ದೇಶದಲ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆಯಲ್ಲಿ ಪಾರದರ್ಶಕತೆ ತರಬೇಕೆಂಬ ಸಂಸದ ಕ್ಯಾ. ಚೌಟ ಪತ್ರಕ್ಕೆ ಸ್ಪಂದನೆ
ಅಂಗಾಂಗ ಕಸಿ ಅಂಕಿ-ಅಂಶ ಬಹಿರಂಗಪಡಿಸಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದ NOTTO ಸಂಸ್ಥೆ ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದ ಬೆನ್ನಲ್ಲೇ ದೇಶದಲ್ಲಿ ವಿಶೇಷವಾಗಿ ಮೂತ್ರಪಿಂಡ(ಕಿಡ್ನಿ) ಕಸಿ ಸೇರಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳ ಯಶಸ್ವಿನ ಪ್ರಮಾಣ, ಮೂತ್ರಪಿಂಡ ಕಸಿ ವೈಫಲ್ಯ, ದೀರ್ಘಕಾಲಿಕ ಪರಿಣಾಮ ಹಾಗೂ ಸಾವಿನ ಪ್ರಮಾಣದ ಬಗ್ಗೆ ದೇಶದ ಸಂಬಂಧಪಟ್ಟ ಎಲ್ಲ ಆಸ್ಪತ್ರೆಗಳು ಮಾಹಿತಿ ಒದಗಿಸಬೇಕೆಂದು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(National…
