ನೂತನ ಜಿಲ್ಲಾ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡಲು ಕೇಂದ್ರದ ನಾಯಕರಿಂದ ಸಭೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆ 16:”ನೂತನವಾಗಿ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ನಾಯಕರು ಸಭೆ ಕರೆದಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಸುರ್ಜೇವಾಲ ಅವರು ಆಗಮಿಸಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. ನಾಳೆಯಿಂದ (ಗುರುವಾರ) 3 ದಿನಗಳ ಕಾಲ ವಿವಿಧ ಜಿಲ್ಲೆಗಳ ಪ್ರವಾಸದ ಬಗ್ಗೆ ಕೇಳಿದಾಗ, “ಇಂದಿನಿಂದ (ಬುಧವಾರ) ಕಲಬುರಗಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರವಾಸ…

Read More

ಆರಿಕ್ಕಾಡಿಯಲ್ಲಿ ಜಿಲ್ಲಾ ಕಲೆಕ್ಟರ್ ಕಯಾಕಿಂಗ್ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಚೈತನ್ಯ

ಕುಂಬಳೆ ಪ್ರವಾಸೋದ್ಯಮ ಯೋಜನೆಯಡಿ ಪೂರ್ಣಗೊಂಡ ಆರಿಕ್ಕಾಡಿ ಕಯಾಕಿಂಗ್ ಕೇಂದ್ರಕ್ಕೆ ಜಿಲ್ಲಾ ಕಲೆಕ್ಟರ್ ಅರ್ಜುನ್ ಪಾಂಡ್ಯನ್ ಭೇಟಿ ನೀಡಿ ಕಯಾಕಿಂಗ್‌ನಲ್ಲಿ ಪಾಲ್ಗೊಂಡರು. ಕಲೆಕ್ಟರ್ ಸ್ವತಃ ಸ್ಟ್ಯಾಂಡಿಂಗ್ ಕಯಾಕಿಂಗ್ ಹಾಗೂ ಸಿಟ್ಟಿಂಗ್ ಕಯಾಕಿಂಗ್ ನಡೆಸಿ ಪ್ರೇರಣೆಯಾದರು. ಜಿಲ್ಲೆಯ ಕ್ರೀಡಾ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಜಿಲ್ಲಾ ಕಲೆಕ್ಟರ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಇದರ ಭಾಗವಾಗಿ ಕುಂಭಳ ಪ್ರವಾಸೋದ್ಯಮ ಯೋಜನೆಯ ಉಳಿದ ಕಾಮಗಾರಿಗಳೂ ನಡೆಯುತ್ತಿವೆ. ಜಿಲ್ಲಾ ಕಲೆಕ್ಟರ್ ನಿರಂತರವಾಗಿ ಪರಿಶೀಲನಾ ಸಭೆಗಳನ್ನು ನಡೆಸಿ…

Read More

ಕುತ್ತಾರು ಬೈಕ್–ಸ್ಕೂಟರ್ ಅಪಘಾತ : ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯ,ಕುಟುಂಬಸ್ಥರಿಂದ ಅಂಗಾಂಗ ದಾನಗೈಯಲು ನಿರ್ಧಾರ

ಉಳ್ಳಾಲ:ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಕಟ್ಟೆಯ ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು,ವೈದ್ಯರ ಸಲಹೆಯಂತೆ ಪೋಷಕರು ಯುವಕನ ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗಿದ್ದಾರೆ.ಕುತ್ತಾರುವಿನ ಆಯೆರೆ ಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21)ಮೆದುಳು ನಿಷ್ಕ್ರಿಯಗೊಂಡ ಯುವಕನಾಗಿದ್ದಾನೆ. ವರ್ಷಿತ್ ಸೋಮವಾರ ರಾತ್ರಿ 7.30 ರ ಹೊತ್ತಿಗೆ ಕುತ್ತಾರುವಿನಿಂದ ತನ್ನ ಮನೆಯ ಕಡೆ ತೆರಳುತ್ತಿದ್ದಾಗ ಕುತ್ತಾರುವಿನ ಕೊರಗಜ್ಜನ…

Read More

ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ತುಳುನಾಡಿನ ಸಂಸ್ಕೃತಿ, ಭದ್ರತೆ ಹಾಗೂ ಯುವಜನರ ಹಿತರಕ್ಷಣೆಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರದ ಮುಂದೆ ವಿಶ್ವ ಹಿಂದೂ ಪರಿಷದ್ ಆಗ್ರಹ

ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಅಭಿವೃದ್ಧಿಗೆ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್ ಹಾಗೂ ಐಟಿ-ಬಿಟಿ ಉದ್ಯಮಗಳ ಉತ್ತೇಜನಕ್ಕೆ ಚರ್ಚಿಸುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಹೊಣೆಗಾರಿಕೆಯಿಂದ ಸ್ವಾಗತಿಸುತ್ತದೆ. ಆರ್ಥಿಕ ಪ್ರಗತಿ ಮತ್ತು ಸ್ಥಳೀಯ ಯುವಕರ ಉದ್ಯೋಗ ಸೃಷ್ಟಿ ಅತ್ಯಗತ್ಯ. ಆದರೆ, ಈ ಅಭಿವೃದ್ಧಿ ನೀತಿಗಳನ್ನು ಜಾರಿಗೊಳಿಸುವಾಗ ತುಳುನಾಡಿನ ಮೂಲ ಸಂಸ್ಕೃತಿ, ಧಾರ್ಮಿಕ ಆಚರಣೆ, ರಾಷ್ಟ್ರೀಯ ಭದ್ರತೆ ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು…

Read More

ಮಂಗಳೂರಿನಲ್ಲಿ ಸೆ.20ರಂದು ‘ಸ್ಟ್ರೆಂಥಾನ್’ ಫಿಟ್ನೆಸ್ ಸ್ಪರ್ಧೆ; 300 ಕ್ರೀಡಾಪಟುಗಳ ಭಾಗಿ

ಮಂಗಳೂರು: ಓಟ, ಶಕ್ತಿ ಹಾಗೂ ಕ್ರಿಯಾತ್ಮಕ ಫಿಟ್ನೆಸ್‌ನ್ನು ಒಂದೇ ಸ್ಪರ್ಧಾತ್ಮಕ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದ ‘ಸ್ಟ್ರೆಂಥಾನ್’ (STRENGTHON) ಫಿಟ್ನೆಸ್-ಪರ್ಫಾರ್ಮೆನ್ಸ್ ಸ್ಪರ್ಧೆಯ ಮೊದಲ ಆವೃತ್ತಿ ಸೆ.20ರಂದು ಮಂಗಳೂರಿನ ಉರ್ವದ ಐಕ್ಯ ಸ್ಪೋರ್ಟ್ಸ್ ಫೆಸಿಲಿಟಿಯಲ್ಲಿ ನಡೆಯಲಿದೆ ಎಂದು ಸ್ಟ್ರೆಂಥಾನ್ ಮುಖ್ಯಸ್ಥ ನಿತಿನ್ ಶ್ರಿಯಾನ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ರೀಡೆಗಳಿಗೆ ಸೀಮಿತವಾಗಿರುವ ಫಿಟ್ನೆಸ್‌ಗಿಂತ ಸಮಗ್ರ ದೈಹಿಕ ಸಾಮರ್ಥ್ಯಕ್ಕೆ ಒತ್ತು ನೀಡುವುದು ‘ಸ್ಟ್ರೆಂಥಾನ್’ ಉದ್ದೇಶವಾಗಿದೆ. ಓಟದೊಂದಿಗೆ ವಿವಿಧ ರೀತಿಯ ಕ್ರಿಯಾತ್ಮಕ ವ್ಯಾಯಾಮಗಳನ್ನು ಒಳಗೊಂಡ ಸ್ಪರ್ಧೆ ಇದಾಗಿದ್ದು,…

Read More

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು; ನೈಟ್ ಲೈಫ್ ಆರಂಭಕ್ಕೆ ಕ್ರಮ: ಹರೀಶ್ ಕುಮಾರ್

ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಕರಾವಳಿಯನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಪ್ರವಾಸಿ ತಾಣಗಳ ಪರಿಶೀಲನೆ ಹಾಗೂ ಉದ್ಯಮಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನೈಟ್ ಲೈಫ್ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ತಿಳಿಸಿದರು . ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಜಿಲ್ಲೆಯಲ್ಲಿ ಸದ್ಯ…

Read More

ಕೆಡಿಪಿ ಸಭೆಗೆ ಬಜಪೆ ಪ.ಪಂ. ಅಧ್ಯಕ್ಷರಿಗೆ ಆಹ್ವಾನವಿಲ್ಲ; ಜನರ ಸಮಸ್ಯೆ ಮಂಡಿಸಲು ಅವಕಾಶ ತಪ್ಪಿದೆ: ಲೋಕೇಶ್ ಪೂಜಾರಿ

ಮಂಗಳೂರು:ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶವಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ಕೆಡಿಪಿ ಸಭೆಗೆ ಅಧ್ಯಕ್ಷರನ್ನು ಆಹ್ವಾನಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸೆ.15ರಂದು ನಡೆದ ಕೆಡಿಪಿ ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದ ಕಾರಣ ಜಿಲ್ಲಾ ಮಟ್ಟದ ಸಭೆಯಲ್ಲಿ ಜನರ ಸಮಸ್ಯೆಗಳನ್ನು ನೇರವಾಗಿ ಮಂಡಿಸುವ ಅವಕಾಶ ತಪ್ಪಿದೆ…

Read More

ಇವತ್ತಿನ ಕರ್ನಾಟಕ ರಾಜ್ಯ ಹವಾಮಾನ ಮುನ್ಸೂಚನೆ

ಕರಾವಳಿ ಉ. ಒಳನಾಡಿನಲ್ಲಿ ನಿನ್ನೆ ಬಿಸಿಲಿನ ವಾತಾವರಣ – ಬಹುತೇಕ ಒಣಹವೆ ಇತ್ತು. ಕೊಡಗಿನ ಕೆಲವೆಡೆ ಸಾಮಾನ್ಯ ಮಳೆಯಾಗಿದ್ದು ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು – ಗ್ರಾಮಾಂತರ, ರಾಮನಗರ, ಚಾಮರಾಜನಗರ ಮೈಸೂರು ಮಂಡ್ಯ ತುಮಕೂರು ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಕೂಡ್ಲೂರಿನಲ್ಲಿ 145.50mm ಭಾರೀ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ. ದ.ಕ. ಉಡುಪಿಯ ಸುಳ್ಯ ಕಡಬ ಪುತ್ತೂರು ಬೆಳ್ತಂಗಡಿ ಕಾರ್ಕಳ ಹೆಬ್ರಿ…

Read More

ಯಕ್ಷಗಾನ ಕರ್ನಾಟಕ ರಾಜ್ಯದ ರಾಜ್ಯ ಕಲೆಯನ್ನಾಗಿ ಘೋಷಿಸಲು ಮನವಿ

ಮಂಗಳೂರು: ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಮ್ಮ ದೇಶದ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ರಾಜ್ಯದ ಕಲೆಯಾಗಿ ಘೋಷಿಸಬೇಕೆಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರು ಹಾಗೂ ಕಲಾಭಿಮಾನಿಗಳ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಮನವಿಯನ್ನು ಸ್ವೀಕರಿಸಿದ ಸಚಿವರು ತಮ್ಮ ಬೇಡಿಕೆಯನ್ನು ಪೂರೈಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.ಸಾವಿರ ವರ್ಷಗಳ ಇತಿಹಾಸವಿರುವ, ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿದಂತಹ,…

Read More

ಕೊಂಕಣಿ ಸಮುದಾಯಗಳ ಒಗ್ಗೂಡಿಸುವಿಕೆಗೆ ‘ಕೊಂಕನಿಜ್’ ವೇದಿಕೆ; ಸೆ.18ರಂದು ‘ನಾಚೋಂ ಯಾ ಕುಂಪಸಾರ್’ ಚಿತ್ರ ಪ್ರದರ್ಶನ

ಮಂಗಳೂರು:ವಿಶ್ವದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ವೇದಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ ಎಂದು ಮೆಂಡೋನ್ಸಾ ಫೌಂಡೇಶನ್‌ನ ಡಾ. ವಿವೇಕ್ ಮಂಡೋನ್ಸಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕೊಂಕಣಿ ಸಮುದಾಯಗಳ ನಡುವಿನ ಭಾಷಾ ಉಪಭಾಷೆಗಳು, ವಿವಿಧ ಲಿಪಿಗಳು ಹಾಗೂ ಭೌಗೋಳಿಕ ಗಡಿಗಳಿಂದ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿ, ಸಾಮಾನ್ಯ ಸಾಂಸ್ಕೃತಿಕ ಬಂಧವನ್ನು ಬಲಪಡಿಸುವುದು ವೇದಿಕೆಯ ಉದ್ದೇಶವಾಗಿದೆ. ಕೊಂಕಣಿ ಭಾಷೆ, ಆಹಾರ,…

Read More
error: Content is protected !!