ಸಂಭ್ರಮದಿಂದ ನಡೆದ ‘ಕೇಸರ್‌ಡ್ ಒಂಜಿ ದಿನ 2026’: ಮಂಡೆಕಾಪಿನಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ಸಾಧಕರಿಗೆ ಸನ್ಮಾನ

ಉಪ್ಪಳ : ಯುವಕ ವೃಂದ ಮಂಡೆಕಾಪು ಇದರ ವತಿಯಿಂದ ಕೇಸರ್ ಡ್ ಒಂಜಿ ದಿನ 2026 ಕಾರ್ಯಕ್ರಮವು ಮಂಡೆಕಾಪು ಸಂಜೀವ ಮೂಲ್ಯರ ಗದ್ದೆಯಲ್ಲಿ ನಡೆಯಿತು ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷ ದಿಲೀಪು ಮಂಡೆಕಾಪು ವಹಿಸಿದರು ,ಡಾ! ಹರೀಶ್ ಬೊಟ್ಟಾರಿ ಕೊಡುಗೈ ದಾನಿ ,ಉದ್ಯಮಿ ಇವರು ಸಭೆಯನ್ನು ಉದ್ಘಾಟಿಸಿದರು. ಓಡುವಾರು ಬಂಜನ್ ತರವಾಡಿನ ಪೂಜಾರಿ ಶ್ರೀ ರಾಮ ತೋಡರ್, ಸಂಜೀವ ಮೂಲ್ಯ ಮಂಡೆಕಾಪು, ಜಯಂತಿ ಮಂಡೆಕಾಪು ಉಪಸ್ಥಿತಿ ಇದ್ದರು ತದನಂತರ ದುರ್ಗಾ ಶಕ್ತಿ…

Read More

SFI ನೂತನ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಸರ್ವಾನುಮತದಿಂದ ಆಯ್ಕೆ

ಭಾರತ ವಿದ್ಯಾರ್ಥಿ ಫೆಡರೇಶನ್ (SFI)ನ ದ.ಕ.ಜಿಲ್ಲಾ ಸಮಾವೇಶವು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಬಿ ಕೆ ಇನಾಜ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಜಿಲ್ಲೆಯ ಜನಪದ ವಿದ್ವಾಂಸರೂ,ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಸಮಾವೇಶವನ್ನು ಉದ್ಘಾಟಿಸಿದರೆ,SFI ಕರ್ನಾಟಕ ರಾಜ್ಯಾಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್ ರವರು ಇಡೀ ಸಮಾವೇಶವು ಸುಸೂತ್ರವಾಗಿ ನಡೆಯುವಂತೆ ಮಾರ್ಗದರ್ಶನ ನೀಡಿದರು. ಸಮಾವೇಶವು ಮುಂದಿನ ಸಾಲಿಗೆ ನೂತನ ದ.ಕ‌.ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು. ನೂತನ ಅಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ ಹಾಗೂ ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರುರವರು ಸರ್ವಾನುಮತದಿಂದ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ…

Read More

ಹಂಪನಕಟ್ಟೆಯಲ್ಲಿ ಭೀಕರ ಬೆಂಕಿ ಅವಘಡ: ಶೂ ಅಂಗಡಿ ಸಂಪೂರ್ಣ ಭಸ್ಮ

ಮಂಗಳೂರು, ಜು. 28: ಮಂಗಳೂರು ನಗರದ ಹಂಪನಕಟ್ಟೆ ಪ್ರದೇಶದಲ್ಲಿರುವ ಯುರೋಪ್ ಶೂ ಅಂಗಡಿಗೆ ಸೋಮವಾರ ಬೆಳಗ್ಗೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣವಾಗಿ ಭಸ್ಮಗೊಂಡಿದೆ. ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಇನ್ನೆರಡು ಅಂಗಡಿಗಳಿಗೂ ವ್ಯಾಪಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಅವಘಡದಿಂದ ಅಪಾರ ಪ್ರಮಾಣದ ಆಸ್ತಿ ಹಾನಿ ಸಂಭವಿಸಿದೆ. ಬೆಂಕಿಯ…

Read More

ಗಂಗಾಧರ ಪಾಂಗಳ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಜು. 28: ಬೈಕಂಪಾಡಿಯ ಮೀನಕಳಿಯ ಬಳಿ 12 ವರ್ಷಗಳ ಹಿಂದೆ ಮೀನುಗಾರ ಮುಖಂಡ ಗಂಗಾಧರ ಪಾಂಗಳ (55) ಅವರನ್ನು ವಾಹನ ಡಿಕ್ಕಿ ಹೊಡೆಸಿ ಹತ್ಯೆಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಹಾಗೂ ಪುಷ್ಪರಾಜ್ (47) ಶಿಕ್ಷೆಗೆ ಗುರಿಯಾದ ಆರೋಪಿಗಳು. ದೇವಸ್ಥಾನ ಹಾಗೂ ಶಾಲಾ ಕಟ್ಟಡ…

Read More

ರಾಜ್ಯಪಾಲರ ಪ್ರವಾಸ: ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಳಂಬ ಸಾಧ್ಯತೆ

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಎರಡು ದಿನಗಳ ಮಧ್ಯಪ್ರದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ 20 ಖಾಲಿ ಸ್ಥಾನಗಳ ಭರ್ತಿಗೆ ಅಂತಿಮ ನಿರ್ಧಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಾತ್ರಿ ಹೈಕಮಾಂಡ್‌ನ್ನು ಭೇಟಿ ಮಾಡಿ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಪಡೆಯುವ ನಿರೀಕ್ಷೆಯಿದೆ. ಆದರೆ ರಾಜ್ಯಪಾಲರ ಅನುಪಸ್ಥಿತಿಯಿಂದ ಪ್ರಮಾಣವಚನ ಸಮಾರಂಭ ಮುಂದೂಡಲ್ಪಡುವ ಸಾಧ್ಯತೆ ಇದ್ದು, ಅಷ್ಟರವರೆಗೆ ಸಚಿವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ಮೂಲಗಳು…

Read More

ಬ್ಯಾಂಕ್ ಆಫ್ ಬರೋಡಾದ 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಣಕಾಸು ಫಲಿತಾಂಶಗಳು: ಪ್ರಮುಖ ಮುಖ್ಯಾಂಶಗಳು

ಬ್ಯಾಂಕ್ ಆಫ್ ಬರೋಡಾವು 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಬಲಿಷ್ಠ ಆಸ್ತಿ ಗುಣಮಟ್ಟದೊಂದಿಗೆ ತನ್ನ ನಿರಂತರ ಸದೃಢ ಬೆಳವಣಿಗೆಯನ್ನು ಯಶಸ್ವಿಯಾಗಿ ಮುಂದುವರೆಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಜಾಗತಿಕ ವ್ಯವಹಾರವು ಗಣನೀಯವಾಗಿ ಏರಿಕೆಯಾಗಿ ₹30,50,457 ಕೋಟಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ (YoY) 15.4 ಪ್ರತಿಶತದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್‌ನ ಒಟ್ಟು ಜಾಗತಿಕ ಮುಂಗಡಗಳು 17.4 ಪ್ರತಿಶತ ಹಾಗೂ ದೇಶೀಯ ಮುಂಗಡಗಳು 16.1 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿವೆ. ಪ್ರಮುಖವಾಗಿ ಆಟೋ…

Read More

ಕಾರ್ಗಿಲ್ ವಿಜಯ ದಿವಸ: ನಿವೃತ್ತ ಸೈನಿಕ ನಾರಾಯಣ್ ಅವರಿಗೆ ಬಿಜೆಪಿ ವತಿಯಿಂದ ಗೌರವ ಸನ್ಮಾನ

ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಬಿಜೆಪಿ ಮಂಗಳೂರು ನಗರದ ದಕ್ಷಿಣ ಮಂಡಲದ ಸಹಯೋಗದೊಂದಿಗೆ, ಮಂಡಲದ ಯುವ ಮೋರ್ಚಾ ನೇತೃತ್ವದಲ್ಲಿ, 31 ನೇ ವಾರ್ಡಿನ ಶಕ್ತಿಕೇಂದ್ರ ಪ್ರಮುಖರು, ನಿವೃತ್ತ ಸೈನಿಕರು ಹಾಗೂ ಬಿಜೈ ಆನೆಗುಂಡಿ ನಿವಾಸಿಯಾದ ಶ್ರೀಯುತ ನಾರಾಯಣ್ ರವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಶ್ರೀಯುತರು ಇಡೀ ಬಿಜೈ ಪರಿಸರದ ಸಾರ್ವಜನಿಕರೊಂದಿಗೆ ಉತ್ತಮ ಭಾಂಧವ್ಯ ಹೊಂದಿರುವವರು. ಯಾರು ಬರಲಿ, ಬಿಡಲಿ ಪಕ್ಷದ ಕಾರ್ಯಕ್ಕಾಗಿ ಮನೆ ಮನೆಯ ಸಂಪರ್ಕವೆಂದರೆ ಸದಾ…

Read More

ಮಾಧ್ಯಮ ಕ್ಷೇತ್ರದ ಸೇವೆಗೆ ಗಿರೀಶ್ ಪಿಎಂ ಅವರಿಗೆ ಕನ್ನಡ ಪಯಸ್ವಿನಿ ಮಾಧ್ಯಮ ರತ್ನ ಪ್ರಶಸ್ತಿ-2026

ಮಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಗುರುತಿಸಿ ಪತ್ರಕರ್ತ ಗಿರೀಶ್ ಪಿಎಂ ಅವರಿಗೆ “ಕನ್ನಡ ಪಯಸ್ವಿನಿ ಮಾಧ್ಯಮ ರತ್ನ ಪ್ರಶಸ್ತಿ-2026” ಪ್ರದಾನ ಮಾಡಲಾಯಿತು. ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಬಾಲಕೃಷ್ಣ ಎಸ್. ಮದ್ದೋಡಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಗಿರೀಶ್ ಪಿಎಂ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿರೀಶ್…

Read More

ಬಂಗ್ರ ಮಂಜೇಶ್ವರ ಶಾಲೆಯಲ್ಲಿ ‘ರೀಡರ್ಸ್ ಬೂಸ್ಟರ್’ ಇಂಗ್ಲಿಷ್ ಭಾಷಾ ಪ್ರೋತ್ಸಾಹಕ ಕಾರ್ಯಕ್ರಮಕ್ಕೆ ಚಾಲನೆ

ಮಂಜೇಶ್ವರ: ಮಕ್ಕಳ ಇಂಗ್ಲಿಷ್ ಭಾಷಾ ಕಲಿಕೆಯನ್ನು ತರಗತಿ ಕೊಠಡಿಗಳಾಚೆ ವಿಸ್ತರಿಸುವ ನಿಟ್ಟಿನಲ್ಲಿ, ಬಂಗ್ರ ಮಂಜೇಶ್ವರ ಶಾಲೆಯಲ್ಲಿ ಒಂದು ತಿಂಗಳ ವಿಶೇಷ ಇಂಗ್ಲಿಷ್ ಭಾಷಾ ಪ್ರೋತ್ಸಾಹಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಓದುವುದು, ಗ್ರಹಿಕೆ, ಮಾತನಾಡುವುದು ಮತ್ತು ಬರವಣಿಗೆ ಮುಂತಾದ ನೈಪುಣ್ಯಗಳನ್ನು ಬೆಳೆಸುವುದು ಇದರ ಗುರಿಯಾಗಿದೆ. ​ಮಂಜೇಶ್ವರ ಎ.ಇ.ಒ. ನಾರಾಯಣ ಡಿ. ಕಾರ್ಯಕ್ರಮ ಉದ್ಘಾಟಿಸಿ, ಇಂಗ್ಲಿಷ್ ಕಲಿಕೆ ಭಯದ ವಿಷಯವಾಗದೆ ಆತ್ಮವಿಶ್ವಾಸದ ಭಾಷೆಯಾಗಬೇಕು ಎಂದರು. ಯೋಜನೆಯ ಭಾಗವಾಗಿ ‘Readers’ Booster’ ವರ್ಕ್‌ಶೀಟ್ ಪುಸ್ತಕಗಳನ್ನು ವಿಜಯ ರೂರಲ್ ಡೆವಲಪ್‌ಮೆಂಟ್ ಫೌಂಡೇಶನ್ ಮತ್ತು…

Read More

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ರೂಪ ಶ್ರೀ ವರ್ಕಾಡಿಗೆ ಗಣೇಶ್ ಪಾವೂರ ಅಭಿನಂದನೆ

ಕಾಸರಗೋಡು, ಜುಲೈ 27: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ತುಳು ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪ ಶ್ರೀ ವರ್ಕಾಡಿ ಅವರನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹಾಗೂ ಚಲನಚಿತ್ರ ನಟ ಗಣೇಶ್ ಪಾವೂರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ಪಾವೂರು, “ಮಾಮಿಮರ್ಮೋಲ್ ಬ್ಯಾರಿ ಭಾಷೆಯ ಚಿತ್ರದಲ್ಲಿ ರೂಪ ಶ್ರೀ ವರ್ಕಾಡಿ ಅತ್ಯುತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರಿಗೆ ರಾಷ್ಟ್ರೀಯ ಮಟ್ಟದ ಗೌರವ…

Read More
error: Content is protected !!