ಮಂಜೇಶ್ವರ ಎಸ್.ಎ.ಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅದ್ಧೂರಿ ಪ್ಲಸ್ ಒನ್ ಪ್ರವೇಶೋತ್ಸವ
ಮಂಜೇಶ್ವರ: ಸ್ಥಳೀಯ ಸುಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸರಕಾರಿ ಅನುದಾನಿತ ಮಂಜೇಶ್ವರ ಎಸ್.ಎ.ಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ನೂತನ ವಿದ್ಯಾರ್ಥಿಗಳಿಗಾಗಿ ‘ಪ್ಲಸ್ ಒನ್ ಪ್ರವೇಶೋತ್ಸವ’ ಸಂಭ್ರಮದಿಂದ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಅವರು ವಹಿಸಿದ್ದರು. ಸಮಾರಂಭವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರೀನಾ ಬಾಯ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು….
