಒಂದು…

Read More

ಎಂಡಿಎಂಎ–ಗಾಂಜಾ ವಶ, ಮೂವರು ಬಂಧನ

ಮಂಜೇಶ್ವರ : ಜಿಲ್ಲೆಯಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಂಗಲ್ಪಾಡಿ ಸೋಂಕಾಲ್‌ನಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಣಿ ಯಾನೆ ಇರ್ಷಾದ್ (34) ಎಂಬಾತನನ್ನು ಬಂಧಿಸಲಾಗಿದೆ. ಇದೇ ರೀತಿ ಬೇಕಲ ಪೊಲೀಸರು ಕೋಟಿಕುಳಂ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1.894 ಕಿಲೋಗ್ರಾಂ ಗಾಂಜಾ ವಶಪಡಿಸಿಕೊಂಡು,…

Read More

ಉದ್ಯಾವರ ಅಲ್ ಸಖಾಫ್ ಶಾಲೆಯ 27ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ಸಂಪನ್ನ

ಮಂಜೇಶ್ವರ : 1998 ರಲ್ಲಿ ಉದ್ಯಾವರ ಸಾವಿರ ಜಮಾಹತಿನ ಅಧೀನದಲ್ಲಿ ಆರಂಭಗೊಂಡು ಗಡಿ ಪ್ರದೇಶದ ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲೇ ಎಲ್ಲರ ಗಮನ ಸೆಳೆದಿರುವ ಉದ್ಯಾವರ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26 ನೇ ಅಧ್ಯಯನ ವರ್ಷದ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ ಹಾಗೂ ಸಡಗರದೊಂದಿಗೆ ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಎಲ್ಲಾ ವರ್ಷಕ್ಕಿಂತಲೂ ಭಿನ್ನವಾಗಿ ಈ ವರ್ಷ ಕೂಡಾ ಕೂಡಾ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸ್ಮರಣೀಯ…

Read More

ಎಲ್‌ಡಿಎಫ್ ಉತ್ತರ ವಲಯ ಜಾಥಾಗೆ ಕುಂಬಳೆಯಿಂದ ಚಾಲನೆ; ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ:

ಕಾಸರಗೋಡು: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಸಾರಥ್ಯದಲ್ಲಿ ನಡೆಯುವ ಎಲ್‌ಡಿಎಫ್ ಉತ್ತರ ವಲಯ ಜಾಥೆಗೆ ತುಳುನಾಡಿನ ನೆಲ ಕುಂಬಳೆಯಿಂದ ಆದಿತ್ಯವಾರ ಚಾಲನೆ ದೊರಕಿತು. ಜಾಥಾ ನಾಯಕ ಎಂ.ವಿ. ಗೋವಿಂದನ್ ಅವರಿಗೆ ಕೇರಳಾಭಿವೃದ್ಧಿಯ ಮಿನಿಯೇಚರ್ ನೀಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಾಥಾವನ್ನು ಉದ್ಘಾಟಿಸಿದರು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ಹತ್ತು ವರ್ಷಗಳ ಎಡರಂಗ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕೇಂದ್ರ ಸರ್ಕಾರ ಕೇರಳದ ವಿರುದ್ಧ ತೋರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕೇರಳವನ್ನು…

Read More

ಹಕ್ಕುಗಳ ಘೋಷಣೆ ಯಾತ್ರೆ ಮುಕ್ತಾಯ-ಏಕತೆ ಮತ್ತು ರಾಜಕೀಯ ಅಧಿಕಾರ ಈ ಹೊತ್ತಿನ ಅಗತ್ಯಃ ತೀಯಾ ವೆಲ್ಫೇರ್ ಸೊಸೈಟಿ:

ತಿರುವನಂತಪುರಂಃ ತೀಯಾ ಸಮುದಾಯದ ಏಕತೆ ಮತ್ತು ರಾಜಕೀಯ ಬಲವು ಇಂದಿನ ಅಗತ್ಯವಾಗಿದೆ.ತೀಯಾ ಸಮುದಾಯದ ಹಕ್ಕುಗಳನ್ನು ಪುನರ್ಸ್ಥಾಪಿಸಲು ಮತ್ತು ಸಾಮಾಜಿಕ-ರಾಜಕೀಯ ಜಾಗೃತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿ ತೀಯಾ ವೆಲ್ಫೇರ್ ಸೊಸೈಟಿ ಆಯೋಜಿಸಿದ್ದ ಹಕ್ಕುಗಳ ಘೋಷಣೆ ಯಾತ್ರೆಯು ತ್ರಿಕ್ಕರಿಪ್ಪೂರಿನಲ್ಲಿ ಮುಕ್ತಾಯಗೊಂಡಿತು. ಜನವರಿ 25ರಂದು ಕುಂಬಳೆ ಶ್ರೀ ಸದ್ಗುರು ನಿತ್ಯಾನಂದ ಮಠದಿಂದ ಪ್ರಾರಂಭವಾದ ಯಾತ್ರೆಯನ್ನು ತೀಯಾ ಕ್ಷೇಮಾ ಸಭೆಯ ರಾಜ್ಯ ಅಧ್ಯಕ್ಷ ರವಿ ಕುಲಂಗರ ಅವರ ನೇತೃತ್ವದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಶನ್ನ ಅಧ್ಯಕ್ಷ ಗಣೇಶ್ ಪಾವೂರ್ ಉದ್ಘಾಟಿಸಿದ್ದರು. ಜಿಲ್ಲೆಯ ವಿವಿಧ ಕ್ಷೇತ್ರಗಳ…

Read More
error: Content is protected !!