ದೇವಾಲಯದ ಕಾಣಿಕೆ ಹುಂಡಿ ಕಳವು ಯತ್ನ: ಆರೋಪಿ ವಶಕ್ಕೆ
ಕಾಸರಗೋಡು : ಮುಳ್ಳೇರಿಯ ಸಮೀಪದ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾಣಿಕೆ ಹುಂಡಿ ಕಳವು ಯತ್ನ ಹಾಗೂ ಕೃಷಿಕರೊಬ್ಬರ ರಬ್ಬರ್ ಶೀಟ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದಕ್ಕ ನಿವಾಸಿ ಸತೀಶ್ (26) ಎಂಬಾತನನ್ನು ಆದೂರು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಇತ್ತೀಚೆಗೆ ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ದೇವಾಲಯವೊಂದರಲ್ಲಿ ನಡೆದ ಕಳವು ಪ್ರಕರಣದಲ್ಲಿ ಸತೀಶನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಈತನ ಹಳೆಯ ಕೃತ್ಯಗಳು ಬೆಳಕಿಗೆ ಬಂದಿವೆ. ಆಗಸ್ಟ್ 24ರಂದು ನೆಟ್ಟಣಿಗೆ ಕ್ಷೇತ್ರದ ಎರಡು ಕಾಣಿಕೆ ಹುಂಡಿಗಳನ್ನು ಕದ್ದು, ಅವುಗಳನ್ನು ಒಡೆಯಲು ಸಾಧ್ಯವಾಗದೆ…
