ಅನ್ಯ ಇಲಾಖೆಯ ಕೆಲಸ ವಹಿಸದಂತೆ ಮತ್ತು ಹೊರಡಿಸಿದ ಅದೇಶ ಹಿಂಪಡೆಯುವಂತೆ ಗ್ರಾ. ಪಂ. ಸಿಬ್ಬಂದಿಗಳ ಮನವಿ

ಬಂಟ್ವಾಳ: ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ನಿಯೋಜಿಸಿರುವ ಆದೇಶವನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಶ್ರೇಯೋಭಿವೃದ್ದಿ ಸಂಘ ( ಆರ್.ಡಿ.ಪಿ.ಆರ್.) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ತಾ.ಪಂ.ನ ಆಡಳಿತ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ ಶಂಕರ್ ಅಳ್ವ ಅವರ ಮೂಲಕ ಮನವಿ ಸಲ್ಲಿಸಿದೆ. ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರಿಗೆ ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು…

Read More

‘ಬಿನ್ನವತ್ತಳೆ’ ಪುನರ್ಮುದ್ರಣಕ್ಕೆ ಚಾಲನೆ: ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಶಿವರಾಮ ಕಾಸರಗೋಡು ಸಂಕಲ್ಪ

1997ರಲ್ಲಿ ಪ್ರಕಟಗೊಂಡ ರಾಮಕ್ಷತ್ರಿಯ ಸಮಾಜದ ಪ್ರಕಟಿತ ಬರಹಗಳನ್ನೊಳಗೊಂಡ ಸಂಪಾದಿತ ಕೃತಿ “ಬಿನ್ನವತ್ತಳೆ” ಹಾಗೂ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ವಿಳಾಸದ ಡೈರೆಕ್ಟರಿ – 2026 ಪುನರ್ ಮುದ್ರಣಕ್ಕೆ ರೂ 10ಲಕ್ಷ ವೆಚ್ಚ- ಸಂಘ ಸಂಸ್ಥೆಗಳು, ಬಂಧು ಮಿತ್ರರು, ದಾನಿಗಳ ನೆರವು. ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಶಿವರಾಮ ಕಾಸರಗೋಡು ಸಮಾನ ಮನಸ್ಕರ ತೀರ್ಮಾನರಾಮಕ್ಷತ್ರಿಯ ಸಮಾಜದ ಸಾಹಿತ್ಯ,ಸಾಂಸ್ಕೃತಿಕ ಮತ್ತು ಇತಿಹಾಸದ ಚಾರಿತ್ರಿಕ ಹಿನ್ನೆಲೆಯ ಕುರಿತು ಮಹತ್ವದ ದಾಖಲೆಗಳನ್ನೊಳಗೊಂಡ ಸಂಪಾದಿತ ಕೃತಿಯಲ್ಲಿ ಸರಕಾರದ ದಾಖಲೆ ಪತ್ರಗಳು, ಸಂಶೋಧನಾ ಲೇಖನಗಳು,…

Read More

₹5.5 ಕೋಟಿ ಡ್ರಗ್ಸ್ ಪ್ರಕರಣ; ಮಂಗಳೂರು ಸಿಸಿಬಿ ಆರೋಪಿ ವಿದೇಶಕ್ಕೆ ಪರಾರಿ

ಮಂಗಳೂರು:ಬಾಗಲಕೋಟೆಯಲ್ಲಿ ₹5.5 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಮಂಗಳೂರು ಸಿಸಿಬಿ ಪೊಲೀಸರಿಗೆ ಬೇಕಾಗಿರುವ ನಾಲ್ಕನೇ ಆರೋಪಿ ಜಲೀಲ್ @ ಬಾಬಾ (42) ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳ್ತಂಗಡಿ ಮೂಲದ ಜಲೀಲ್, ಆ್ಯಂಬುಲೆನ್ಸ್‌ನ್ನೇ ಡ್ರಗ್ಸ್ ಸಾಗಾಟ ಮತ್ತು ಪೆಡ್ಲಿಂಗ್‌ಗೆ ಬಳಸುತ್ತಿದ್ದ ಆರೋಪ ಎದುರಿಸುತ್ತಿದ್ದು, ಕಳೆದ ಎಂಟು ದಿನಗಳಿಂದ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ತನ್ನ ಬಳಿಯಿದ್ದ ಎರಡು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರ ಸಂಪರ್ಕದಿಂದ ದೂರ ಉಳಿದಿದ್ದಾನೆ…

Read More

ಭಾರತದ ವಿಜಯಕ್ಕೆ ಸಾಕ್ಷಿಯಾದ ಟಿ-55 ಯುದ್ಧ ಟ್ಯಾಂಕ್ ಕದ್ರಿ ಯುದ್ಧ ಸ್ಮಾರಕದಲ್ಲಿ ಅನಾವರಣ

ಮಂಗಳೂರು :ಇದು ಬರೀ ಉಕ್ಕಿನ ವಸ್ತುವಲ್ಲ, ಸೈನಿಕರ ಸಾಹಸಗಾಥೆಯ ಜೀವಂತ ಸಾಕ್ಷಿ, ಯುದ್ದದಲ್ಲಿ ಭಾಗಿಯಾದ ಯುದ್ದ ಟ್ಯಾಂಕ್ ಮಂಗಳೂರಿಗೆ ಬಂದಿದೆ. ಭಾರತದ ವಿಜಯಕ್ಕೆ ಸಾಕ್ಷಿಯಾಗಿ ನಿಂತಿದೆ. 1971ರ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದಲ್ಲದೆ, ನಾಲ್ಕು ದಶಕ ಭಾರತೀಯ ಸೇನೆಗೆ ಸೇವೆ ನೀಡಿದ್ದ ಟಿ-55 ಯುದ್ಧ ಟ್ಯಾಂಕ್ ಮಂಗಳೂರು ನಗರದ ಕದ್ರಿಯ ಯುದ್ಧ ಸ್ಮಾರಕದ ಬಳಿ ಆದಿತ್ಯವಾರ ಅನಾವರಣಗೊಂಡಿತು. ಇದೇ ವೇಳೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇದು ಕೇವಲ ಉಕ್ಕಿನ ವಸ್ತುವಲ್ಲ. ಬರೀ ಯಂತ್ರವೂ ಅಲ್ಲ. ಪ್ರದರ್ಶನಕ್ಕಿಟ್ಟಿರುವ…

Read More

ಮೊಡಂಕಾಪು ದೇವಸ್ಥಾನ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಹಾಗೂ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಕುಂಬ್ಳೆ ನಿವಾಸಿ ಸುರೇಶ್ ಹಾಗೂ ಶಾಂತಿಯಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿ ಭಕ್ತರು ಸುಮಾರು ನಾಲ್ಕು ದಶಕಗಳಿಂದ ಸಮರ್ಪಿಸಿದ್ದ ತಾಮ್ರ ಹಾಗೂ ಪಿತ್ತಳದ ಪೂಜಾ ಪರಿಕರಗಳು ಕಳವಾಗಿರುವುದು ಬೆಳಕಿಗೆ…

Read More

ನೀಟ್ ಪರೀಕ್ಷಾ ಸೋರಿಕೆ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸೋನಂ ವಾಂಗ್ಚುಕ್ ಆಸ್ಪತ್ರೆಯಿಂದ ಬಿಡುಗಡೆ

ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮಾನವ ಹಕ್ಕುಗಳ ಹೋರಾಟಗಾರ ಸೋನಂ ವಾಂಗ್ಚುಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೆಲವೇ ಸಮಯದಲ್ಲಿ ಅವರು ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ. ತಮ್ಮೊಂದಿಗೆ ನಿಂತು ಬೆಂಬಲಿಸಿದ ಎಲ್ಲರಿಗೂ ಸೋನಂ ವಾಂಗ್ಚುಕ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮೊದಲು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಗುರುಗ್ರಾಮದ ಮೆದಾಂತಾ ಖಾಸಗಿ ಆಸ್ಪತ್ರೆಗೆ…

Read More

ಆಡು ಬಡಿದು ಬೈಕ್ ಸವಾರ ಗಂಭೀರ ಗಾಯಗೊಂಡ ಪ್ರಕರಣ : ಪರಿಹಾರಕ್ಕೆ ಮಹತ್ವದ ತೀರ್ಪು

ಕಾಸರಗೋಡು : ಆಡು ಅಡ್ಡ ಬಂದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಾಳುವಿಗೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ವಿಮಾ ಕಂಪೆನಿಗೆ ವಿಧಿಸಿದೆ. ಸೀತಾoಗೋಳಿ ನಿವಾಸಿ ಫ್ರಾನ್ಸಿಸ್ ಪಾಸ್ಕಲ್ ಡಿ” ಸೋಜಾ ಅವರು ದೂರುದಾರರಾಗಿದ್ದಾರೆ. ಪಾಸ್ಕಲ್ ಡಿ” ಸೋಜಾ ಅವರು ಕಳತ್ತೂರು ಎಂಬಲ್ಲಿಂದ ಕಟ್ಟತ್ತಡ್ಕ ದಾರಿಯಾಗಿ ಸೀತಾoಗೋಳಿಗೆ ತನ್ನ ಬೈಕ್ ನಲ್ಲಿ ಬರುತ್ತಿದ್ದಾಗ ಅವಘಡ ಸಂಭವಿಸಿತ್ತು. ಕಟ್ಟತ್ತಡ್ಕ ಪಳ್ಳo ಸಮೀಪ ತಲುಪಿದಾಗ ಆಡುಗಳ ಹಿಂಡೊಂದು ರಸ್ತೆಯಲ್ಲಿ ಅಸ್ತವ್ಯಸ್ತವಾಗಿ ಚಲಿಸುತ್ತಿದ್ದುದು…

Read More

ಆಸೂತ್ರಣ ಮಂಡಳಿ ಪಿಎಸ್‌ಸಿ ಪರೀಕ್ಷಾ ಅಕ್ರಮ: ಉನ್ನತ ಅಧಿಕಾರಿಗಳ ಕೈವಾಡದ ಬಗ್ಗೆ ಆಂತರಿಕ ವಿಜಿಲೆನ್ಸ್ ಗಂಭೀರ ವರದಿ

ಆಸೂತ್ರಣ ಮಂಡಳಿಗೆ (Planning Board) ನಡೆದ ಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಆಂತರಿಕ ವಿಜಿಲೆನ್ಸ್ ಮಹತ್ವದ ಮತ್ತು ಗಂಭೀರ ಅಂಶಗಳನ್ನು ಪತ್ತೆಹಚ್ಚಿದೆ. ಪರೀಕ್ಷಾ ಅಕ್ರಮದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಂಪರ್ಕವಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ. ಎಸ್‌ಪಿ ಸೀನಿ ಎಫ್. ಡೆನ್ನಿಸ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ ಆಂತರಿಕ ವಿಜಿಲೆನ್ಸ್ ತನಿಖೆಯ ವರದಿಯನ್ನು ಪಿಎಸ್‌ಸಿಗೆ ಸಲ್ಲಿಸಲಾಗಿತ್ತು. ಈ ವರದಿಯಲ್ಲಿ ಪರೀಕ್ಷಾ ವಿಭಾಗದ ಉನ್ನತ ಅಧಿಕಾರಿಗಳೇ ಅಕ್ರಮದಲ್ಲಿ…

Read More

ಗ್ರಾಮೀಣ ಯುವಜನತೆಗೆ AI ತಂತ್ರಜ್ಞಾನದ ಸ್ಪರ್ಶ

ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳು ಒಂದಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ – ಡಾ. ಶಾಲಿನಿ ರಜನೀಶ್ ಕೃತಕ ಬುದ್ಧಿಮತ್ತೆ (Artificial Intelligence – AI) ರೂಪದ ಆಧುನಿಕ ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಪ್ರತಿಭಾವಂತ ಯುವಕ-ಯುವತಿಯರಿಗೂ ತಲುಪಿದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಐ.ಎ.ಎಸ್. ತಿಳಿಸಿದರು. ​ಅವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ‘ಸತ್ಯಸಾಯಿ ಗ್ರಾಮ’ದಲ್ಲಿ ಏರ್ಪಡಿಸಲಾಗಿದ್ದ ‘ರೂರಲ್…

Read More

ಕಾಸರಗೋಡು ಹೋಟೆಲ್‌ಗಳ ಮೇಲೆ ನಗರಸಭೆ ದಾಳಿ: ಹಳಸಿದ ಆಹಾರ ವಶಕ್ಕೆ, ಅಂಗಡಿಗಳಿಗೆ ನೋಟಿಸ್

ಕಾಸರಗೋಡು ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಹಲವು ಹೋಟೆಲ್‌ಗಳಿಂದ ಹಳಸಿದ ಹಾಗೂ ಮಾನವ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಓಷನ್ ಸೀ ಫುಡ್, ಲೆ ಬಾಂಬೂ ರೆಸ್ಟೋರೆಂಟ್, ಹೋಟೆಲ್ ಡೀಲಕ್ಸ್ ಹಾಗೂ ಚಾಯ ಕಥಾ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ನಡೆಸಿ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಗ್ಯ ನಿರೀಕ್ಷಕ ಮಧು ಕೆ. ಹಾಗೂ ಪಿಎಚ್‌ಐಗಳಾದ ಶೀನಾ, ವೈಶಾಖ್, ಮುಬಶಿರಾ ಮತ್ತು ನೌಫಿಯಾ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ. ನಿಯಮ ಉಲ್ಲಂಘಿಸಿದ…

Read More
error: Content is protected !!