ಜಂತರ್ ಮಂತರ್ ಪ್ರತಿಭಟನೆಗೆ ಬೆಂಬಲ ನೀಡಿದವರಿಗೆ ಸಿಜೆಪಿ ಧನ್ಯವಾದ

ನವದೆಹಲಿ:ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ ಎಲ್ಲರಿಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಪರವಾಗಿ ನಾಯಕ ಅಭಿಜಿತ್ ದೀಪ್ಕೆ ಧನ್ಯವಾದ ಸಲ್ಲಿಸಿದ್ದಾರೆ. “ಇದು ಕೇವಲ ಆರಂಭ ಮಾತ್ರ. ಕಾಕ್ರೋಚ್ ಜನತಾ ಪಾರ್ಟಿಯ ಪಯಣ ಇನ್ನೂ ಬಹಳ ದೂರ ಸಾಗಬೇಕಿದೆ” ಎಂದು ಅವರು ಹೇಳಿದ್ದಾರೆ. “ನಿನ್ನೆ ರಾತ್ರಿ ಬಹಳ ದಿನಗಳ ನಂತರ ನೆಮ್ಮದಿಯಾಗಿ ನಿದ್ರೆ ಮಾಡಿದೆ. ಕಳೆದ 37 ದಿನಗಳು ನಮ್ಮೆಲ್ಲರಿಗೂ ಅತ್ಯಂತ ಕಠಿಣವಾಗಿದ್ದವು. ಎಲ್ಲರೂ ನಮ್ಮನ್ನು ಅನುಮಾನಿಸಿದಾಗ ನೀವು ನಮ್ಮೊಂದಿಗೇ ನಿಂತಿದ್ದೀರಿ. ನಮ್ಮನ್ನು ಟೀಕಿಸಿದವರಿಗೂ ಧನ್ಯವಾದಗಳು….

Read More

ಸಂಗೀತ ಲೋಕದ ಗಾನಕೋಗಿಲೆ ಕೆ. ಎಸ್. ಚಿತ್ರ ಅವರಿಗೆ ಇಂದು 63ನೇ ಜನ್ಮದಿನ

ಸಂಗೀತ ಲೋಕದ ಗಾನಕೋಗಿಲೆ ಕೆ. ಎಸ್. ಚಿತ್ರ ಅವರಿಗೆ ಇಂದು 63ನೇ ಜನ್ಮದಿನನಾಲ್ಕು ದಶಕಗಳಿಂದ ಮಧುರ ಕಂಠದ ಮೂಲಕ ಸಂಗೀತಾಸಕ್ತರ ಮನಸೂರೆಗೊಂಡ ದಿಗ್ಗಜ ಹಿನ್ನೆಲೆ ಗಾಯಕಿಗೆ ಶುಭಾಶಯಗಳ ಮಹಾಪೂರ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಮಧುರ ಕಂಠದ ಮೂಲಕ ಸಂಗೀತಾಸಕ್ತರ ಮನಸ್ಸನ್ನು ಸ್ಪರ್ಶಿಸುತ್ತಾ ಬಂದಿರುವ ಸಂಗೀತ ಲೋಕದ ಗಾನಕೋಗಿಲೆ ಕೆ. ಎಸ್. ಚಿತ್ರ ಅವರಿಗೆ ಇಂದು 63ನೇ ಜನ್ಮದಿನ. ಆಳವಾದ ಭಾವ, ವಿಶಾಲ ಸಂಗೀತ ಜ್ಞಾನ ಮತ್ತು ಹೃದಯಸ್ಪರ್ಶಿ ಗಾಯನವೇ ಕೆ. ಎಸ್. ಚಿತ್ರ ಅವರ…

Read More

ಮಾದಕ ವಸ್ತು ಹಣಕಾಸು ವ್ಯವಹಾರ ಪ್ರಕರಣ: ಬಂಧಿತ ಎರಡನೇ ಶಿಕ್ಷಕಿಯನ್ನೂ ಸೇವೆಯಿಂದ ವಜಾ

ಕೋಝಿಕ್ಕೋಡ್ ನಲ್ಲಿ ಮಾದಕ ವಸ್ತುಗಳ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾದ ಎರಡನೇ ಶಿಕ್ಷಕಿ ಕಾವ್ಯ ಅವರನ್ನು ಸಹ ಸೇವೆಯಿಂದ ವಜಾಗೊಳಿಸಲಾಗಿದೆ. ಕೂರಾಚುಂಡು ನಿವಾಸಿಯಾದ ಕಾವ್ಯ ಅವರು ಪೇರಾಂಬ್ರಾ ಬಿಆರ್‌ಸಿಯಲ್ಲಿ (BRC) ವಿಶೇಷ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಪ್ರಕರಣದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಶಿಕ್ಷಕಿ ಕೀರ್ತನಾ ಅವರನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ವಡಕರ ಪೊಲೀಸರು ಕಾವ್ಯ ಮತ್ತು ಮರುತೋಂಕರ ನಿವಾಸಿಯಾದ ಕೀರ್ತನಾ ಅವರನ್ನು ಬಂಧಿಸಿದ್ದರು. ಆರಂಭದಲ್ಲಿ ಬಂಧಿತಳಾದ ಕೀರ್ತನಾ ಅವರ ವಿಚಾರಣೆಯಿಂದಲೇ ತನಿಖೆ…

Read More

ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ; ಲಾಠಿಚಾರ್ಜ್ ಸಮರ್ಥಿಸಲಾಗದು

ರಾಜಧಾನಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಸಿಜೆಪಿ (CJP) ಸಂಸತ್ ಮೆರವಣಿಗೆ ವೇಳೆ ಪೊಲೀಸರು ಕೈಗೊಂಡ ಕ್ರಮದ ಕುರಿತು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಪೊಲೀಸರು ಅತಿಯಾದ ಅಧಿಕಾರವನ್ನು ಬಳಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವುದು ಸಂವಿಧಾನದಿಂದ ಖಾತರಿಪಡಿಸಲಾದ ಮೂಲಭೂತ ಹಕ್ಕು ಎಂದು ಪೀಠವು ತಿಳಿಸಿತು. ಪ್ರತಿಭಟನೆಗಳ ವೇಳೆ…

Read More

ಕಾಸರಗೋಡಿನಲ್ಲಿ ಗಡಿನಾಡು ಕನ್ನಡ ಸಮ್ಮೇಳನ-2026 ಯಶಸ್ವಿಕನ್ನಡ ಉಳಿವಿಗೆ ಮನೆಮನೆಯಲ್ಲೇ ಕನ್ನಡದ ಅನುಷ್ಠಾನ ಅಗತ್ಯ: ಎಡನೀರು ಶ್ರೀ

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026 ರಜತ ಸಂಭ್ರಮದ ಅಂಗವಾಗಿ ವಿಜೃಂಭಣೆಯಿಂದ ನಡೆಯಿತು. ಪ್ರಥಮ ಚುನಾಯಿತ ಕ.ಸಾ.ಪ. ಕಾಸರಗೋಡು ಜಿಲ್ಲಾಧ್ಯಕ್ಷೆ ದಿವಂಗತ ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ. ಸಿ. ಸೋಮಶೇಖರ್, ಐಎಎಸ್ ವಹಿಸಿದ್ದರು. ಕಾರ್ಯಕ್ರಮವನ್ನು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ…

Read More

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ

ಮಂಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಯನ್ನು ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ನಡೆಸುವ ಉದ್ದೇಶದಿಂದ ಎಐಸಿಸಿ, ಕೆಪಿಸಿಸಿ ಹಾಗೂ ರಾಜ್ಯ ಕಾಂಗ್ರೆಸ್ ವತಿಯಿಂದ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ವೀಕ್ಷಕರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಸಭೆ ನಡೆಸಲಿದ್ದು, ಬಳಿಕ ಮಾಧ್ಯಮ ಗೋಷ್ಠಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಸರ್ವಸದಸ್ಯರ ಸಭೆ ನಡೆಯಲಿದ್ದು, ಮಧ್ಯಾಹ್ನದ ಬಳಿಕ…

Read More

ಜಿಡೆಕಲ್ಲು ಸರಕಾರಿ ಕಾಲೇಜಿಗೆ ಹೆಚ್ಚುವರಿ ಬಸ್ ಗೆ ವಿದ್ಯಾರ್ಥಿಗಳಿಂದ ಶಾಸಕ ಅಶೋಕ್ ರೈ ಗೆ ಮನವಿ

ಪುತ್ತೂರು: ಜಿಡೆಕಲ್ಲು ಪ್ರಥಮ ದರ್ಜೆ ಸರಕಾರಿ ಕಾಲೇಜಿಗೆ ತೆರಳಲು ಹೆಚ್ಚುವರಿ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಶಾಸಕ ಅಶೋಕ್ ರೈ ಗೆ ಮನವಿ ಸಲ್ಲಿಸಿದರು. ಶಾಸಕರ ಕಚೇರಿಗೆ ಬಂದು ಮನವಿ ಸಲ್ಲಿಸಿದ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಸುಮಾರು 150 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈಗಾಗಲೇ ಬೆಳಗ್ಗೆ ಮತ್ತು ಸಂಜೆ ಒಂದು ಬಸ್ಸಿನ ವ್ಯವಸ್ಥೆ ಇದ್ದು, ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ಒಂದೇ ಬಸ್ಸಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೆಳಗ್ಗೆ ಮತ್ತು…

Read More

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜುಲೈ 29ರಂದು ಗುರುಪೂರ್ಣಿಮೆ ಆಚರಣೆ

ಮಂಗಳೂರು: ಐತಿಹಾಸಿಕ ಪ್ರಸಿದ್ಧಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜುಲೈ 29ರಂದು ಗುರುಪೂರ್ಣಿಮೆಯ ಪುಣ್ಯ ದಿನದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುರುಪೂರ್ಣಿಮೆಯ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ರುದ್ರಪಾರಾಯಣ ನಡೆಯಲಿದೆ. ಮಧ್ಯಾಹ್ನ 11.30 ಗಂಟೆಗೆ ಶ್ರೀ ಮತ್ಸೇಂದ್ರನಾಥ, ಶ್ರೀ ಗೋರಕ್ಷನಾಥ ಹಾಗೂ ಶ್ರೀ ಚೌರಂಗಿನಾಥ ಗುರುಗಳಿಗೆ ವಿಶೇಷ ಗುರುಪೂಜೆ ನೆರವೇರಲಿದ್ದು, ಇದೇ ಶುಭ ಸಂದರ್ಭದಲ್ಲಿ ಶ್ರೀ ಮಂಜುನಾಥ ದೇವರಿಗೆ ಏಕಾದಶ ರುದ್ರಾಭಿಷೇಕ ಸಂಪನ್ನಗೊಳ್ಳಲಿದೆ. ಗುರುಪೂರ್ಣಿಮೆಯ ಈ ಪವಿತ್ರ ಪರ್ವದಂದು ಭಕ್ತರು ಹೆಚ್ಚಿನ…

Read More

ಲಯನ್ಸ್ ಕ್ಲಬ್ ಬಂಟ್ವಾಳದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ, ಜುಲೈ 25: ಲಯನ್ಸ್ ಕ್ಲಬ್ ಬಂಟ್ವಾಳದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 25, 2026ರಂದು ಬಂಟ್ವಾಳದ ಇಂದಿರಾ ವಸಂತ ಬಾಳಿಗ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಲಯನ್ ಗೋವರ್ಧನ್ ಶೆಟ್ಟಿ ಅವರು ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ PMCC ಲಯನ್ ವಸಂತ ಶೆಟ್ಟಿ, IPDG ಲಯನ್ ಕುಡ್ಪಿ ಅರವಿಂದ್ ಶೆಣೈ, PDG ಲಯನ್ ಆಲ್ವಿನ್ ಪಟ್ರಾವ್, DCS ಲಯನ್ ಪ್ರಶಾಂತ್ ಶೆಟ್ಟಿ, ಪ್ರಾಂತ್ಯ ಅಧ್ಯಕ್ಷ ಲಯನ್ ಶ್ರೀನಿವಾಸ್ ಪೂಜಾರಿ,…

Read More

ಪೆರಂಪಳ್ಳಿಯಲ್ಲಿ ಕೆಸರ್ ಡೊಂಜಿ ಸಂಭ್ರಮ: ಕೆಸರಿನಲ್ಲಿ ಮಿಂದೆದ್ದ ಯುವಜನತೆ

ಉಡುಪಿ: ಪೆರಂಪಳ್ಳಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾದ ‘ಕೆಸರ್ ಡೊಂಜಿ ದಿನ’ ಕಾರ್ಯಕ್ರಮ ಪೆರಂಪಳ್ಳಿಯ ನೋಳೆ ಲಚ್ಚಿಲ್ ಶ್ರೀ ಪುತ್ತು ನಾಯ್ಕರ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು. ಗ್ರಾಮದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ಹಾಗೂ ಯುವಕ-ಯುವತಿಯರು ಕೆಸರಿನಲ್ಲಿ ಆಟವಾಡಿ, ಪರಸ್ಪರ ಕೆಸರನ್ನು ಎರಚಿಕೊಂಡು ಸಂಭ್ರಮಿಸಿದರು. ಡಿಜೆ ಸಂಗೀತದ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ…

Read More
error: Content is protected !!