ಕೆವಿನ್ ಮಿಸ್ಕಿತ್ ಸಂಗೀತ ರಸಮಂಜರಿಗೆ ಅಭೂತಪೂರ್ವ ಸ್ಪಂದನೆ: ಸ್ನೇಹಾಲಯ ಟ್ರಸ್ಟ್‌ಗೆ ಬೆಂಬಲದ ಮಹಾ ಸಂಗೀತ ಸಂಭ್ರಮ
2009 ರಲ್ಲಿ ಆರಂಭವಾದಾಗಿನಿಂದ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮಂಗಳೂರಿನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ರಕ್ಷಿಸಿ , ಆರೈಕೆ ಮಾಡಿ, ಗುಣಪಡಿಸಿ, ಪುನರ್ವಸತಿ ಕಲ್ಪಿಸುವ ಮೂಲಕ ಅವರಿಗೆ ಹೊಸ ಜೀವನವನ್ನು ನೀಡುವ ಕಾಯಕಕ್ಕೆ ಸಮರ್ಪಿತವಾಗಿದೆ. ಕಳೆದ 17 ವರ್ಷಗಳಲ್ಲಿ, ಸಂಸ್ಥೆಯು 1,800 ಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿ ಮತ್ತು ಅವರ ಕುಟುಂಬಗಳಿಗೆ ಮರಳಿ ಮತ್ತೆ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ಮಾನಸಿಕ ಅಸ್ವಸ್ಥೆಯ ಆರೋಗ್ಯ ಉಪಕ್ರಮಗಳ ಜೊತೆಗೆ, ಸ್ನೇಹಾಲಯವು ಕಳೆದ ಎರಡು ವರ್ಷಗಳಲ್ಲಿ ಸಮುದಾಯದಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪಿಸಿ…
