“ಚಿನ್ಮಯ ವಿದ್ಯಾಲಯದಲ್ಲಿ ಆರಾಧನಾ ದಿನ ಆಚರಣೆ”

ಬದಿಯಡ್ಕ: ಚಿನ್ಮಯ ವಿದ್ಯಾಲಯದಲ್ಲಿ ಆರಾಧನಾ ದಿನವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ನಡೆಯಿತು. ಭಜನೆ ಮತ್ತು ಪೂಜೆಯ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಾಣಗೊಂಡಿತು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾನಸ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಸಹಕಾರಿ ಪಿತಾಮಹ ದಿವಂಗತ ಮೊಳಹಳ್ಳಿ ಶಿವರಾವ್ ಜನ್ಮದಿನಾಚರಣೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಪಿತಾಮಹ ದಿವಂಗತ ಮೊಳಹಳ್ಳಿ ಶಿವರಾವ್ ಅವರ ಜನ್ಮದಿನಾಚರಣೆ ಇಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಎಸ್‌ಸಿಡಿಸಿಸಿ ಬ್ಯಾಂಕ್ನಲ್ಲಿ ನಡೆಯಲಿದೆ . ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರ ಕುಮಾರ್ ವಹಿಸಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ದಿ / ಮೊಳಹಳ್ಳಿ ಶಿವರಾವ್ ಅವರ…

Read More

ಪುತ್ತೂರು ತಾಲೂಕಿನ ವಿವಿಧೆಡೆ ಮಳೆಹಾನಿಗೊಳಗಾದ ರಸ್ತೆ, ಚರಂಡಿಗಳ ಸ್ಥಳ ಪರಿಶೀಲಿಸಿದ ಸಿಇಓ

ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಕೆಟ್ಟುಹೋದ ರಸ್ತೆ ಮತ್ತು ಚರಂಡಿಗಳ ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಆ.3 ದ.ಕ.ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅವರು ಭೇಟಿ ನೀಡಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖಾ ಅಧಿಕಾರಿಗಳಿಗೆ ಹಾಗೂ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಮಳೆಹಾನಿಗೊಳಗಾದ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸುವಂತೆ ಸೂಕ್ತ ನಿರ್ದೇಶನ ನೀಡಿದರು. ಅರಿಯಡ್ಕ ಗ್ರಾ‌.ಪಂ‌. ವ್ಯಾಪ್ತಿಗೆ ಒಳಪಟ್ಟ ಕಾವು- ಈಶ್ವರಮಂಗಲ ರಸ್ತೆ, ಮುಂಡೂರು ಗ್ರಾಮದ ಭಕ್ತಕೋಡಿ-ತಿಂಗಳಾಡಿ- ಸರ್ವೆ ರಸ್ತೆ,…

Read More

ಸಕಲೇಶಪುರದಿಂದ ಮಂಗಳೂರಿಗೆ ಅಕ್ರಮವಾಗಿ ಮರದ ದಿಮ್ಮಿ ಸಾಗಿಸುತ್ತಿದ್ದ ವಾಹನ ವಶ

ಉಪ್ಪಿನಂಗಡಿ: ಸಕಲೇಶಪುರದಿಂದ ಮಂಗಳೂರಿಗೆ ಅಗತ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 3, 2026ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಉತ್ಪನ್ನವನ್ನು ನಿಯಮಬಾಹಿರವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದರು. ಪರಿಶೀಲನೆ ವೇಳೆ ಅಗತ್ಯ ದಾಖಲೆಗಳಿಲ್ಲದೆ ಮರದ ದಿಮ್ಮಿಗಳನ್ನು ಸಾಗಾಟ ಮಾಡಿರುವುದು ಪತ್ತೆಯಾಗಿ, ವಾಹನ ಹಾಗೂ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ….

Read More

ವಿಶ್ವ ತುಳುವೆರ್ (ರಿ) ಕೇರಳ ಘಟಕ ಉದ್ಘಾಟನಾ ಸಮಾರಂಭ

ವಿಶ್ವ ತುಳುವೆರ್ (ರಿ) ಕೇರಳ ಘಟಕ ಇದರ ಉದ್ಘಾಟನಾ ಸಮಾರಂಭ, ಪದಾಧಿಕಾರಿಗಳ ಪದಗ್ರಹಣ ಮತ್ತು ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇದರ 236ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಆಗಸ್ಟ್ 2ರಂದು ಡಾ. ವಾಣಿಶ್ರೀ ಕಾಸರಗೋಡು ಇವರ ಸ್ವಗೃಹ ಶ್ರೀಗಿರಿ ಸದನ “ಪ್ರಕೃತಿ ಆಯುರ್ವೇದ ಆಸ್ಪತ್ರೆ “ಯ ಶಿವದುರ್ಗಾ ಕಲಾ ವೇದಿಕೆಯಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ತುಳುವೆರ್ (ರಿ) ಮಂಗಳೂರು ಇದರ…

Read More

ಪೇಸ್‌ನಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಕುರಿತು ಎಫ್‌ಡಿಪಿ ಉದ್ಘಾಟನೆ

ಮಂಗಳೂರು: ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ (ಪೇಸ್), ಮಂಗಳೂರಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ‘ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್: ಪ್ರೆಸೆಂಟ್ & ಫ್ಯೂಚರ್’ ವಿಷಯದ ಕುರಿತು ಆಯೋಜಿಸಿರುವ ಒಂದು ವಾರದ AICTE ATAL Academy ಪ್ರಾಯೋಜಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ) ಸೋಮವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ಆಗಸ್ಟ್ 3ರಿಂದ 8ರವರೆಗೆ ನಡೆಯಲಿದೆ. ಬೆಂಗಳೂರು ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಟಿ. ಲಮಾಣಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು…

Read More

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಿಂದ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ

ಬೆಳ್ತಂಗಡಿ: ಪ್ರತಿಯೊಬ್ಬರಲ್ಲೂ ಅದ್ಭುತ ದೈವೀ ಶಕ್ತಿಯಿದೆ. ಅದನ್ನ ಗುರುತಿಸಿ ಪ್ರಕಟಿಸುವುದೇ ವಿದ್ಯಾಭ್ಯಾಸದ ಮೂಲ ಉದ್ದೇಶ. ಯುವ ಮನಸ್ಸಿನಲ್ಲಿ ಬಹಳಷ್ಟು ಕನಸುಗಳು ತುಂಬಿರುತ್ತವೆ. ಪದವಿ ಪೂರ್ವ ಶಿಕ್ಷಣ ಬದುಕಿನ ಕನಸುಗಳನ್ನು ಸಾಕ್ಷಾತ್ಕಾರಗೊಳಿಸುವ ಅಮೂಲ್ಯ ಸಮಯ. ಮನಸ್ಸನ್ನು ಹಿಡಿತದಲ್ಲಿಟ್ಟು, ಭಾವನೆಗಿಂತ ಮಿಗಿಲಾಗಿ ಶಿಸ್ತು, ಭಕ್ತಿ, ಶ್ರದ್ಧೆಗೆ ಸಮಯ ನೀಡಿದಲ್ಲಿ ಯಶಸ್ಸು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಬೆಳ್ತಂಗಡಿ ಹಿರಿಯ ವಕೀಲರಾದ ಕೆ.ಪ್ರತಾಪಸಿಂಹ ನಾಯಕ್ ನುಡಿದರು. ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವತಿಯಿಂದ, ಗುರುವಾಯನಕೆರೆ ಬಂಟರ ಭವನದಲ್ಲಿ…

Read More

ಮುಂದಿನ ತಲೆಮಾರಿಗೆ ಪ್ರಕೃತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ: ಡಾ| ಜಿ. ಸಂತೋಷ್

ಮಹಾನಗರ: ನಮ್ಮ ಸುತ್ತಲಿನ ಪರಿಸರ ನಾವೇ ಹಾಳು ಮಾಡುತ್ತಿದ್ದೇವೆ. 2019ರಲ್ಲಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ದುರಂತಕ್ಕೆ ನಮ್ಮ ಸ್ವಾರ್ಥ ಮತ್ತು ಬೇಜವಾಬ್ದಾರಿತನವೇ ಮೂಲ ಕಾರಣ ಎಂದು ಜಿಲ್ಲಾ ನಗರಾಭಿವೃದ್ಧಿ ಸೆಲ್‌ನ ಯೋಜನಾ ನಿರ್ದೇಶಕ ಡಾ| ಜಿ. ಸಂತೋಷ್ ಕುಮಾರ್‌ ಹೇಳಿದರು. ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಪರಿಸರ ಆಯೋಗದ ನೇತೃತ್ವದಲ್ಲಿ ನಗರದ ಬೆಂದೂರ್ ಚರ್ಚ್‌ನ ಸಭಾಂಗಣದಲ್ಲಿ ಪರಿಸರ ಆಯೋಗದ ಸಂಚಾಲಕರು ಹಾಗೂ ಕಾರ್ಯದರ್ಶಿಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಪರಿಸರ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು….

Read More

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಷಪೂರಿತ ಕೇಕ್: ಫಂಗಸ್ಯುಕ್ತ ತಿಂಡಿ ತಿಂದು ಆರು ಮಕ್ಕಳು ಅಸ್ವಸ್ಥ, ಬೇಕರಿ ಸೀಲ್

ಕಾಸರಗೋಡು : ​ಮದುವೆ ವಾರ್ಷಿಕೋತ್ಸವದ ಆಚರಣೆಗೆಂದು ಅತ್ಯಾಸೆಯಿಂದ ತಂದ ಕೇಕ್‌ನಲ್ಲಿ ಬಲಿತ ಫಂಗಸ್‌ಗಳು ಪತ್ತೆಯಾಗಿದ್ದು, ಅದನ್ನು ಸೇವಿಸಿದ ಕಂದಮ್ಮಗಳು ನಗುವಿನ ಬದಲಿಗೆ ಆಸ್ಪತ್ರೆ ಸೇರಿ ಸಾವು-ಬದುಕಿನ ನಡುವೆ ನರಳುವಂತಾಗಿಸಿರುವ ಅಮಾನವೀಯ ಘಟನೆ ಕಾಸರಗೋಡಿನ ಹೊಸದುರ್ಗ ತಾಲೂಕಿನ ಪರಪ್ಪದಲ್ಲಿ ನಡೆದಿದೆ. ​ಕಿನಾನೂರ್ ಕರಿಂದಳಂ ಪಂಚಾಯತ್ ವ್ಯಾಪ್ತಿಯ ಕನಕಪಳ್ಳಿ ನಿವಾಸಿ ಸಲೀಂ ಎಂಬವರ ವಿವಾಹ ವಾರ್ಷಿಕೋತ್ಸವಕ್ಕೆ ಇಲ್ಲಿನ ಕುಖ್ಯಾತ “ಸಿಟಿ ಬೇಕರಿ”ಯಿಂದ ಖರೀದಿಸಿದ ಕೇಕ್ ಜನರ ಜೀವದೊಂದಿಗೆ ಚೆಲ್ಲಾಟವಾಡಿದೆ. ಸಂಭ್ರಮದಿಂದ ಕೇಕ್ ಸವಿದ ತಕ್ಷಣವೇ ಹಿರಿಯರಿಗೆ ವಿಚಿತ್ರ ರುಚಿ ಅನುಭವವಾದರೆ,…

Read More

ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ನಾವು ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ಶಾಸಕರು ತಾಳ್ಮೆಯಿಂದ ಇರಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು. ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ನಾನು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ರವಾನಿಸಿದ್ದೇನೆ. ನಮ್ಮಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಬಹಳ ಶಾಸಕರು ಅರ್ಹರಿದ್ದಾರೆ. ಕೆಲವು ಸಂದರ್ಭದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. 2004ರಲ್ಲಿ ನನ್ನನ್ನೂ ಸಂಪುಟಕ್ಕೆ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಆರಂಭದಲ್ಲಿ ನನ್ನನ್ನು…

Read More
error: Content is protected !!