ಸಂಸ್ಕಾರಯುತ ಹಿಂದೂ ಸಮಾಜವನ್ನು ಕಟ್ಟಲು ಗಣೇಶೋತ್ಸವ ಪ್ರೇರಣೆ-ಬಂಟ್ಸ್ ಹಾಸ್ಟೇಲ್: ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ
ಮಂಗಳೂರು: ಸಂಸ್ಕಾರಯುತ ಹಿಂದೂ ಸಮಾಜವನ್ನು ಒಟ್ಟು ಮಾಡಲು ಗಣೇಶೋತ್ಸವ ಪ್ರೇರಣೆಯಾಗಿದೆ. ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆಯುವ ಶ್ರೀ ಗಣೇಶೋತ್ಸವ ಶಿಸ್ತುಬದ್ದವಾಗಿ ನಡೆಯುತ್ತಿದ್ದು, ಎಲ್ಲರಿಗೂ ಮಾದರಿಯಾಗಿದೆ. ಶಾಸಕನಾಗಿ ನಾನು ಬಂಟ ಸಮಾಜದೊಟ್ಟಿಗೆ ಯಾವತ್ತೂ ನಾನಿದ್ದೇನೆ. ನನಗೆ ಬಂಟ ಸಮಾಜದ ಋಣ ಇದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನುಡಿದರು. ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆದ…
