ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ

ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇಗೌಡ ಸ್ಮರಣಾರ್ಥ ಬೆಂಗಳೂರಿನ ಸಮಥ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಗಸ್ಟ್ 9 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಇಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ ,ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದು .ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 9ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ…

Read More

ಬಿಜೆಪಿ, ಆರ್‌ಎಸ್‌ಎಸ್‌ನಿಂದ ಭಯದ ವಾತಾವರಣ ಸೃಷ್ಟಿ: ಎಂ.ಜಿ. ಹೆಗಡೆ

ಮಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದಾಗಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಆರೋಪಿಸಿದರು. ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹಿಗಳು, ಪಾಕಿಸ್ತಾನಿಗಳು, ಬಾಂಗ್ಲಾದೇಶೀಯರು, ಭಯೋತ್ಪಾದಕರು ಎಂದು ಕರೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಡಲಾಗುತ್ತಿದೆ. ಅಲ್ಲದೆ, ವೈಯಕ್ತಿಕವಾಗಿ ನಿಂದಿಸಿ ಬೆದರಿಕೆ ಹಾಕುವಂತಹ…

Read More

ಆಗಸ್ಟ್ 8-9ರಂದು ಕೃತಕ ಕೈಕಾಲು ಜೋಡಣೆ ಶಿಬಿರ-ಅಂಗವೈಕಲ್ಯಕ್ಕೆ ಸಲಕರಣೆಗಳ ವಿತರಣೆ

ಮಂಗಳೂರು: ಕರ್ನಾಟಕ ಅನಿವಾಸಿ ಭಾರತೀಯ ಒಕ್ಕೂಟ- ಜಿದ್ದಾ ವತಿಯಿಂದ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್, ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶಿನಿ ನಿಲಯ ಸಹಯೋಗದಲ್ಲಿ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಹಾಗೂ ವಿಕಲಾಂಗ ಸಲಕರಣೆಗಳ ವಿತರಣಾ ಸಮಾರಂಭವು ಆಗಸ್ಟ್ 8,9ರಂದು ನಗರದ ಜೆಪ್ಪು ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯದಲ್ಲಿ ನಡೆಯಲಿದೆ. ಆಗಸ್ಟ್ 8ರಂದು ಬೆಳಗ್ಗೆ 9.30ಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಶಿಬಿರ ಉದ್ಘಾಟಿಸಲಿದ್ದು, ಒಕ್ಕೂಟದ ಅಧ್ಯಕ್ಷ ಹಬೀಬ್ ಆರ್. ಅಹ್ಮದ್…

Read More

ಕಾಸರಗೋಡಿನಲ್ಲಿ ಜಲಪ್ರಳಯದ ಭೀತಿ: ಉಪ್ಪಳ ಹೊಳೆ ಉಕ್ಕಿ ಹರಿಯುತ್ತಿದೆ

​ಕಾಸರಗೋಡು :ಕರ್ನಾಟಕದ ಗಡಿಭಾಗದಲ್ಲಿ ಸಂಭವಿಸಿದ ಮೇಘಸ್ಫೋಟದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮಳೆಯು ತೀವ್ರಗೊಂಡಿದ್ದು, ಪ್ರಕೃತಿ ರೌದ್ರಾವತಾರ ತಾಳಿದೆ. ಜಿಲ್ಲೆಯ ಜೀವನಾಡಿಯಾದ ಉಪ್ಪಳ ಹೊಳೆಯ ನೀರಿನ ಹರಿವು ಅಪಾಯದ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ. ​ ಉಪ್ಪಳ ಹೊಳೆಯಷ್ಟೇ ಅಲ್ಲದೆ, ಮಧೂರು, ಪುತ್ತಿಗೆ ಮತ್ತು ಮಂಜೇಶ್ವರ ಹೊಳೆಗಳಲ್ಲೂ ನೀರಿನ ಹರಿವು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ​ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಅಪರಾಹ್ನದಿಂದಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ​ ಹವಾಮಾನ ಇಲಾಖೆಯ…

Read More

ಭಜನಾ ಮಂದಿರದ ಹುಂಡಿ ಕಳವು: ಬದಿಯಡ್ಕ ಪೊಲೀಸರ ಬಲೆಗೆ ಬಿದ್ದ ಖದೀಮ ಕಳ್ಳ

​ ಕಾಸರಗೋಡು: ದೈವಸ್ಥಾನಗಳ ಪವಿತ್ರತೆಯನ್ನು ಹರಾಜುಹಾಕಲು ಯತ್ನಿಸಿದ ಕಳ್ಳ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಹೊರಭಾಗದಲ್ಲಿ ಇರಿಸಲಾಗಿದ್ದ ಎರಡು ಕಾಣಿಕೆ ಹುಂಡಿಗಳನ್ನು ಎಗರಿಸಿದ್ದ ಕುಖ್ಯಾತ ಕಳ್ಳನನ್ನು ಬದಿಯಡ್ಕ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಆದೂರು ಪಯಂಗಡಿ ನಿವಾಸಿ ಸಾಬಿತ್ ಎ.ಪಿ. (33) ಬಂಧಿತ ಆರೋಪಿ. ಕಳೆದ ಜುಲೈ 29ರ ರಾತ್ರಿ ಈ ಕೃತ್ಯ ನಡೆದಿತ್ತು. ಗುಳಿಗ ದೈವದ ಹುಂಡಿಯಲ್ಲಿದ್ದ 2 ಸಾವಿರ ಹಾಗೂ ಮತ್ತೊಂದು ಹುಂಡಿಯಲ್ಲಿದ್ದ 2 ಸಾವಿರ ರೂ….

Read More

ಸಮುದ್ರದ ರೌದ್ರಾವತಾರ: ಉಪ್ಪಳದಲ್ಲಿ ಮುಳುಗುತ್ತಿವೆ ರಸ್ತೆಗಳು, ಮನೆಗಳು

ಮಂಜೇಶ್ವರ : ಉಪ್ಪಳದಲ್ಲಿ ಕಡಲ ಆರ್ಭಟ ಮುಂದುವರಿದಿದ್ದು, ಶಿವಾಜಿನಗರದಲ್ಲಿ ಮನೆಗಳು ಸಮುದ್ರಪಾಲಾದ ಬೆನ್ನಲ್ಲೇ, ಮಂಗಲ್ಪಾಡಿ ಪಂಚಾಯತ್‌ನ ಮುಟ್ಟಂ ಬೇರಿಕೆಯಲ್ಲಿ ಪ್ರಮುಖ ರಸ್ತೆಯೊಂದು ಜಲಾವೃತಗೊಂಡು ಕುಸಿಯುತ್ತಿದೆ. ಇದರಿಂದ ನೆಬಿನ್, ಇಬ್ರಾಹಿಂ, ಅನಿಲ್ ಹಾಗೂ ಆನಂದ್ ಅವರ ಮನೆಗಳಿಗೆ ಗಂಭೀರ ಅಪಾಯ ಎದುರಾಗಿದೆ.​ಕಳೆದ ಕೆಲವು ದಿನಗಳಿಂದ ಇಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಶಾರದಾನಗರದಲ್ಲಿ ಶಶಿಕಲಾ ಎಂಬವರ ಮನೆ ಈಗಾಗಲೇ ಸಮುದ್ರದ ಪಾಲಾಗಿದೆ. ಅಪಾಯದಂಚಿನಲ್ಲಿರುವ ಲಲಿತಾ, ನಿವೇದಿತಾ ಮತ್ತು ಗಿರಿಜಾ ಅವರ ಕುಟುಂಬಗಳನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕಂಗಾಲಾಗಿರುವ ಸ್ಥಳೀಯರು, ಸಂತ್ರಸ್ತ…

Read More

ಆಳ್ವಾಸ್ ಪ್ರಗತಿ ಉದ್ಯೋಗ ಮೇಳ: 24 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ

ಇದೇ ಆಗಸ್ಟ್ 7 ಮತ್ತು 8 ರಂದು ಮೂಡುಬಿದಿರೆಯ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುತ್ತಿರುವ 16ನೇ ಆವೃತ್ತಿಯ ‘ಆಳ್ವಾಸ್‌ ಪ್ರಗತಿ’ ಬೃಹತ್ ಉದ್ಯೋಗ ಮೇಳದ ಕುರಿತು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಉಚಿತ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಗಾರವು ನಗರದ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆನರಾ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಆಯೋಜನೆ ಮಾಡಿರುವ ಈ…

Read More

ಗೋಲ್ಡನ್ ಮೂವೀಸ್‌ನ ‘ಪಿಕ್ಚರ್’ ಆಗಸ್ಟ್ 7ಕ್ಕೆ ಬಿಡುಗಡೆ.ತುಳು-ಕನ್ನಡ ದ್ವಿಭಾಷಾ ಚಿತ್ರದ ಮೇಲೆ ಭಾರೀ ನಿರೀಕ್ಷೆ

ಮಂಗಳೂರು:ಸಂದೀಪ್ ಬೆದ್ರ ನಿರ್ದೇಶನದಲ್ಲಿ ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ತುಳು-ಕನ್ನಡ ದ್ವಿಭಾಷಾ ಚಿತ್ರ ‘ಪಿಕ್ಚರ್’ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಸಣ್ಣ ಮಟ್ಟದ ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರದ ಚಿತ್ರವಾಗಿ ಯೋಜನೆ ರೂಪಿಸಲಾಗಿದ್ದರೂ, ಚಿತ್ರ ನಿರ್ಮಾಣದ ಹಂತದಲ್ಲಿ ತಂಡದ ಶ್ರಮ ಮತ್ತು ಕಲಾವಿದರ ಸಹಕಾರದಿಂದ ಅದನ್ನು ದೊಡ್ಡ ಮಟ್ಟದಲ್ಲಿ ರೂಪಿಸಲಾಗಿದೆ ಎಂದು ಹೇಳಿದರು….

Read More

ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಕಂಡಕ್ಟರ್ ಆತ್ಮಹತ್ಯೆ

​ಕಾಸರಗೋಡು: ಉದ್ಯೋಗ ಕಳೆದುಕೊಳ್ಳುವ ತೀವ್ರ ಆತಂಕ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದ ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಕಂಡಕ್ಟರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುಳಿಯಾರ್‌ನಲ್ಲಿ ವರದಿಯಾಗಿದೆ.ಮುಳಿಯಾರ್ ಮಜಕ್ಕಾರ್ ನಿವಾಸಿ ಯೋಗೀಶ್ ಎಂ. (41) ಮೃತ ದುರ್ದೈವಿ. ಕಳೆದ 18 ಸುದೀರ್ಘ ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಹುದ್ದೆ ಕೈತಪ್ಪಬಹುದು ಎಂಬ ಭೀತಿಯಿಂದ ತೀವ್ರ ಮನನೊಂದಿದ್ದರು ಎನ್ನಲಾಗಿದೆ. ​ಸುದೀರ್ಘ ಸೇವೆ ಸಲ್ಲಿಸಿದರೂ ಭದ್ರತೆಯಿಲ್ಲದ ಅಸ್ಥಿರ…

Read More

ಆಟಿಸಂ ಹಾಗೂ ಕಲಿಕಾ ಸಮಸ್ಯೆ ಹೊಂದಿರುವ ಮಕ್ಕಳಿಗೆ ಅರ್ಜುನ್ ಶೆಟ್ಟಿ ಸ್ಮರಣಾರ್ಥ ಶಾಲೆ; ಆ.8ರಂದು ಉದ್ಘಾಟನೆ

ಮಂಗಳೂರು, ಆ.4: ಆಟಿಸಂನಿಂದ ಬಳಲುತ್ತಿರುವ ಮಕ್ಕಳ ಹಾಗೂ ನಿರ್ದಿಷ್ಟ ಕಲಿಕಾ ಸಮಸ್ಯೆ (Specific Learning Disability) ಹೊಂದಿರುವ ಮಕ್ಕಳ ಸಮಗ್ರ ಶಿಕ್ಷಣ ಮತ್ತು ಪುನರ್ವಸತಿಗೆ ನೆರವಾಗುವ ಉದ್ದೇಶದಿಂದ ಶಕ್ತಿನಗರದ ಸಾನಿಧ್ಯ ಸಂಸ್ಥೆಯಲ್ಲಿ ‘ಅರ್ಜುನ್ ಶೆಟ್ಟಿ ಸ್ಮರಣಾರ್ಥ ಶಾಲೆ’ಯನ್ನು ಆಗಸ್ಟ್ 8ರಂದು ಉದ್ಘಾಟಿಸಲಾಗುತ್ತಿದೆ. ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅರ್ಜುನ್ ಶೆಟ್ಟಿ ಫೌಂಡೇಶನ್‌ನ ಸ್ಥಾಪಕ ಸಿಎ ಸುಧೀರ್ ಶೆಟ್ಟಿ, ತಮ್ಮ ಪುತ್ರ ಅರ್ಜುನ್ ಶೆಟ್ಟಿಯ ಸ್ಮರಣಾರ್ಥ ಈ ಶಾಲೆಯನ್ನು ಆರಂಭಿಸುತ್ತಿದ್ದು,…

Read More
error: Content is protected !!