ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಮತ್ತೋರ್ವ ಪ್ರಮುಖ ಆರೋಪಿಗೆ ಮಧ್ಯಂತರ ಜಾಮೀನು
ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಝಾಕೀರ್ ಸವಣೂರು (35) ಜಾಮೀನು ಪಡೆದ ಆರೋಪಿಯಾಗಿದ್ದು, ಪ್ರಕರಣದ 18ನೇ ಆರೋಪಿಯಾಗಿ ಗುರುತಿಸಲಾಗಿದ್ದಾನೆ. ಪ್ರವೀಣ್ ನೆಟ್ಟಾರ್ ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಈತನೂ ಒಬ್ಬನಾಗಿದ್ದಾನೆ. ಪ್ರಕರಣದ ತನಿಖೆ ಆರಂಭವಾದ ಸಂದರ್ಭದಲ್ಲೇ ಬಂಧಿಸಲ್ಪಟ್ಟ ಪ್ರಮುಖ ಶಂಕಿತರಲ್ಲಿ ಝಾಕೀರ್ ಸವಣೂರು ಕೂಡ ಸೇರಿದ್ದ. 2022ರ ಜುಲೈ 28ರಂದು ಬೆಳ್ಳಾರೆಯ ಶಫೀಕ್ ಜೊತೆ…