ಮಂಜೇಶ್ವರ: ಉದ್ಯಾವರ ಜೆ ಎಂ ರಸ್ತೆಯಲ್ಲಿ ಭಾರಿ ಕಳ್ಳತನ: 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಜೆ ಎಂ ರಸ್ತೆಯಲ್ಲಿರುವ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ. ಜೆ.ಎಂ ರಸ್ತೆಯಲ್ಲಿರುವ ‘ನೈಮಾ ಕಾಟೇಜ್’ ಎಂಬ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಮನೆ ಮಾಲಕಿ ಫಾತಿಮತ್ ಸೌರಾ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ​ಜುಲೈ 12ರ ಸಂಜೆ 5:30ರಿಂದ 17ರ ರಾತ್ರಿ 12:00 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿದ…

Read More

ಕುಂಬಳೆಯಲ್ಲಿ ವಿಕೃತ ಕೃತ್ಯ: ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿದ ಆರೋಪ

ಕಾಸರಗೋಡು : ಮೋಸದ ಕೃತ್ಯವೊಂದು ಕುಂಬಳೆಯ ಖಾಸಗಿ ಸಂಸ್ಥೆಯೊಂದರಲ್ಲಿ ಬೆಳಕಿಗೆ ಬಂದಿದೆ. ಕೆಲಸ ಮಾಡುವ ಸ್ಥಳದಲ್ಲಿ ಯುವತಿಯೊಬ್ಬಳು ಕುಡಿಯಲು ಬಳಸುತ್ತಿದ್ದ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿಸಿಟ್ಟ ಗಂಭೀರ ಆರೋಪದ ಮೇಲೆ ಸಹೋದ್ಯೋಗಿಗಳಾದ ವೈಶಾಖ್ ಮತ್ತು ಎಬಿನ್ ಎಂಬುವವರ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ​ನೆಹ್ರಾಜೆ ನಿವಾಸಿ 30 ವರ್ಷದ ಯುವತಿ ನೀಡಿದ ದೂರಿನನ್ವಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಜುಲೈ 25ರ ಸಂಜೆ ಹಾಗೂ 27ರ ಬೆಳಗಿನ ಅವಧಿಯ ನಡುವೆ ಈ ಕೃತ್ಯ ಎಸಗಲಾಗಿದೆ. ಮಾರಣಾಂತಿಕ…

Read More

ಡಾ. ಎನ್.ಎಸ್.ಎ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ನಿಟ್ಟೆ – ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಡಾ. ಎನ್.ಎಸ್.ಎ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ನಿಟ್ಟೆಯ ಇಂಟರ್ಯಾಕ್ಟ್ ಕ್ಲಬ್‌ನ 2026–27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು 2026ರ ಜುಲೈ 29ರಂದು ಮಧ್ಯಾಹ್ನ 2.00 ಗಂಟೆಗೆ ಶಾಲೆಯ ಬಹುಉದ್ದೇಶ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಕ್ಲಬ್ ನಿಟ್ಟೆಯ ನೂತನ ಅಧ್ಯಕ್ಷರು ಹಾಗೂ ಪದಗ್ರಹಣಾಧಿಕಾರಿಗಳಾದ ರೋ.ಶ್ರೀ ಮತಿ ಶೈಲಜಾ ವಿ. ಶೆಟ್ಟಿಅವರು ಇಂಟರ್ಯಾಕ್ಟ್ ಕ್ಲಬ್‌ನ ಇತಿಹಾಸ, ಅದರ ಪ್ರಮುಖ ಚಟುವಟಿಕೆಗಳು ಮತ್ತು ಸಮಾಜ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಗುರಿ ಕುರಿತು…

Read More

ಮಳೆ-ಪ್ರವಾಹಕ್ಕೆ ಕೇರಳ ತತ್ತರ:ಮೃತರ ಸಂಖ್ಯೆ 15ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಸಂಭವಿಸಿದ ವಿವಿಧ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಏಳು ಮಂದಿ ನಾಪತ್ತೆಯಾಗಿದ್ದು, ರಾಜ್ಯಾದ್ಯಂತ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ, ಸೋಮವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ ರಾಜ್ಯದಾದ್ಯಂತ 316 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 11,018 ಪ್ರವಾಹ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ…

Read More

ಸ್ಥಳೀಯ ಸಂಸ್ಥೆಗಳಿಗೆ ಹಣ ನೀಡದ ಸರ್ಕಾರ ವಿರುದ್ಧ ಮಂಜೇಶ್ವರದಲ್ಲಿ ಪ್ರತಿಭಟನೆ

ಮಂಜೇಶ್ವರ : ಕೇರಳದ ಪಂಚಾಯತ್ ನಗರ ಸಭೆಗಳಲ್ಲಿ ಹೊಸ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಕೊಡುವ 3000 ಕೋಟಿ ರೂಪಾಯಿ ಕೊಡದೆ ರಾಜ್ಯದಲ್ಲಿ ಆಡಳಿತ ನಡೆಸುವ ಯು ಡಿ ಎಫ್ ಸರಕಾರ ಜನರ ಮೂಲಭೂತ ಸೌಕರ್ಯಗಳಿಗೆ ಇಡುವ ಫಂಡ್ ಕೊಡದೆ ವಂಚಿಸುತ್ತಿದ್ದಾರೆ. ಇದರಿಂದ ಹೊಸ ಪದ್ದತಿಗಳ ನಿರ್ವಹಣೆಗೆ ಮಾತ್ರವಲ್ಲದೆ ಹಲವಾರು ಕ್ಷೇಮ ಪಿಂಚಣಿ ಪದ್ಧತಿಗಳು ಬುಡಮೇಲುಗೊಂಡಿದೆ. ಕಾರುಣ್ಯ , ಕುಟುಂಬ ಆರೋಗ್ಯ ಕೇಂದ್ರಗಳಲ್ಲಿರುವ ಡಾಕ್ಟರ್ ಸೇವೆಗೆ, ಅಂಗನವಾಡಿ, ಬಡ್ಸ್ ಶಾಲೆಗಳ ಚಟುವಟಿಕೆಗಳಿಗೆ, ವಿಕಲಾಂಗ ಮಕ್ಕಳಿಗೆ ಕೊಡಬೇಕಾದ ಸ್ಕಾಲರ್ಶಿಪ್…

Read More

ಅಪ್ರಾಪ್ತರಿಗೆ ಮದ್ಯ ನೀಡಿದರೆ ಕಠಿಣ ಕ್ರಮ: ಎಸ್ಪಿ ಹರಿರಾಮ್ ಶಂಕರ್ ಎಚ್ಚರಿಕೆ

ಉಡುಪಿ: ಅಬಕಾರಿ ನಿಯಮಗಳ ಪ್ರಕಾರ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಅಥವಾ ಪೂರೈಕೆ ಮಾಡುವ ಬಾರ್ ಹಾಗೂ ಪಬ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.ಮಣಿಪಾಲ ಪ್ರದೇಶದಲ್ಲಿ ಅಪ್ರಾಪ್ತರಿಗೆ ಮದ್ಯ ಪೂರೈಕೆ ಹಾಗೂ ಬಾರ್–ಪಬ್‌ಗಳಲ್ಲಿ ನಿಯಮ ಉಲ್ಲಂಘನೆ ನಡೆಯುತ್ತಿರುವ ಕುರಿತು ದೊರೆತ ಮಾಹಿತಿಯ ಆಧಾರದ ಮೇಲೆ ಪೊಲೀಸರು ವಿಶೇಷ ತಂಡ ರಚಿಸಿ ವಿವಿಧ ಬಾರ್ ಮತ್ತು ಪಬ್‌ಗಳ ಮೇಲೆ ದಾಳಿ ನಡೆಸಿದರು….

Read More

ಪ್ರತಿ ವರ್ಷದಂತೆ ಈ ಬಾರಿಯೂ ನೇತ್ರಾವತಿ ನದಿಗೆ ಅಪಾಯಕಾರಿ ಜಿಗಿತ..!ಆಡಳಿತದ ಎಚ್ಚರಿಕೆಗೂ ಕ್ಯಾರೇ ಇಲ್ಲ; ಜೀವದೊಂದಿಗೆ ಚೆಲ್ಲಾಟಕ್ಕೆ ಸಾರ್ವಜನಿಕರ ಆಕ್ರೋಶ

ಬಂಟ್ವಾಳ: ಮಳೆಗಾಲದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಿದಾಗ ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಪದೇ ಪದೇ ಮನವಿ ಮಾಡುತ್ತಿದ್ದರೂ, ಕೆಲವರು ಜೀವದ ಹಂಗು ತೊರೆದು ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿರುವ ದೃಶ್ಯಗಳು ಮತ್ತೆ ಬೆಳಕಿಗೆ ಬಂದಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಪಾಣೆಮಂಗಳೂರು ಹಳೆಯ ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಯುವಕರು ಹಾಗೂ ಬಾಲಕರು ಜಿಗಿಯುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕೆಲವು ದೃಶ್ಯಗಳಲ್ಲಿ ಅಪ್ರಾಪ್ತ ಬಾಲಕರು ಕೂಡ…

Read More

ಬಿಐಇ ಎಸ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಭತ್ತದ ಗದ್ದೆ ಭೇಟಿ, ನೇಜಿ ನೆಡುವ ಕಾರ್ಯಕ್ರಮ

ಇನ್ನೋಳಿ: ಮಂಗಳೂರಿನ ಇನ್ನೋಳಿಯ ಬಿಯರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ (BIES) ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಜುಲೈ 30ರಂದು ಮಾರ್ಕಮೆ ಗ್ರಾಮದಲ್ಲಿ ಭತ್ತದ ಗದ್ದೆ ಭೇಟಿ ಹಾಗೂ ನೇಜಿ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಬಗ್ಗೆ ಪ್ರಾಯೋಗಿಕ ಅನುಭವ ನೀಡುವುದು, ಕೃಷಿಯ ಮಹತ್ವದ ಕುರಿತು ಅರಿವು ಮೂಡಿಸುವುದು ಹಾಗೂ ದೇಶದ ಆಹಾರ ಭದ್ರತೆಯಲ್ಲಿ ರೈತರ ಪಾತ್ರವನ್ನು ಪರಿಚಯಿಸುವುದಾಗಿತ್ತು. ಕಾರ್ಯಕ್ರಮದಲ್ಲಿ ಬಿಸಿಎ, ಬಿ.ಕಾಂ ಹಾಗೂ ಬಿಬಿಎ ವಿಭಾಗಗಳ…

Read More

ಬಂಟ್ವಾಳದಲ್ಲಿ ನಾಪತ್ತೆಯಾಗಿದ್ದ ಜೀವನ್ ಪಿಂಟೋ ಶವವಾಗಿ ಪತ್ತೆ

ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೀವನ್ ಪಿಂಟೋ ಅವರು ಮೊನ್ನೆ ರಾತ್ರಿ ಭಾರೀ ಮಳೆಯ ನಡುವೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ತಮ್ಮ ಮಾವನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿದ್ದ ನೀರಿನ ತೋಡಿಗೆ ನಿರ್ಮಿಸಿದ್ದ ಕಾಲುಸಂಕ ದಾಟುವಾಗ ಕಾಲು ಜಾರಿ ಹರಿಯುತ್ತಿದ್ದ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು. ಘಟನೆ ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದು, ನಿನ್ನೆ ದಿನವಿಡೀ ಎನ್‌ಡಿಆರ್‌ಎಫ್ ತಂಡವೂ ತೀವ್ರ ಶೋಧ ನಡೆಸಿತ್ತು. ಘಟನಾ ಸ್ಥಳದ…

Read More

ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಮಠ ಎಂಬಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಗಂಡಸಿನ ಮೃತದೇಹವೊಂದು ನದಿ ಬದಿಯ ಪೊದೆಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುಮಾರು 30ರಿಂದ 40ರ ವಯೋಮಾನದ ವ್ಯಕ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಕೆ.ಮುಹಮ್ಮದ್ ನಾಸಿರ್ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಗುರುತು ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್…

Read More
error: Content is protected !!