ಮಳೆಯ ಹಾನಿ ಪ್ರದೇಶಗಳಿಗೆ ಸಚಿವ ಯು.ಟಿ. ಖಾದರ್ ಭೇಟಿ; ಪರಿಹಾರಕ್ಕೆ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಆಗಸ್ಟ್ 1 ರಂದು ಸುರಿದ ಭಾರೀ ಮಳೆಗೆ ಹಲವೆಡೆ ಸಂಪರ್ಕ ಕಡಿತ, ಗುಡ್ಡ ಜರಿತ, ತೋಟ ಮತ್ತು ಮನೆಗಳು ಜಲಾವೃತಗೊಂಡು ವ್ಯಾಪಕ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಅವರು ಇಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಯಿಲ ಭಾಗದಲ್ಲಿ ಸಂಪರ್ಕ ಕಡಿತಗೊಂಡಿರುವ ರಸ್ತೆಗಳು ಮತ್ತು ಗುಡ್ಡ ಕುಸಿತದ ಸಾಧ್ಯತೆ…

Read More

ತಲಪಾಡಿ: ಮರಿಯಾಶ್ರಮ ಚರ್ಚ್ ಪರಿಸರದಲ್ಲಿ ಗುಡ್ಡೆ ಕುಸಿತ ಭೀತಿ; ಅಪಾಯದಂಚಿನಲ್ಲಿ 10 ಕುಟುಂಬಗಳು ಮತ್ತು ವಾಟರ್ ಟ್ಯಾಂಕ್

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್‌ನ ತಲಪಾಡಿ ಮರಿಯಾಶ್ರಮ ಚರ್ಚ್ ಪರಿಸರದಲ್ಲಿ ಅನಧಿಕೃತವಾಗಿ ಗುಡ್ಡೆ ಅಗೆದ ಪರಿಣಾಮ ಬೃಹತ್ ಗುಡ್ಡ ಜರಿದಿದ್ದು, ಸುತ್ತಮುತ್ತಲಿನ ಸುಮಾರು 10 ಕುಟುಂಬಗಳು ತೀವ್ರ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ಕೂಡ ಕುಸಿದು ಬೀಳುವ ಅಪಾಯದಲ್ಲಿದೆ. ಯಾವುದೇ ಅನುಮತಿಯಿಲ್ಲದೆ ನಡೆಸಿದ ಅವೈಜ್ಞಾನಿಕ ಗುಡ್ಡೆ ಅಗೆತವೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ.​ ಗುಡ್ಡ ಜರಿತದಿಂದ ಮೇಲ್ಭಾಗದಲ್ಲಿ ವಾಸಿಸುತ್ತಿರುವ ಸುಮಾರು 10 ಕುಟುಂಬಗಳ ಮನೆಗಳಿಗೆ…

Read More

ಯೋಜನಾ ನಿಧಿ ಕಡಿತ ವಿರೋಧಿಸಿ ಮೀಂಜ ಪಂಚಾಯತ್ ಕಚೇರಿಗೆ ಮಾರ್ಚ್ ಎಡರಂಗದಿಂದ ಪ್ರತಿಭಟನಾ ಮೆರವಣಿಗೆ

ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿಧಿ ಕಡಿತ, ಸ್ತ್ರೀ ಸುರಕ್ಷಾ ಪಿಂಚಣಿ ರದ್ದು, ಲೈಫ್ ಭವನ ಯೋಜನೆಯನ್ನು ದುರ್ಬಲಗೊಳಿಸಿರುವುದು ಹಾಗೂ ಉದ್ಯೋಗ ಖಾತರಿ ಯೋಜನೆಯ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಮೀಂಜ ಪಂಚಾಯತ್ ಕಚೇರಿಗೆ ಎಡರಂಗದ ನೇತೃತ್ವದಲ್ಲಿ ಪ್ರತಿಭಟನಾ ಮಾರ್ಚ್ ನಡೆಯಿತು.ಪ್ರತಿಭಟನೆಯನ್ನು ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಕಮಲಾಕ್ಷ ದೇರಂಬಳ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಏರಿಯಾ ಸಮಿತಿ ಸದಸ್ಯ ಹಾಗೂ ಪೈವಳಿಕೆ ಪಂಚಾಯತ್ ಸದಸ್ಯ ಹಾರಿಸ್ ಪೈವಳಿಕೆ, ಸಿಪಿಐ ಮುಖಂಡ ಮುಸ್ತಫಾ ಕಡಂಬಾರ್ ಪ್ರತಿಭಟನೆಯನ್ನು ಉದ್ದೇಶಿಸಿ…

Read More

ಮಂಗಳೂರಿನಲ್ಲಿ ರ್‍ಯಾಗಿಂಗ್ ಶಂಕೆ: ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಮಂಗಳೂರು, ಆ. 5: ನಗರದ ಕಾಲೇಜೊಂದರ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ರ್‍ಯಾಗಿಂಗ್ ಪ್ರಕರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರದ ಗುಜ್ಜರಕೆರೆಯ ಚಹಾ ಅಂಗಡಿಯ ಸಮೀಪ ಈ ಘಟನೆ ನಡೆದಿದ್ದು, ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಅದೇ ಕಾಲೇಜಿನ ದ್ವಿತೀಯ ವರ್ಷದ ನಾಲ್ಕರಿಂದ ಆರು ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೇಲ್ನೋಟಕ್ಕೆ ಇದು…

Read More

ಭಾರೀ ಮಳೆಗೆ ಮತ್ತೆ ಕೆತ್ತಿಕಲ್ ಗುಡ್ಡ ಕುಸಿತ; ಹೆದ್ದಾರಿ ಸಂಚಾರಕ್ಕೆ ಭೀತಿ

ಮಂಗಳೂರು :ಭಾರೀ ಮಳೆಗೆ ಮತ್ತೆ ಕೆತ್ತಿಕಲ್ ಗುಡ್ಡ ಕುಸಿಯತೊಡಗಿದೆ. ಕೇರಳದಲ್ಲಿ ಸಂಭವಿಸಿದಂತಹ ಬೃಹತ್ ಭೂಕುಸಿತ ಇಲ್ಲಿಯೂ ಸಂಭವಿಸಬಹುದೆಂಬ ಆತಂಕ ಗುಡ್ಡದ ಕೆಳಗೆ ವಾಸಿಸುತ್ತಿರುವವರಲ್ಲಿ ಉಂಟಾಗಿದೆ. ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ-169ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿಯಲಾರಂಭಿಸಿದೆ. ಇದು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ತಿರುವೈಲು ಸರ್ಕಾರಿ ಶಾಲೆಯ ಸಮೀಪವಿರುವ ಕೆತ್ತಿಕಲ್‌ ಗುಡ್ಡದಿಂದ ಮಣ್ಣು ಹಾಗೂ ಬೃಹತ್ ಬಂಡೆಕಲ್ಲುಗಳು ಹೆದ್ದಾರಿಯತ್ತ ಜಾರಲಾರಂಭಿಸಿವೆ. ಕಳೆದ ಹಲವು…

Read More

ಜಂತರ್ ಮಂತರ್ ಪ್ರತಿಭಟನೆ ವಿವಾದ: ಎಂ.ಜಿ. ಹೆಗ್ಡೆ ಬಿಜೆಪಿ ವಿರುದ್ಧ ವಾಗ್ದಾಳಿ

ಮಂಗಳೂರು:ಜಂತರ್ ಮಂತರ್ ಪ್ರತಿಭಟನೆಗೆ ವಿದೇಶಿ ಫಂಡ್ ಬಂದಿರುವುದಾಗಿ ಆರೋಪ ಮಾಡಲಾಗುತ್ತಿದೆ.ಫಂಡ್ ಬರುವವರೆಗೂ ಅಮಿತ್ ಶಾ , ಜೇಮ್ಸ್ ಬಾಂಡ್ ಅಜಿತ್ ಧೋವಲ್ ಕಡ್ಲೆ ಕಾಯಿ ತಿನ್ನುತ್ತಿದ್ರ ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ ಲೇವಡಿ ಮಾಡಿದ್ದಾರೆ.ಇವರ ಇಂಟೆಲಿಜೆನ್ಸ್ ಏಜನ್ಸಿ ಕತ್ತೆಯನ್ನ ಕಾಯುತ್ತ ಇತ್ತ ಎಂದು ಪ್ರಶ್ನಿಸಿದ ಅವರು ವಿದೇಶಿ ಫಂಡ್ ಆರ್ ಎಸ್.ಎಸ್.ಗೆ ಬರುತ್ತಾ ಇದೆ ಎಂದು ಆರೋಪಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನೇರವಾಗಿ…

Read More

ಗದಗದಲ್ಲಿ ಬೀದಿ ನಾಯಿಗಳ ದಾಳಿ: ಬಾಲಕಿಯ ತಲೆಗೆ ಗಂಭೀರ ಗಾಯ

ಗದಗ:ಬೀದಿ ನಾಯಿಗಳು ದಾಳಿ‌ಮಾಡಿದ ಪರಿಣಾಮ ಮಗುವಿನ ತಲೆಗೆ ಗಂಭೀರ ಗಾಯವಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಡಣದ ವಾರ್ಡ ನಂ. 5ರ ಮಕಾನ ಓಣಿಯಲ್ಲಿ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿವೆ. ಚಿಪ್ಸ್ ತರಲು ಅಂಗಡಿಗೆ ತೆರಳುತ್ತಿದ್ದ ಬಾಲಕಿ ರಾಹಾ ಗಾಡಿವಾಲೆಯ ಮೇಲೆ ಬೀದಿ ನಾಯಿಗಳು ಏಕಾ ಏಕಿ ಕಚ್ಚಿವೆ.ಇದರಿಂದ ಮಗುವಿನ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದಾರೆ.ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ…

Read More

ದಕ್ಷಿಣ ಕನ್ನಡ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಸಂಘದಿಂದ ಕಾವೂರು ಸರ್ಕಲ್ನಲ್ಲಿ ಪ್ರತಿಭಟನೆ

ಮಂಗಳೂರು :ದಕ್ಷಿಣ ಕನ್ನಡ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಸಂಘದಿಂದ ಕಾವೂರು ಸರ್ಕಲ್ನಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರ ಅವೈಜ್ಞಾನಿಕ ಕ್ರಮಗಳನ್ನು ಹೇರುವ ಮೂಲಕ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸ್ವಾಭಿಮಾನದ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಸುಮಾರು 57 ವರ್ಷಗಳಿಂದ ನಮ್ಮ ಅಸೋಸಿಯೇಶನ್ ಹಲವಾರು ಬೇಡಿಕೆಗಳ ಬಗ್ಗೆಸಂಬಂಧಪಟ್ಟವರಿಗೆ ಅಹವಾಲು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು. ಪ್ರಸ್ತುತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳ ಮೇಲೆ ಅವೈಜ್ಞಾನಿಕ ಪಾರ್ಕಿಂಗ್ ದರಗಳನ್ನು ಹೇರಲಾಗುತ್ತಿದೆ, ಇದುದುಡಿಮೆಯ ಮೇಲೆ ನಕಾರಾತ್ಮಕ…

Read More

ರ್‍ಯಾಗಿಂಗ್ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು: ಶಾಸಕ ಡಾ. ವೈ. ಭರತ್ ಶೆಟ್ಟಿ

ಮಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್ ಸಂಪೂರ್ಣ ನಿಷೇಧವಾಗಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೊಲೀಸ್ ವ್ಯವಸ್ಥೆಯ ವೈಫಲ್ಯ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ . ರ್‍ಯಾಗಿಂಗ್ ವಿರುದ್ಧ ಕೇಂದ್ರ ಸರ್ಕಾರದ ಕಾನೂನು ಹಾಗೂ ನಿಯಮಗಳು ಈಗಾಗಲೇ ಜಾರಿಯಲ್ಲಿವೆ. ಆದರೂ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಡೆಯುವುದು ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಜವಾಬ್ದಾರಿ . ಕೆಲವು ಕಡೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕೇವಲ ಹೆಸರು,…

Read More

ಮಂಗಳೂರಿನಲ್ಲಿ ‘SZUSICON 2026’ ಯುರಾಲಜಿ ಸಮ್ಮೇಳನ: 1,500ಕ್ಕೂ ಅಧಿಕ ಪ್ರತಿನಿಧಿಗಳ ನಿರೀಕ್ಷೆ

ಮಂಗಳೂರು:ಅಸೋಸಿಯೇಷನ್‌ ಆಫ್ ಸದರ್ನ್ ಯುರಾಲಜಿಸ್ಟ್‌ (Association of Southern Urologists) ವತಿಯಿಂದ ಆಯೋಜಿಸಲಾಗುತ್ತಿರುವ 37ನೇ ವಾರ್ಷಿಕ ಸಮ್ಮೇಳನ ‘SZUSICON 2026’ ಆಗಸ್ಟ್ 7ರಿಂದ 9ರವರೆಗೆ ಮಂಗಳೂರಿನ ಮೇರಿ ಹಿಲ್‌ನಲ್ಲಿರುವ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಂಗಳೂರು ಯುರಾಲಜಿ ಫೋರಂ ಜಂಟಿಯಾಗಿ ಆಯೋಜಿಸುತ್ತಿವೆ. ಯುರಾಲಜಿ (ಮೂತ್ರಶಾಸ್ತ್ರ) ಕ್ಷೇತ್ರದಲ್ಲಿ…

Read More
error: Content is protected !!