ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ; ಸ್ಲ್ಯಾಬ್‌ಗೆ ತೂತು ಕೊರೆದ ಕಳ್ಳರು

ಬಂಟ್ವಾಳ: ಇಲ್ಲಿನ ತಾಲೂಕಿನ ಫರಂಗಿಪೇಟೆಯ ಮಿನೇಜಸ್ ಪ್ಲಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳ್ಳತನದ ಯತ್ನ ನಡೆದಿರುವ ಶಂಕಾಸ್ಪದ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬ್ಯಾಂಕ್ ಶಾಖೆಯ ಮೇಲ್ಭಾಗದಲ್ಲಿರುವ ಕೊಠಡಿಯ ಸ್ಲ್ಯಾಬ್‌ಗೆ ತೂತು (ರಂಧ್ರ) ಕೊರೆದು ಒಳಗಡೆ ನುಗ್ಗಲು ದುಷ್ಕರ್ಮಿಗಳು ಯತ್ನಿಸಿರುವುದು ಪತ್ತೆಯಾಗಿದೆ. ಆದರೆ, ಬ್ಯಾಂಕ್‌ನಿಂದ ಯಾವುದೇ ನಗದು ಅಥವಾ ಇತರೆ ಬೆಲೆಬಾಳುವ ವಸ್ತುಗಳು ಕಳವಾಗಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ…

Read More

ಸೇವಾ ಸಪ್ತಾಹ ಅಂಗವಾಗಿ ಗೋಶಾಲೆಗೆ ಹಸಿ ಹುಲ್ಲು ವಿತರಣೆ

ಬಂಟ್ವಾಳ: ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳದ ಸೇವಾ ಸಪ್ತಾಹದ ಅಂಗವಾಗಿ ವಿಶ್ವಹಿಂದೂ ಪರಿಷದ್–ಭಜರಂಗದಳ ಕುಂಟಲಪಲ್ಕೆ ಘಟಕ, ಬಂಟ್ವಾಳ ಪ್ರಖಂಡದ ವತಿಯಿಂದ ಗೋಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಶೇಷ “ಗೋವಿಗಾಗಿ ಮೇವು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಭಾಗವಾಗಿ ಒಂದು ಪಿಕಪ್ ತುಂಬ ಹಸಿ ಹುಲ್ಲನ್ನು ಪಜೀರು ಗೋಶಾಲೆಗೆ ಹಸ್ತಾಂತರಿಸಲಾಯಿತು. ಗೋಸೇವೆಯನ್ನು ಸಮಾಜದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವೆಂದು ಪರಿಗಣಿಸಬೇಕು ಎಂಬ ಸಂದೇಶದೊಂದಿಗೆ ಈ ಸೇವಾ ಕಾರ್ಯವನ್ನು ಆಯೋಜಿಸಲಾಗಿದ್ದು, ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್…

Read More

ಮಂಜೇಶ್ವರದಲ್ಲಿ ಹಲಸಿನ ಸಂಭ್ರಮ: ಮೂರು ದಿನಗಳ ಮೇಳಕ್ಕೆ ಜನಸಾಗರ, ಯಶಸ್ವಿಯಾಗಿ ತೆರೆ

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿ ಮಂಜೇಶ್ವರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ಮೂರು ದಿನಗಳ ‘ಹಲಸು ಹಣ್ಣಿನ ಮೇಳ’ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜುಲೈ 10ರಿಂದ 12ರವರೆಗೆ ನಡೆದ ಮೇಳಕ್ಕೆ ಸಾವಿರಾರು ಮಂದಿ ಆಗಮಿಸಿ ಹಲಸಿನ ವೈವಿಧ್ಯಮಯ ತಳಿಗಳು, ಖಾದ್ಯಗಳು ಹಾಗೂ ಕೃಷಿ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸುವ ಮೂಲಕ ಮೇಳವನ್ನು ಯಶಸ್ವಿಗೊಳಿಸಿದರು. ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ನಡೆದ ಮೇಳವನ್ನು ಮಂಜೇಶ್ವರ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಉದ್ಘಾಟಿಸಿದ್ದರು….

Read More

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ: ಪಂಚಾಮೃತ ಮಹಾಭಿಷೇಕ ಸೇವೆ ಸಲ್ಲಿಕೆ

ಸುಬ್ರಹ್ಮಣ್ಯ: ರಾಜ್ಯ ಸರ್ಕಾರದ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ಸೋಮವಾರ (ಜುಲೈ 13) ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಚಿವರನ್ನು ದೇವಸ್ಥಾನದ ವತಿಯಿಂದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ದೇವರ ದರ್ಶನ ಪಡೆದ ರೇವಣ್ಣ ಅವರು, ಸ್ವಾಮಿಗೆ ನಡೆದ ಪಂಚಾಮೃತ ಮಹಾಭಿಷೇಕ ಸೇವೆಯಲ್ಲಿ ಪಾಲ್ಗೊಂಡರು. ಮಹಾಮಂಗಳಾರತಿ ವೀಕ್ಷಿಸಿ, ತೀರ್ಥಪ್ರಸಾದ ಸ್ವೀಕರಿಸಿದ ನಂತರ…

Read More

ರಾಜ್ಯ ದತ್ತಾಂಶದ ಸುರಕ್ಷತೆ, ಸೈಬರ್ ಭದ್ರತಾ ಚೌಕಟ್ಟು ಬಲಪಡಿಸುವುದು ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ

ಬೆಂಗಳೂರು:ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಇ-ಆಡಳಿತ ಕೇಂದ್ರ (CeG), ಕರ್ನಾಟಕದ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ (CySecK) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗದ ಸಹಯೋಗದೊಂದಿಗೆ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ರಾಜ್ಯ ದತ್ತಾಂಶಕ್ಕಾಗಿ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವುದು ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಮಹತ್ವದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ​ಕರ್ನಾಟಕದ ಡಿಜಿಟಲ್ ಆಡಳಿತ ವ್ಯವಸ್ಥೆಯಲ್ಲಿ ಸೈಬ‌ರ್ ಭದ್ರತೆಯನ್ನು ಬಲಪಡಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು 30ಕ್ಕೂ ಹೆಚ್ಚು ಇಲಾಖೆಗಳು, ನಿಗಮಗಳು,…

Read More

ಇಂಗ್ಲಿಷ್ ಚಾನೆಲ್ ಈಜಿದ ಮಂಗಳೂರಿನ ಮೊದಲ ವ್ಯಕ್ತಿ: ಸಾಧನೆಯ ಯಶೋಗಾಥೆ ಹಂಚಿಕೊಂಡ ಡಾ. ಗುರುಪ್ರಸಾದ್ ಭಟ್

ಮಂಗಳೂರು:ವಿಶ್ವದ ಅತ್ಯಂತ ಸವಾಲಿನ ಸಮುದ್ರ ಮಾರ್ಗಗಳಲ್ಲಿ ಒಂದಾದ ಇಂಗ್ಲಿಷ್ ಚಾನೆಲ್ ಅನ್ನು ಆರು ಸದಸ್ಯರ ರಿಲೇ ತಂಡದೊಂದಿಗೆ ಜುಲೈ 3ರಂದು ಯಶಸ್ವಿಯಾಗಿ ಈಜಿದ ಮಂಗಳೂರಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಖ್ಯಾತ ಈಜುಪಟು ಡಾ. ಗುರುಪ್ರಸಾದ್ ಭಟ್, ತಮ್ಮ ಸಾಧನೆಯ ಅನುಭವವನ್ನು ಸೋಮವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ಇಂಗ್ಲಿಷ್ ಚಾನೆಲ್ ಈಜು ವಿಶ್ವದ ಅತ್ಯಂತ ಕಠಿಣ ಸಾಹಸಗಳಲ್ಲಿ ಒಂದಾಗಿದೆ. 13ರಿಂದ 14 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ, ಅಟ್ಲಾಂಟಿಕ್ ಮಹಾಸಾಗರ ಮತ್ತು ಉತ್ತರ…

Read More

98ನೇ ವಯಸ್ಸಿನಲ್ಲೂ ಕನ್ನಡ ಸೇವೆಯ ಜ್ಯೋತಿ: ಹಿರಿಯ ಹೋರಾಟಗಾರ ಅಡೂರು ಉಮೇಶ್ ನ್ಯಾಕ್‌ಗೆ ಅಭಿಮಾನಿಗಳಿಂದ ಸನ್ಮಾನ

ಕಾಸರಗೋಡು: ಹಿರಿಯ ನ್ಯಾಯವಾದಿ, ಕನ್ನಡ ಹೋರಾಟಗಾರ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದ ಮುಂಚೂಣಿ ವ್ಯಕ್ತಿತ್ವ ಅಡೂರು ಉಮೇಶ್ ನ್ಯಾಕ್ ಅವರಿಗೆ ಅವರ ಅಭಿಮಾನಿಗಳು ನಿವಾಸಕ್ಕೆ ಭೇಟಿ ನೀಡಿ ಶಾಲು ಹೊದಿಸಿ, ಫಲಪುಷ್ಪ ನೀಡಿ, ಪೇಟ ತೊಡಿಸಿ ಗೌರವ ಸಮರ್ಪಿಸಿದರು. ಹಿರಿಯ ನ್ಯಾಯವಾದಿ ಹಾಗೂ ಹರಿದಾಸ ಮಹಾಬಲ ಶೆಟ್ಟಿ ಮತ್ತು ನಿವೃತ್ತ ಕಸ್ಟಮ್ಸ್ ಅಧಿಕಾರಿ ಶುಭೋದಯ ಕೂಡ್ಲು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ಸಂಘಟಕ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಯಾಗಿ…

Read More

ಬಿಸಿರೋಡಿನಲ್ಲಿ ಹಾವಿನ ಸಾವಿನ ನೆಪದಲ್ಲಿ ಹಣ ಸಂಗ್ರಹ ಯತ್ನ? ಅನುಮಾನಗೊಂಡ ಸಾರ್ವಜನಿಕರು, ಸ್ಥಳ ತೆರವುಗೊಳಿಸಿದ ಪೊಲೀಸರು

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಸಿರೋಡು ಸರ್ಕಲ್ ಸಮೀಪ ರಸ್ತೆ ಬದಿಯಲ್ಲಿ ಮೃತಪಟ್ಟ ಹಾವಿನ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಐವರು ಅಪರಿಚಿತರು ಮುಂದಾಗಿದ್ದರೆಂಬ ಘಟನೆ ಸೋಮವಾರ ಗಮನ ಸೆಳೆಯಿತು. ಘಟನೆಯು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ತಮ್ಮನ್ನು ಮೂಡುಶೆಡ್ಡೆ ನಿವಾಸಿಗಳು ಎಂದು ಪರಿಚಯಿಸಿಕೊಂಡಿದ್ದ ಕೆಲವರು, ಜೆಸಿಬಿ ಕಾಮಗಾರಿ ವೇಳೆ ಹಾವು ಸಾವನ್ನಪ್ಪಿದೆ ಎಂದು ಹೇಳಿಕೊಂಡು, ಬಿಳಿ ಬಟ್ಟೆಯಲ್ಲಿ ಹಾವನ್ನು ಇರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ….

Read More

ಲೋಕ ಅದಾಲತ್‌ನಲ್ಲಿ ಮರು ಒಂದಾದ ದಂಪತಿ: ರಾಜಿ ಸಂಧಾನದಿಂದ ಅಂತ್ಯಗೊಂಡ ವಿಚ್ಛೇದನ ಪ್ರಕರಣ

ಬಂಟ್ವಾಳ: ದಾಂಪತ್ಯ ಜೀವನದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯೊಂದು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಡೆದ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿ ಹೊಸ ಜೀವನ ಆರಂಭಿಸಲು ನಿರ್ಧರಿಸಿದ ಹೃದಯಸ್ಪರ್ಶಿ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ. ಅವರ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಿತು. ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕೌಟುಂಬಿಕ ವಿವಾದವನ್ನು ಉಭಯ ಪಕ್ಷಗಳ ಅಭಿಪ್ರಾಯ…

Read More

ಹುಡುಗಿಯ ಮದುವೆ ವಿಚಾರಕ್ಕೆ ಸಂಬಂಧಿಸಿದ ಗಲಾಟೆ: ದೂರು–ಪ್ರತಿದೂರು ದಾಖಲು

ಕಡಬ: ಹುಡುಗಿಯೊಬ್ಬಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಡಬ ನಿವಾಸಿ ಮೋನಿಷ್ (21) ಅವರು ನೀಡಿದ ದೂರಿನ ಪ್ರಕಾರ, ಜು.10ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಡಬ ಗ್ರಾಮದ ಕಾಲೇಜು ರಸ್ತೆ ಜಂಕ್ಷನ್ ಬಳಿ ಶರತ್, ದೀಪಕ್ ಹಾಗೂ ವಿಶ್ವನಾಥ ಅವರು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ…

Read More
error: Content is protected !!